ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯ ದಿನಸಿ ಅಂಗಡಿ, ಸೂಪರ್ ಮಾರ್ಕೆಟ್ಗಳನ್ನು ಯಾವುದೇ ಕಾರಣಕ್ಕೂ ಬಂದ್ ಮಾಡುವಂತೆ ಆದೇಶಿಸುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಬಿಬಿಎಂಪಿ ಕಚೇರಿಯಲ್ಲಿ ಕೊರೊನಾ ವೈರಸ್ ವಾರ್ ರೂಮ್ ಉದ್ಘಾಟಿಸಿದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಿನಸಿ ಅಂಗಡಿಗಳು, ಸೂಪರ್ ಮಾರ್ಕೆಟ್ಗಳು, ರಸೆಲ್ ಮಾರ್ಕೆಟ್ ಹಾಗೂ ಕೆ ಆರ್ ಮಾರ್ಕೆಟ್ ಬಂದ್ ಮಾಡಲು ಮುಂದಾಗಿಲ್ಲ. ಒಂದು ವೇಳೆ ನಾವು ಮಾರ್ಕೆಟ್ಗಳನ್ನು ಮುಚ್ಚಿದರೆ ಅಗತ್ಯ ವಸ್ತುಗಳ ಅಭಾವ ಉಂಟಾಗುತ್ತದೆ. ಆಹಾರ ಪದಾರ್ಥಗಳ ಸರಬರಾಜಿನಲ್ಲಿ ಜನರಿಗೆ ಯಾವುದೇ ರೀತಿಯ ತೊಂದರೆ ಆಗಬಾದರದೆಂಬ ಉದ್ದೇಶದಿಂದ ಮಾರ್ಕೆಟ್ಗಳನ್ನು ಮುಚ್ಚುವುದಿಲ್ಲ ಎಂದು ತಿಳಿಸಿದರು.
ಮಾರ್ಕೆಟ್ಗಳು ಬಂದ್ ಆದರೆ ಹಣದುಬ್ಬರ ಹೆಚ್ಚಾಗುತ್ತದೆ. ಆದ್ದರಿಂದ ಸರ್ಕಾರ ದಿನಸಿ ಅಂಗಡಿಗಳು ಹಾಗೂ ಮಾರ್ಕೆಟ್ಗಳನ್ನು ತೆರೆದಿರುವಂತೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಮಾರ್ಕೆಟ್ಗಳನ್ನು ತೆರೆಯಲಾಗುತ್ತಿದೆ. ಮುನ್ನಚ್ಚರಿಕಾ ಕ್ರಮವಾಗಿ ವ್ಯಾಪಾರಿಗಳು ಅಂತರ ಕಾಪಾಡಿಕೊಳ್ಳುವತ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಆಯುಕ್ತರು ಹೇಳಿದ್ರು.
ಇನ್ನು ವಿದೇಶದಿಂದ ನಗರಕ್ಕೆ ಬಂದು ಹೋಮ್ ಕ್ವಾರಂಟೈನ್ನಲ್ಲಿ ಇರುವವರು ಹೊರ ಬಂದು ಓಡಾಡಿದ್ರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅವಶ್ಯಕತೆ ಇದ್ರೆ ಅವರನ್ನು ಐಸೋಲೇಸನ್ಗೆ ಹಾಕಲಾಗುತ್ತದೆ. ಒಂದು ವೇಳೆ ಹೋಮ್ ಕ್ವಾರಂಟೈನ್ ಸೀಲ್ ಹಾಕಿಸಿಕೊಂಡವರು ರಸ್ತೆಗಳಲ್ಲಿ ಕಂಡರೆ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ಅವರು ಸೂಚಿಸಿದರು.