ಬೆಂಗಳೂರು: ರಾಜ್ಯ ಸರ್ಕಾರದಿಂದ 2019-20 ರ ಬಿಬಿಎಂಪಿ ಬಜೆಟ್ ತಡೆಯಾಗಿರುವ ಹಿನ್ನೆಲೆ ಬೆಂಗಳೂರಿನಲ್ಲಿ ಗಣೇಶ ನಿಮಜ್ಜನಕ್ಕೂ ವಿಘ್ನ ಎದುರಾಗಿದೆ. ಸೆ. 2 ರ ಗಣೇಶ ಚತುರ್ಥಿಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಪಾಲಿಕೆ ಮಾಡಬೇಕಾದ ಅಗತ್ಯ ಸಿದ್ಧತೆಗಳೇ ಪೂರ್ಣಗೊಂಡಿಲ್ಲ.
ಗಣೇಶ ಹಬ್ಬ ಹತ್ತಿರ ಬಂದ್ರೂ ಗಣೇಶ ನಿಮಜ್ಜನಕ್ಕೆ ಬೇಕಾದ ತಂಡಗಳಿಗೆ ಟೆಂಡರ್ ಕರೆದು, ವರ್ಕ್ ಆರ್ಡರ್ ನೀಡಲು ಪಾಲಿಕೆಗೆ ಸಾಧ್ಯವಾಗುತ್ತಿಲ್ಲ. ಕಳೆದ 10 ದಿನಗಳಿಂದ ಸರ್ಕಾರದ ಆನ್ಲೈನ್ ಟೆಂಡರ್ ವ್ಯವಸ್ಥೆ ಸಮಸ್ಯೆಯಾಗಿದೆ. ಇ-ಪ್ರಕ್ಯೂರ್ಮೆಂಟ್ ಮೂಲಕ ಬಿಬಿಎಂಪಿ ಟೆಂಡರ್ ಆಹ್ವಾನಿಸಲಾಗಿತ್ತು. ಆದರೆ ಅದು ಪೂರ್ಣಗೊಳ್ಳುತ್ತಿಲ್ಲ. ಪ್ರತಿವರ್ಷ ಹಬ್ಬಕ್ಕೂ ಒಂದು ತಿಂಗಳ ಮೊದಲೇ ಟೆಂಡರ್ ಪ್ರಕ್ರಿಯೆ ಮುಗಿಯುತ್ತಿತ್ತು. ಟೆಂಡರ್ ಪಡೆದವರು ಗಣೇಶ ನಿಮಜ್ಜನ ವ್ಯವಸ್ಥೆ, ವಿಲೇವಾರಿ ಮಾಡುತ್ತಿದ್ದರು. ಆದರೆ ಈ ಬಾರಿ ಅದು ಸಾಧ್ಯವಾಗುತ್ತಿಲ್ಲ.