ಬೆಂಗಳೂರು: 3 ಬಾರಿ ಮುಂದೂಡಲ್ಪಟ್ಟು, ಸಾಕಷ್ಟು ದುಂದು ವೆಚ್ಚಕ್ಕೆ ಕಾರಣವಾಗಿದ್ದ ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ 4ನೇ ಬಾರಿ ನಡೆಯಿತಾದರೂ, ಇಬ್ಬರು ಸದಸ್ಯರ ಆಯ್ಕೆ ಬಾಕಿ ಉಳಿದಿದೆ.
ಸ್ಥಾಯಿ ಸಮಿತಿಯ ಎರಡು ಸದಸ್ಯರ ಸ್ಥಾನಕ್ಕೆ ಮತ್ತೆ ಚುನಾವಣೆ! - ಬಿಬಿಎಂಪಿ ಎಲೆಕ್ಷನ್ ಸುದ್ದಿ
3 ಬಾರಿ ಮುಂದೂಡಲ್ಪಟ್ಟು, ಸಾಕಷ್ಟು ದುಂದು ವೆಚ್ಚಕ್ಕೆ ಕಾರಣವಾಗಿದ್ದ ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ 4ನೇ ಬಾರಿ ನಡೆಯಿತಾದರೂ, ಇಬ್ಬರು ಸದಸ್ಯರ ಆಯ್ಕೆ ಬಾಕಿ ಉಳಿದಿದೆ.
ಲೆಕ್ಕಪತ್ರ ಸ್ಥಾಯಿ ಸಮಿತಿ ಹಾಗೂ ತೋಟಗಾರಿಗೆ ಸ್ಥಾಯಿ ಸಮಿತಿಯಲ್ಲಿ ತಲಾ ಹತ್ತು ಸದಸ್ಯರಿದ್ದಾರೆ. ಒಂದೊಂದು ಸದಸ್ಯರ ಚುನಾವಣೆ ಬಾಕಿ ಇದೆ. ಹೀಗಾಗಿ ಫೆಬ್ರವರಿ 10ನೇ ದಿನಾಂಕಕ್ಕೆ ಈ ಎರಡೂ ಸ್ಥಾಯಿ ಸಮಿತಿಗಳಿಗೆ ಒಂದೊಂದು ಸದಸ್ಯರನ್ನು ಚುನಾಯಿಸಲು ಚುನಾವಣಾ ಸಭೆ ಕರೆಯಲಾಗಿತ್ತು.
ಬಿಬಿಎಂಪಿಯಲ್ಲಿ ಒಟ್ಟು ಹನ್ನೆರಡು ಸ್ಥಾಯಿ ಸಮಿತಿಗಳಿದ್ದು, ಪ್ರತಿಯೊಂದಕ್ಕೂ ಹನ್ನೊಂದು ಸದಸ್ಯರು ಇರಬೇಕು. ಹೀಗಾಗಿ ಕಡಿಮೆ ಇರುವ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಚುನಾಯಿಸಲು ಪ್ರಾದೇಶಿಕ ಚುನಾವಣಾ ಆಯುಕ್ತ ಎನ್.ವಿ.ಪ್ರಸಾದ್ ನೇತೃತ್ವದಲ್ಲಿ 11-30 ಕ್ಕೆ ಈ ಚುನಾವಣೆ ನಡೆಯಲಿದೆ ಎಂದು ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ.