ಬೆಂಗಳೂರು: ನವರಾತ್ರಿ ವೇಳೆ ದುರ್ಗಾ ಪೂಜೆಗೆ ಸಂಬಂಧಿಸಿದಂತೆ ಬಿಬಿಎಂಪಿ, ನಗರಕ್ಕೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ.
ದುರ್ಗಾಪೂಜೆಗೆ ಬಿಬಿಎಂಪಿ ಪ್ರತ್ಯೇಕ ಮಾರ್ಗಸೂಚಿ: ಸಾರ್ವಜನಿಕ ಸ್ಥಳಗಳಲ್ಲಿ 5 ದಿನ ಪೂಜೆಗೆ ಅವಕಾಶ
ಅಕ್ಟೋಬರ್ 11 ರಿಂದ ಅ.15 ರವರೆಗೆ ದುರ್ಗಾ ಪೂಜೆಗೆ ಅವಕಾಶ ಕೊಡುವಂತೆ ಮೈತ್ರಿ ಬಂಧನ್ ಸಮಾಜ ಮನವಿ ಮಾಡಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಅನುಮತಿ ನೀಡಿ, ಮಾರ್ಗಸೂಚಿ ಬಿಡುಗಡೆ ಮಾಡಿದೆ.
BBMP
ಅಕ್ಟೋಬರ್ 11 ರಿಂದ ಅ.15 ರವರೆಗೆ ದುರ್ಗಾ ಪೂಜೆಗೆ ಅವಕಾಶ ಕೊಡುವಂತೆ ಮೈತ್ರಿ ಬಂಧನ್ ಸಮಾಜ ಮನವಿ ಮಾಡಿದ್ದು ಬಿಬಿಎಂಪಿ ಅನುಮತಿ ನೀಡಿ, ಈ ಕೆಳಗಿನ ಮಾರ್ಗಸೂಚಿಗಳನ್ನು ಪಾಲಿಸುವಂತೆ ಹೇಳಿದೆ.
- ನಗರದಲ್ಲಿ 5 ದಿನ ದುರ್ಗಾ ಪೂಜೆಗೆ ಅವಕಾಶ
- 4 ಅಡಿ ಮೀರದಂತೆ ದುರ್ಗಾದೇವಿ ಮೂರ್ತಿ ಇರಬೇಕು
- ಮೂರ್ತಿ ಕೂರಿಸುವ ಸ್ಥಳ ಸ್ಯಾನಿಟೈಸ್ ಮಾಡಬೇಕು
- ವಾರ್ಡ್ಗೆ ಒಂದೇ ಮೂರ್ತಿ ಕೂರಿಸಲು ಅವಕಾಶವಿದ್ದು, ಜಂಟಿ ಆಯುಕ್ತರಿಂದ ಅನುಮತಿ ಪಡೆಯಬೇಕು
- ಸಾಮಾನ್ಯ ಪ್ರಾರ್ಥನೆಗೆ ಮಾತ್ರ ಅವಕಾಶ
- 50 ಜನ ಮೀರದಂತೆ ಪ್ರಾರ್ಥನೆಯಲ್ಲಿ ಭಾಗವಹಿಸಬೇಕು
- ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅಗತ್ಯ
- ಪೂಜಾ ಸ್ಥಳದಲ್ಲಿ ಹಣ್ಣು, ಹೂ, ಸಿಹಿ ವಿತರಣೆಗೆ ಅವಕಾಶವಿಲ್ಲ
- ಕೇವಲ 100 ಜನರಿಗೆ ಮಾತ್ರ ಪಾಸ್, ಅಹ್ವಾನ ಪತ್ರಿಕೆ ನೀಡಬೇಕು
- ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ
- ದಿನಕ್ಕೆ ನಾಲ್ಕು ಬಾರಿ ಕುರ್ಚಿ, ಟೇಬಲ್ಗಳಿಗೆ ಸ್ಯಾನಿಟೈಸ್ ಮಾಡಬೇಕು
- ಕೋವಿಡ್ ನಿಯಮಗಳ ಕುರಿತು ಡಿಸ್ ಪ್ಲೇ ಅಳವಡಿಸಬೇಕು
- ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು
- ಮೂರ್ತಿ ವಿಸರ್ಜನೆಗೆ ಜಂಟಿ ಆಯುಕ್ತರು ಅನುಮತಿ ನೀಡಿರುವ ಸಾರ್ವಜನಿಕ ಕೆರೆ, ಟ್ಯಾಂಕ್ನಲ್ಲಿಯೇ ಬಿಡಬೇಕು.
ಈ ಮೇಲಿನ ನಿಯಮಗಳನ್ನು ಸಂಘಟನೆಗಳು ಪಾಲಿಸದಿದ್ದಲ್ಲಿ, ಪೂಜಾ ಅನುಮತಿ ಹಿಂಪಡೆಯಲಾಗುವುದು ಎಂದು ಬಿಬಿಎಂಪಿ ಎಚ್ಚರಿಸಿದೆ.