ಕರ್ನಾಟಕ

karnataka

ETV Bharat / state

ಪ್ರತ್ಯೇಕ ಹಸಿ ಕಸ ಕುರಿತಂತೆ ಬಿಬಿಎಂಪಿ 2ನೇ ಸಭೆ : ಟೆಂಡರ್ ಜಾರಿಗೆ ಪಾಲಿಕೆ ಸಮ್ಮತಿ - Bangalore BBMP

ಮೇಯರ್ ಗೌತಮ್ ಕುಮಾರ್ ಹಾಗೂ ಆಯುಕ್ತರು ಸಭೆ ನಡೆಸಿದ್ದು, ಹಸಿ ಕಸ ಮಾತ್ರ ಸಂಗ್ರಹ ಮಾಡುವ ಪ್ರತ್ಯೇಕ ಟೆಂಡರ್ ಜಾರಿಗೆ ಬಿಬಿಎಂಪಿ ಸಮ್ಮತಿ ನೀಡಿದೆ.

BBMP Meeting
BBMP Meeting

By

Published : Aug 8, 2020, 10:12 AM IST

ಬೆಂಗಳೂರು:ಮನೆಗಳಿಂದ ನಿತ್ಯ ಹಸಿ ಕಸ ಮಾತ್ರ ಸಂಗ್ರಹ ಮಾಡುವ ಪ್ರತ್ಯೇಕ ಟೆಂಡರ್ ಜಾರಿಗೆ ಬಿಬಿಎಂಪಿ ಸಮ್ಮತಿ ನೀಡಿದೆ.

ಹೈಕೋರ್ಟ್​​ನಲ್ಲಿ ಕಸ ವಿಲೇವಾರಿ ಸಂಬಂಧ ಆಗಸ್ಟ್12 ರಂದು ವಿಚಾರಣೆ ನಡೆಯಲಿದ್ದು, ನ್ಯಾಯಾಂಗ ನಿಂದನೆಯಾಗಬಾರದೆಂಬ ಕಾರಣಕ್ಕೆ ತಕ್ಷಣದಲ್ಲೇ 45 ವಾರ್ಡ್​​ಗಳಲ್ಲಿ ಟೆಂಡರ್​​​ದಾರರಿಗೆ ಕಾರ್ಯಾದೇಶ ನೀಡಲು ಮೇಯರ್ ಗೌತಮ್ ಕುಮಾರ್ ಹಾಗೂ ಆಯುಕ್ತರು ನಡೆಸಿದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ಇನ್ನು 105 ವಾರ್ಡ್​​ಗಳಲ್ಲಿ ಬಿಡ್ ದಾರರನ್ನು ಗುರುತಿಸಿ ಕಾರ್ಯಾದೇಶ ನೀಡುವುದು ಬಾಕಿ ಇತ್ತು. ಈ ಮಧ್ಯೆ ಮೇಯರ್ ಇಂದೋರ್ ಮಾದರಿಯ ಪ್ರಾಯೋಗಿಕ ಯೋಜನೆ ಜಾರಿಗೆ ಪ್ರಯತ್ನಿಸಿದ್ದರಿಂದ ಕಸ ವಿಲೇವಾರಿ ಯೋಜನೆ ಜಾರಿಯಾಗುವುದು ವಿಳಂಬವಾಗಿತ್ತು. ನಂತರ ಗುತ್ತಿಗೆದಾರರು ಕೋರ್ಟ್ ಮೆಟ್ಟಿಲೇರಿದ್ದರಿಂದ ಪಾಲಿಕೆಗೆ ಕೋರ್ಟ್ ಚಾಟಿ ಬೀಸಿದ್ದು, ಇದೀಗ ಟೆಂಡರ್ ಜಾರಿಗೆ ಪಾಲಿಕೆ ಕ್ರಮ ಕೈಗೊಂಡಿದೆ. 105 ವಾರ್ಡ್ ಗಳ ಗುತ್ತಿಗೆ ವಿಚಾರವೂ ಆಗಸ್ಟ್ 10ಕ್ಕೆ ನಡೆಯುವ ಕೌನ್ಸಿಲ್ ಮುಂದೆ ಬರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details