ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಕಟ್ಟಡ ಕುಸಿತ ಪ್ರಕರಣ ಹೆಚ್ಚಾಗುತ್ತಿವೆ. ಈ ಅವಘಡಗಳು ಪುನರಾವರ್ತನೆಯಾಗದಂತೆ ತಡೆಯಲು ಬಿಬಿಎಂಪಿ ಆಯುಕ್ತರಾದ ಬಿ.ಹೆಚ್. ಅನಿಲ್ ಕುಮಾರ್, ಕಟ್ಟಡಗಳ ಸುರಕ್ಷತೆ ತಪಾಸಣೆಗೆ ಪ್ರತ್ಯೇಕ ತಂಡ ರಚನೆಗೆ ಸೂಚನೆ ನೀಡಿದ್ದಾರೆ.
ಕಟ್ಟಡ ಸುರಕ್ಷತೆ ನಿರ್ಲಕ್ಷಿಸಿದರೆ ಬಿಬಿಎಂಪಿಯಿಂದಲೇ ನೆಲಸಮ.. ಖಡಕ್ ಎಚ್ಚರಿಕೆ ನೀಡಿದ ಆಯುಕ್ತ - ಬಿಬಿಎಂಪಿ ಆಯುಕ್ತ
ರಾಜಧಾನಿ ಬೆಂಗಳೂರಿನಲ್ಲಿ ಕಟ್ಟಡಗಳ ಕುಸಿತ ಪ್ರಕರಣಗಳು ಹೆಚ್ಚುತ್ತಿವೆ. ಈ ಅವಘಡಗಳು ಪುನರಾವರ್ತನೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಬಿಬಿಎಂಪಿಯಿಂದ ಆಯುಕ್ತರು ಪ್ರತ್ಯೇಕ ತಂಡ ರಚನೆಗೆ ಸೂಚನೆ ನೀಡಿದ್ದಾರೆ.
ಕಟ್ಟಡ ಕುಸಿತ ಪ್ರಕರಣ
ಜೆಪಿ ನಗರದ ವಿವೇಕಾನಂದ ಕಾಲೋನಿಯ ಬಳಿ ಮೂರು ಅಂತಸ್ತಿನ ಕಟ್ಟಡ ಕುಸಿತವಾದ ಹಿನ್ನಲೆ ಆಯುಕ್ತರು ಇಂದು ಸ್ಥಳ ಪರಿಶೀಲನೆ ನಡೆಸಿದರು. ಕೂಡಲೇ ಎಲ್ಲಾ ವಲಯಗಳಲ್ಲಿ ಲ್ರತ್ಯೇಕ ತಂಡ ರಚಿಸಿ ಅವಧಿ ಮೀರಿದ ಕಟ್ಟಡಗಳ ತಪಾಸಣೆ ನಡೆಸಿ, ವರದಜ ನೀಡುವಂತೆ ಹಾಗೂ ಭಾಗಶಃ ಕುಸಿತ ಕಂಡ ಕಟ್ಟಡಗಳು ಇವುಗಳ ಮಾಲೀಕರಿಗೆ ಸೂಚನೆ ನೀಡಿ, ವರದಿ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮಾಲೀಕರಿಗೆ ಮಾಹಿತಿ ನೀಡಿದ ಬಳಿಕವೂ ತೆರವು ಮಾಡದಿದ್ದರೆ ಬಿಬಿಎಂಪಿಯಿಂದಲೇ ತೆರವು ಮಾಡಲಾಗುವುದು ಎಂದು ಆಯುಕ್ತರು ಸೂಚಿಸಿದ್ದಾರೆ.