ಕರ್ನಾಟಕ

karnataka

ETV Bharat / state

ಕೋವಿಡ್ 3ನೇ ಅಲೆ ತಡೆಯಲು ಪಾಲಿಕೆ ಸಿದ್ಧ : ಮನೆ ಮನೆಗೆ ಸಿರೋ ಸರ್ವೆ ನಡೆಸಲಿರುವ ಸಿಬ್ಬಂದಿ - ಮನೆ ಮನೆ ಸಿರೋ ಸರ್ವೆ ನಡೆಸಲಿರುವ ಸಿಬ್ಬಂದಿ

ತಜ್ಞರು ಕೊರೊನಾ 3ನೇ ಅಲೆ ಮಕ್ಕಳಿಗೆ ಬಾಧಿಸಲಿದೆ ಎಂದು ಹೇಳಿರುವುದರಿಂದ ಬಿಬಿಎಂಪಿ ಆಯುಕ್ತರಿಗೆ ಸಿರೋ ಸರ್ವೆಗೆ ಅನುಮತಿ ನೀಡಲು ಮನವಿ ಮಾಡಲಾಗಿದೆ. ಒಂದು ವೇಳೆ ಈ ವಾರದಲ್ಲಿ ಅನುಮತಿ ಸಿಕ್ಕರೆ, ಮುಂದಿನ ವಾರದಿಂದಲೇ ಸರ್ವೇ ಕಾರ್ಯ ಆರಂಭವಾಗಲಿದೆ‌..

ಪಾಲಿಕೆ
ಪಾಲಿಕೆ

By

Published : Jun 25, 2021, 10:14 PM IST

ಬೆಂಗಳೂರು: ಕೋವಿಡ್ ಮೂರನೇ ಅಲೆ ತಡೆಯಲು ಪಾಲಿಕೆ ಈಗಾಗಲೇ ಎಲ್ಲಾ ರೀತಿಯಿಂದಲೂ ಸಜ್ಜಾಗಿದೆ. ಇದೀಗ ನಗರದಲ್ಲಿ ಸಿರೋ ಸರ್ವೇ ಆರಂಭವಾಗಲಿದೆ. ವಲಯಗಳಲ್ಲಿ ಎಷ್ಟು ಮಂದಿಗೆ ಆ್ಯಂಟಿ ಬಾಡಿ ಡೆವಲಪ್ ಆಗಿದೆ.

ಎಷ್ಟು ಜನರಿಗೆ ಆ್ಯಂಟಿ ಬಾಡಿ ಡೆಪವಲ್ ಆಗಿಲ್ಲ ಅನ್ನೋದ್ರ ಕುರಿತು ಬಿಬಿಎಂಪಿ ಕಡೆಯಿಂದ ಸರ್ವೆ ನಡೆಯಲಿದೆ. ನಗರದ ಹೆಚ್ಚು ಜನಸಂದಣಿ ಹೊಂದಿರುವ ಜಾಗಗಳಾದ ಮಾರ್ಕೆಟ್, ಬಸ್, ರೈಲು ನಿಲ್ದಾಣದಲ್ಲಿ ಹಾಗೂ ಹೆಚ್ಚು ಪಾಸಿಟಿವ್ ಇರುವ ಏರಿಯಾದಲ್ಲಿ ಈ ಸರ್ವೆ ನಡೆಯಲಿದೆ.

ವಯಸ್ಸಿಗನುಗುಣವಾಗಿ ರ್ಯಾಂಡಮ್‌ ಆಗಿ ಸರ್ವೆ ನಡೆಯಲಿದೆ. ಪಾಲಿಕೆ ಸಿಬ್ಬಂದಿ ಮನೆ ಮನೆಗೆ ತೆರಳಿ ಸರ್ವೆ ನಡೆಸಲಿದ್ದಾರೆ. ಈಗಾಗಲೇ ವ್ಯಾಕ್ಸಿನ್ ಪಡೆದಿರುವವರಲ್ಲಿ ಲಸಿಕೆ ಯಾವ ರೀತಿ ಪರಿಣಾಮ ಬೀರಲಿದೆ ಅನ್ನೋದ್ರ ಬಗ್ಗೆ ತಿಳಿಯಲಿದೆ.

ತಜ್ಞರು ಕೊರೊನಾ 3ನೇ ಅಲೆ ಮಕ್ಕಳಿಗೆ ಬಾಧಿಸಲಿದೆ ಎಂದು ಹೇಳಿರುವುದರಿಂದ ಬಿಬಿಎಂಪಿ ಆಯುಕ್ತರಿಗೆ ಸಿರೋ ಸರ್ವೆಗೆ ಅನುಮತಿ ನೀಡಲು ಮನವಿ ಮಾಡಲಾಗಿದೆ. ಒಂದು ವೇಳೆ ಈ ವಾರದಲ್ಲಿ ಅನುಮತಿ ಸಿಕ್ಕರೆ, ಮುಂದಿನ ವಾರದಿಂದಲೇ ಸರ್ವೇ ಕಾರ್ಯ ಆರಂಭವಾಗಲಿದೆ‌ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ತಿಳಿಸಿದ್ದಾರೆ.

ಇದನ್ನೂ ಓದಿ:International Anti Drug Day : ₹50 ಕೋಟಿ ಮೌಲ್ಯದ ಮಾದಕ ವಸ್ತು ನಾಶಪಡಿಸಲಿರುವ ಕರ್ನಾಟಕ

ABOUT THE AUTHOR

...view details