ಕರ್ನಾಟಕ

karnataka

ETV Bharat / state

COVID 3ನೇ ಅಲೆ ತಡೆಯಲು ಪಾಲಿಕೆಯಿಂದ ಮನೆ ಮನೆ ಕೋವಿಡ್ ಪರೀಕ್ಷೆ - ಕೋವಿಡ್​ 19 3ನೇ ಅಲೆ

ನಗರದ ಯಲಹಂಕ ವಿಧಾನಸಭಾ ವ್ಯಾಪ್ತಿಯ ವಾರ್ಡ್ ಕುವೆಂಪು ನಗರದ ಸಿಂಗಾಪುರ, ಶ್ರೀನಿಧಿ ಮತ್ತು ಸೋಮಣ್ಣ ಬಡಾವಣೆಗಳಲ್ಲಿ ಕೋವಿಡ್ ಪರೀಕ್ಷೆಯನ್ನು ಮನೆ ಮನೆ ಸಮೀಕ್ಷೆಯನ್ನು ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ, ವೈದ್ಯರು, ಆಶಾ ಕಾರ್ಯಕರ್ತೆಯರು ಶುಕ್ರವಾರ ಕೈಗೊಂಡರು .

door to door COVID test campaign
ಬಿಬಿಎಂಪಿಯಿಂದ ಕೋವಿಡ್ ಪರೀಕ್ಷೆ

By

Published : Jul 31, 2021, 5:01 AM IST

ಬೆಂಗಳೂರು: ಮೂರನೆಯ ಕೋವಿಡ್​ 19 ಅಲೆಯನ್ನು ತಡೆಗಟ್ಟಲು ತಯಾರಿ ಎನ್ನುವಂತೆ ಪಾಲಿಕೆಯಿಂದ ಮನೆ ಮನೆ ಕೋವಿಡ್ ಪರೀಕ್ಷೆಯನ್ನು ನಗರದಲ್ಲಿ ನೆಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಸೋಂಕು ದೃಢಪಡುವ ಮನೆಗಳನ್ನು ಸೀಲ್ ಡೌನ್ ಮಾಡಲಾಗುತ್ತಿದೆ.

ನಗರದ ಯಲಹಂಕ ವಿಧಾನಸಭಾ ವ್ಯಾಪ್ತಿಯ ವಾರ್ಡ್ ಕುವೆಂಪು ನಗರದ ಸಿಂಗಾಪುರ, ಶ್ರೀನಿಧಿ ಮತ್ತು ಸೋಮಣ್ಣ ಬಡಾವಣೆಗಳಲ್ಲಿ ಕೋವಿಡ್ ಪರೀಕ್ಷೆಯನ್ನು ಮನೆ ಮನೆ ಸಮೀಕ್ಷೆಯನ್ನು ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ, ವೈದ್ಯರು, ಆಶಾ ಕಾರ್ಯಕರ್ತೆಯರು ಶುಕ್ರವಾರ ಕೈಗೊಂಡರು .

ಪಾಲಿಕೆ ಯಲಹಂಕ ವಲಯ ವ್ಯಾಪ್ತಿಯ ಅರೋಗ್ಯಾಧಿಕಾರಿಗಳು, ಉಪ ಆರೋಗ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಕರ ತಂಡ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಜನರಲ್ಲಿ ಕೋವಿಡ್ ಬಗ್ಗೆ ಅರಿವು ಮೂಡಿಸಯಿತು.

ಸೀಲ್​ ಡೌನ್ ಮಾಡಲಾದ ಮನೆ
ವಾರ್ಡ್ ವ್ಯಾಪ್ತಿಯಲ್ಲಿ ಒಟ್ಟು 20 ಜನರಿಗೆ ಕೋವಿಡ್ ಸೋಂಕು ಧೃಢಪಟ್ಟಿದ್ದು, ಸಂಭಂದಪಟ್ಟ ಸ್ಥಳಗಳಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಗರ್ಭಿಣಿಯರಿಗೆ , 60 ವರ್ಷ ಮೇಲ್ಪಟ್ಟವರಿಗೆ ಮತ್ತು ಕಾಯಿಲೆ ಇರುವ ಜನರೆನ್ನು ಪರೀಕ್ಷೆಗೆ ಒಳಪಡಿಸಿದರು. ಕೋವಿಡ್ ದೃಢಪಟ್ಟಿರುವ ಮನೆಗಳಿಗೆ ವೈದ್ಯರು ಹಾಗೂ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತ ವ್ಯಕ್ತಿಗಳಿಗೆ ಪರೀಕ್ಷೆ ನಡೆಸಿದರು. ಕೋವಿಡ್ ಸೋಂಕು ದೃಢಪಟ್ಟಿರುವ ಮನೆಗಳನ್ನು ಸೀಲ್ ಡೌನ್ ಮಾಡಿ ಪ್ರದೇಶದಲ್ಲಿ ಸೋಡಿಯಂ ಹೈಪೋಕ್ಲೋರೈಡ್ ದ್ರಾವಣವನ್ನು ಸಿಂಪಡಿಸಲಾಗಿದೆ.

ABOUT THE AUTHOR

...view details