ಕರ್ನಾಟಕ

karnataka

ETV Bharat / state

ಬಿಬಿಎಂಪಿ ಟಿಡಿಆರ್ ಹಗರಣ: ತನಿಖೆ ಕೈಗೆತ್ತಿಕೊಂಡ ಎಸಿಬಿ ಎಸ್ಪಿ ‌ಜಿನೇಂದ್ರ ಖಣಗಾವಿ‌ - ಟಿಡಿಆರ್ ಹಗರಣ

ಬಿಬಿಎಂಪಿ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಟಿಡಿಆರ್ ಪ್ರಕರಣವನ್ನ ಡಿವೈಎಸ್ಪಿ ರವಿಕುಮಾರ್ ತನಿಖೆ ಮಾಡಿ ಬಹಳಷ್ಟು ರೋಚಕ ಕಹಾನಿಯನ್ನು ಬೆಳಕಿಗೆ ತಂದಿದ್ದರು. ಆದರೆ ರವಿಕುಮಾರ್ ವರ್ಗಾವಣೆ ನಂತರ ಪ್ರಕರಣ ಐಒ ಇಲ್ಲದೆ ಹಾಗೆ ಉಳಿದಿತ್ತು. ‌ಸದ್ಯ ಪ್ರಕರಣವನ್ನ ಕೈಗೆತ್ತಿಕೊಂಡ ಎಸಿಬಿ ಎಸ್ಪಿ ‌ಜಿನೇಂದ್ರ ಖಣಗಾವಿ‌ ನೇತೃತ್ವದ ತಂಡ ಸ್ಥಳ ಪರಿಶೀಲನೆಗೆ ನಡೆಸಿದರು.

ಬಿಬಿಎಂಪಿ ಟಿಡಿಆರ್ ಹಗರಣ

By

Published : Oct 18, 2019, 2:46 PM IST

ಬೆಂಗಳೂರು: ಬಿಬಿಎಂಪಿ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಟಿಡಿಆರ್ ಪ್ರಕರಣವನ್ನು ಡಿವೈಎಸ್ಪಿ ರವಿಕುಮಾರ್ ತನಿಖೆ ಮಾಡಿ ಬಹಳಷ್ಟು ರೋಚಕ ಕಹಾನಿಯನ್ನು ಬೆಳಕಿಗೆ ತಂದಿದ್ದರು. ಆದರೆ ರವಿಕುಮಾರ್ ವರ್ಗಾವಣೆ ನಂತರ ಪ್ರಕರಣ ಐಒ ಇಲ್ಲದೆ ಹಾಗೆಯೇ ಉಳಿದಿತ್ತು. ‌ಸದ್ಯ ಪ್ರಕರಣ ಕೈಗೆತ್ತಿಕೊಂಡ ಎಸಿಬಿ ಎಸ್ಪಿ ‌ಜಿನೇಂದ್ರ ಖಣಗಾವಿ‌ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿತು.

ಬಿಬಿಎಂಪಿ ಟಿಡಿಆರ್ ಹಗರಣ

ಬಿಬಿಎಂಪಿ ಅಧಿಕಾರಿಗಳು ಬಹು‌ಕೋಟಿ ಟಿಡಿಆರ್ ಹಗರಣದಲ್ಲಿ ಭಾಗಿಯಾಗಿದ್ದು, ಸದ್ಯ ಎಸಿಬಿ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.

ಪ್ರಕರಣದ ಪ್ರಮುಖ ಆರೋಪಿ ಕೃಷ್ಣಲಾಲ್ ಅವರ ಜಾಮೀನು ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದ ಹಿನ್ನಲೆ ತಲೆಮರೆಸಿಕೊಂಡಿದ್ದಾರೆ.

ABOUT THE AUTHOR

...view details