ಕರ್ನಾಟಕ

karnataka

ETV Bharat / state

ಮಹದೇವಪುರದಲ್ಲಿ ಮುಂದುವರೆದ ಜೆಸಿಬಿ ಗರ್ಜನೆ: 4 ಅಂತಸ್ತಿನ ಕಟ್ಟಡ ನೆಲಸಮ - ದೊಡ್ಡಾನೆಕುಂದಿಯ ಫರ್ನ್ಸ್ ಸಿಟಿ ಆವರಣ

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ತೆರವು ಕಾರ್ಯಾಚರಣೆ ಮುಂದುವರಿದಿದೆ. ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದ 4 ಅಂತಸ್ತಿನ ಕಟ್ಟಡವನ್ನು ಸಂಪೂರ್ಣ ನೆಲಸಮಗೊಳಿಸುವ ಕಾರ್ಯ ನಡೆದಿದೆ.

ಜೆಸಿಬಿ
ಜೆಸಿಬಿ

By

Published : Sep 23, 2022, 10:35 PM IST

ಬೆಂಗಳೂರು: ಬಿಬಿಎಂಪಿ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಪಾಪಯ್ಯ ರೆಡ್ಡಿ ಲೇಔಟ್​ನಲ್ಲಿ 4 ಅಂತಸ್ತಿನ ಕಟ್ಟಡ, ಸರ್ಜಾಪುರ ರಸ್ತೆಯ ಗ್ರೀನ್ ವುಡ್ ರೆಸಿಡೆನ್ಸಿ ಬಳಿ ಸ್ಲ್ಯಾಬ್ ತೆರವು ಹಾಗೂ ದೊಡ್ಡಾನೆಕುಂದಿಯ ಫರ್ನ್ಸ್ ಸಿಟಿ ಆವರಣದಲ್ಲಿ ಸರ್ವೇ ಕಾರ್ಯವನ್ನು ಪಾಲಿಕೆ ಶುಕ್ರವಾರ ನಡೆಸಿದೆ.

ಪಾಪಯ್ಯ ರೆಡ್ಡಿ ಲೇಔಟ್​ನಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದ 4 ಅಂತಸ್ತಿನ ಕಟ್ಟಡ (ಗ್ರೌಂಡ್ + 4)ವನ್ನು ಸಿಬ್ಬಂದಿಯ ಮೂಲಕ ಅವಶ್ಯಕ ಸಲಕರಣೆಗಳನ್ನು ಬಳಸಿಕೊಂಡು ಸಂಪೂರ್ಣ ಕಟ್ಟಡವನ್ನು ನೆಲಸಮಗೊಳಿಸುವ ಕಾರ್ಯ ನಡೆದಿದೆ. ಸರ್ಜಾಪುರ ರಸ್ತೆಯ ಗ್ರೀನ್ ಹುಡ್ ರೆಸಿಡೆನ್ಸ್ ಬಳಿ ಮಳೆ ನೀರುಗಾಲುವೆಯ ಮೇಲೆ ಅಳವಡಿಸಿದ್ದ ಸ್ಲ್ಯಾಬ್ ತೆರವು ಕಾರ್ಯ ಪ್ರಗತಿಯಲ್ಲಿದೆ ಎಂದು ಪಾಲಿಕೆ ತಿಳಿಸಿದೆ.

ಫರ್ನ್ಸ್ ಸಿಟಿಯಲ್ಲಿ ಸರ್ವೇ ಚುರುಕು:ದೊಡ್ಡಾನೆಕುಂದಿಯ ಫರ್ನ್ಸ್ ಸಿಟಿ ಆವರಣದಲ್ಲಿ ಭೂಮಾಲೀಕರಿಂದ ಸರ್ವೇ ನಡೆಸಿ ಮಾರ್ಕಿಂಗ್ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ಸಂಪೂರ್ಣ ಸರ್ವೇ ನಡೆಸಿ ಮಾರ್ಕಿಂಗ್ ಮಾಡಿದ ನಂತರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ತಿಳಿಸಿದೆ.

ಓದಿ:ಜನಪರ ಚರ್ಚೆಗೆ ಸರ್ಕಾರ ನಮಗೆ ಅವಕಾಶವನ್ನೇ ನೀಡಲಿಲ್ಲ: ಸಿದ್ದರಾಮಯ್ಯ

ABOUT THE AUTHOR

...view details