ಕರ್ನಾಟಕ

karnataka

ETV Bharat / state

ನೆರೆಪೀಡಿತ ಉತ್ತರ ಕರ್ನಾಟಕಕ್ಕೆ ಸ್ಪಂದಿಸಿದ ಬಿಬಿಎಂಪಿ: ಸದಸ್ಯರ 1 ತಿಂಗಳ ವೇತನ ಸಿಎಂ ಪರಿಹಾರ ನಿಧಿಗೆ - bbmp latest news

ಅತಿವೃಷ್ಟಿಯಿಂದಾಗಿ ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ನೆರೆ ಪೀಡಿದ ಪ್ರದೇಶದ ಜನರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಾಯಹಸ್ತ ಚಾಚಿದೆ.

ನೆರೆಪೀಡಿತ ಉತ್ತರ ಕರ್ನಾಟಕ ಜನರಿಗೆ ಬಿಬಿಎಂಪಿಯಿಂದ ನೆರವು..!

By

Published : Aug 8, 2019, 6:14 PM IST

ಬೆಂಗಳೂರು:ಅತಿವೃಷ್ಟಿಯಿಂದಾಗಿ ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ನೆರೆ ಪೀಡಿತ ಪ್ರದೇಶದ ಜನರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಸಹಾಯಹಸ್ತ ಚಾಚಿದೆ.

ನೆರೆಪೀಡಿತ ಉತ್ತರ ಕರ್ನಾಟಕ ಜನರಿಗೆ ಬಿಬಿಎಂಪಿಯಿಂದ ನೆರವು

ಪಾಲಿಕೆಯ 198 ಸದಸ್ಯರ ಒಂದು ತಿಂಗಳ ಗೌರವ ಧನ ಸುಮಾರು 16 ಲಕ್ಷದ 80 ಸಾವಿರ ರೂಪಾಯಿಯನ್ನು ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ನೀಡುವುದಾಗಿ ಮೇಯರ್ ಗಂಗಾಂಬಿಕೆ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.

ಈ ಹಿಂದೆ ಕೊಡಗಿನಲ್ಲಿ ಅತಿವೃಷ್ಟಿ ಉಂಟಾದಾಗಲೂ ಬಿಬಿಎಂಪಿಯಿಂದ ಸಹಾಯಧನ ನೀಡಲಾಗಿತ್ತು. ಈ ಬಾರಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೂ ಪ್ರವಾಹ ಪರಿಸ್ಥಿತಿ ಉಂಟಾಗಿರುವುದರಿಂದ ಬಿಬಿಎಂಪಿ ನೆರವಿಗೆ ಮುಂದಾಗಿದೆ.

ABOUT THE AUTHOR

...view details