ಕರ್ನಾಟಕ

karnataka

ETV Bharat / state

ಎಸ್‍ಎಸ್‍ಎಲ್‍ಸಿಯಲ್ಲಿ ಶೇ.50% ರಷ್ಟು ಸಾಧನೆ ಮಾಡಿದ ಬಿಬಿಎಂಪಿ ಶಾಲೆಗಳು! - ಎಸ್​ಎಸ್​ಎಲ್​ಸಿ ಫಲಿತಾಂಶ

10ನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, ಬೆಂಗಳೂರಿನಲ್ಲಿರುವ ಬಿಬಿಎಂಪಿ ಶಾಲೆಗಳು ಈ ಸಲ ಉತ್ತಮ ಫಲಿತಾಂಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ.

BBMP Schools
BBMP Schools

By

Published : Aug 11, 2020, 3:57 AM IST

ಬೆಂಗಳೂರು:ಎಸ್ಎಸ್ಎಲ್​ಸಿ ಫಲಿತಾಂಶ ಹೊರಬಿದ್ದಿದ್ದು, ರಾಜ್ಯದಲ್ಲಿ ಶೇ.71%ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರ ಮಧ್ಯೆ ಬೆಂಗಳೂರಿನಲ್ಲಿರುವ 32 ಬಿಬಿಎಂಪಿ ಪ್ರೌಢಶಾಲೆಗಳ 1,525 ವಿದ್ಯಾರ್ಥಿಗಳು 2019-20ನೇ ಸಾಲಿನ ಎಸ್‍ಎಸ್‍ಎಲ್‍ಸಿಪರೀಕ್ಷೆಗೆಹಾಜರಾಗಿದ್ದು ಇದರಲ್ಲಿ 776 ವಿದ್ಯಾರ್ಥಿಗಳು ಪಾಸ್​ ಆಗಿದ್ದಾರೆ.

ಈ ಮೂಲಕ ಶೇ.50.10 ಫಲಿತಾಂಶ ಬಂದಿದೆ. ಅದರಲ್ಲಿ 35 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.ಕಳೆದ ವರ್ಷ ಶೇ.52 ರಷ್ಟು ಫಲಿತಾಂಶ ಬಂದಿತ್ತು.

ಅಲ್ಲದೆ 22 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಗಳಿಸಿದ್ದರು‌.ಇನ್ನು ಹೇರೋಹಳ್ಳಿ ಪ್ರೌಢಶಾಲೆಯ 102 ವಿದ್ಯಾರ್ಥಿಗಳಲ್ಲಿ 94 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.92.16ಫಲಿತಾಂಶ ಬಂದಿದೆ. ಶ್ರೀರಾಂಪುರ ಪ್ರೌಢ ಶಾಲೆಯ 90 ವಿದ್ಯಾರ್ಥಿಗಳಲ್ಲಿ 68 ಮಕ್ಕಳು ಉತ್ತೀರ್ಣರಾಗಿದ್ದು, ಶೇ.75.56 ಫಲಿತಾಂಶ ಬಂದಿದೆ. ಅದರೆ ಪಾಲಿಕೆಯ ಎರಡು ಶಾಲೆಗಳಲ್ಲಿ ಮಾತ್ರ ಶೂನ್ಯ ಫಲಿತಾಂಶ ಬಂದಿದೆ ಎಂದು ಬಿಬಿಎಂಪಿಯ ಶಿಕ್ಷಣ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details