ಕರ್ನಾಟಕ

karnataka

ETV Bharat / state

ಆಸ್ತಿ ತೆರಿಗೆ ಸಂಗ್ರಹದಲ್ಲಿ ಶೇ.60ರಷ್ಟು ಗುರಿ ತಲುಪಿದ ಬಿಬಿಎಂಪಿ!

ಬಿಬಿಎಂಪಿಯ 2019-20ನೇ ಸಾಲಿನ ಆರ್ಥಿಕ ವರ್ಷದ ಶೇ.60ರಷ್ಟು ಗುರಿ ಸಾಧನೆ ಮಾಡಲಾಗಿದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ.

ಆಸ್ತಿ ತೆರಿಗೆ ಸಂಗ್ರಹದಲ್ಲಿ ಶೇ.60 ರಷ್ಟು ಗುರಿ ತಲುಪಿದ ಬಿಬಿಎಂಪಿ..!

By

Published : Sep 21, 2019, 9:35 AM IST

ಬೆಂಗಳೂರು:ಬಿಬಿಎಂಪಿಯ 2019-20 ನೇ ಸಾಲಿನ ಆರ್ಥಿಕ ವರ್ಷದ ಶೇ.60ರಷ್ಟು ಗುರಿ ಸಾಧನೆ ಮಾಡಲಾಗಿದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ.

2019-20ನೇ ಸಾಲಿನ ಏಪ್ರಿಲ್‌ 1ರಿಂದ ಸೆಪ್ಟೆಂಬರ್‌ 15ರವರೆಗೆ 2122.68 ಕೋಟಿ ರೂ. ಸಂಗ್ರಹವಾಗಿದೆ. ಪ್ರಸಕ್ತ ಸಾಲಿನಲ್ಲಿ 3200 ಕೋಟಿ ರೂಪಾಯಿ ತೆರಿಗೆ ಸಂಗ್ರಹದ ಗುರಿ ಇಟ್ಟುಕೊಳ್ಳಲಾಗಿತ್ತು. ಇನ್ನು, ಉಳಿದ ಶೇ.40ರಷ್ಟು ಆಸ್ತಿ ತೆರಿಗೆ ಸಂಗ್ರಹಕ್ಕೂ ಮುಂದಿನ ದಿನಗಳಲ್ಲಿ ಒತ್ತು ನೀಡಿದರೆ ಶೇ.100ರಷ್ಟು ಆಸ್ತಿ ತೆರಿಗೆ ಸಂಗ್ರಹ ಗುರಿ ಮುಟ್ಟಬಹುದು ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಕ್ಕಾಗಿ ಪ್ರತಿ ಬುಧವಾರ ಕಂದಾಯ ‘ಆಂದೋಲನ ದಿನ’ ಅಭಿಯಾನ ಆರಂಭಿಸಲಾಗಿದೆ. ತೆರಿಗೆ ಹಣ ಬಾಕಿ ಉಳಿಸಿಕೊಂಡಿರುವವರ ಪಟ್ಟಿ ಸಿದ್ಧಪಡಿಸಿಕೊಂಡು, ಶೋಕಾಸ್ ನೋಟಿಸ್ ಸಹ ನೀಡಲಾಗುತ್ತಿದೆ. ಜತೆಗೆ ಕಂದಾಯ ಇಲಾಖೆಯಿಂದ ವಲಯವಾರು ಸಭೆಗಳನ್ನು ನಡೆಸಲಾಗುತ್ತಿದೆ. ಬಿ ಖಾತಾದಿಂದ ಎ ಖಾತಾ ಹಾಗೂ ಟೋಟಲ್ ಸ್ಟೇಷನ್ ಸರ್ವೆ ಯೋಜನೆಗಳಿಂದಲೂ ಬಿಬಿಎಂಪಿಯ ಆದಾಯ ಹೆಚ್ಚಾಗಲಿದೆ ಎಂದರು.

ತೆರಿಗೆ ಸಂಗ್ರಹ:
ವರ್ಷ : ತೆರಿಗೆ ಸಂಗ್ರಹ (ಕೋಟಿ ರೂ.ಗಳಲ್ಲಿ)
2013-14 1287.30
2014-15 1640.65
2015-16 1960.13
2016-17 2181.72
2017-18 2192.39
2018-19 2565.42

2019-20(ಏ.1ರಿಂದ ಸೆ.15ರವರೆಗೆ) 2122.68

ABOUT THE AUTHOR

...view details