ಬೆಂಗಳೂರು:ನಗರದ ಕಾಕ್ಸ್ ಟೌನ್ ಪ್ರದೇಶದಲ್ಲಿ 48 ಬೀದಿನಾಯಿಗಳನ್ನು ಹಿಡಿದು ಇಂದು ಸಂತಾನಹರಣ ಚಿಕಿತ್ಸೆ ಮಾಡಲಾಯಿತು.
ಬೀದಿನಾಯಿ ಕಾಟ ನಿಯಂತ್ರಣಕ್ಕೆ ಬಿಬಿಎಂಪಿಯಿಂದ ಸಂತಾನಹರಣ ಚಿಕಿತ್ಸೆ - ಪಾಲಿಕೆಯ ಎಲ್ಲಾ ವಲಯಗಳಲ್ಲಿ ಬೀದಿನಾಯಿಗಳ ಸಂತಾನಹರಣ
ಬೆಂಗಳೂರಿನಲ್ಲಿ ಬೀದಿ ನಾಯಿ ದಾಳಿ ಬಗ್ಗೆ ಹಲವಾರು ಪ್ರಕರಣಗಳು ಸಂಭವಿಸಿದ ಬಳಿಕ ಬಿಬಿಎಂಪಿ ಕಡೆಗೂ ಎಚ್ಚೆತ್ತುಕೊಂಡಿದ್ದು, ನಾಯಿಗಳಿಗೆ ಸಂತಾನಹರಣ ಚಿಕಿತ್ಸೆಗೆ ಮುಂದಾಗಿದೆ.
![ಬೀದಿನಾಯಿ ಕಾಟ ನಿಯಂತ್ರಣಕ್ಕೆ ಬಿಬಿಎಂಪಿಯಿಂದ ಸಂತಾನಹರಣ ಚಿಕಿತ್ಸೆ ಬಿಬಿಎಂಪಿ](https://etvbharatimages.akamaized.net/etvbharat/prod-images/768-512-6107848-thumbnail-3x2-fdsah.jpg)
ಬಿಬಿಎಂಪಿ
ಪಾಲಿಕೆಯ ಎಲ್ಲಾ ವಲಯಗಳಲ್ಲಿ ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆಯನ್ನು ಒಂದೊಂದು ಎನ್ಜಿಒ ಮುಖಾಂತರ ಮಾಡಿಸಲಾಗ್ತಿದೆ. ಚಿಕಿತ್ಸೆ ಬಳಿಕ ಅವುಗಳ ಸ್ಥಳಕ್ಕೆ ಬಿಡಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತರಾದ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದರು.
ನಾಯಿಗಳ ಸಂತಾನಹರಣ ಚಿಕಿತ್ಸೆ ಕುರಿತು ತಿಳಿಸಿದ ಬಿ.ಹೆಚ್ ಅನಿಲ್ ಕುಮಾರ್
ಇನ್ನು ಈ ಕುರಿತು ಟ್ವೀಟ್ ಮಾಡಿರುವ ಅವರು, ಬೀದಿ ನಾಯಿಗಳ ನಿಯಂತ್ರಣಕ್ಕೆ ಬಿಬಿಎಂಪಿ ಶ್ರಮಿಸುತ್ತಿದೆ. ಎಲ್ಲೆಡೆ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಮಾಡಲಾಗುತ್ತಿದೆ. ಇಂದು ಕಾಕ್ಸ್ ಟೌನ್ ಪ್ರದೇಶದಲ್ಲಿ 48 ನಾಯಿಗಳಿಗೆ ವ್ಯಾಕ್ಸಿನೇಷನ್ ಮಾಡಲಾಗಿದೆ ಎಂದು ತಿಳಿಸಿದರು.