ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಘನ ತ್ಯಾಜ್ಯ ನಿರ್ವಹಣೆಗೆ ಬೈಲಾ ರಚನೆಗೊಂಡಿದ್ದು, ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಆಹ್ವಾನಿಸಲಾಗಿದೆ.
ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಬೈಲಾ ರಚನೆ.. ಸಾರ್ವಜನಿಕರ ಆಕ್ಷೇಪಣೆ ಸಲ್ಲಿಕೆಗೆ ಆಹ್ವಾನ - BBMP Commissioner
ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಬಿಬಿಎಂಪಿ ಬೈಲಾ ರಚನೆ ಮಾಡಿದ್ದು, ಸಾರ್ವಜನಿಕರು ಆಕ್ಷೇಪಣೆ ಸಲ್ಲಿಕೆಗೆ ಆಹ್ವಾನಿಸಿದೆ. ಸಾರ್ವಜನಿಕರು ಬೈಲಾ ನಿಯಮಗಳ ಬಗ್ಗೆ ಮೂವತ್ತು ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ನಿಯಮ ಕಾಯ್ದೆರೂಪಕ್ಕೆ ಬಂದರೆ ಕಟ್ಟುನಿಟ್ಟಾಗಿ ಜಾರಿಯಾಗಲಿದೆ.
ಘನತ್ಯಾಜ್ಯ ನಿರ್ವಹಣೆ ನಿಯಮ-2016ಕ್ಕೆ ಸುಪ್ರೀಂಕೋರ್ಟ್ ಅನುಮತಿ ಸೂಚಿಸಿದ್ದರೂ ಈವರೆಗೆ ಕಾಯ್ದೆ ರೂಪ ಬಂದಿರಲಿಲ್ಲ. ಮೂರು ವರ್ಷಗಳ ಬಳಿಕ ಇದೀಗ ಕರಡು ಬೈಲಾ ರಚನೆ ಮಾಡಿ, ಬಿಬಿಎಂಪಿ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಮೂವತ್ತು ದಿನಗಳ ಕಾಲಾವಕಾಶ ನೀಡಲಾಗಿದೆ. ಘನತ್ಯಾಜ್ಯ ನಿರ್ವಹಣೆ ನಿಯಮ ಕಾಯ್ದೆಯಾದರೆ ಕಟ್ಟುನಿಟ್ಟಾಗಿ ಜಾರಿಗೆ ತರಬಹುದಾಗಿದೆ. ಅಲ್ಲದೆ ದಂಡ ಕೂಡ ವಿಧಿಸಬಹುದಾಗಿದೆ. ಬೆಂಗಳೂರಿಗೆ ಬಿಬಿಎಂಪಿ ಹಾಗೂ ಉಳಿದ ಪಾಲಿಕೆಗಳಿಗೆ ಪೌರಾಡಳಿತ ಬೈಲಾ ರಚನೆಯಲ್ಲಿ ತೊಡಗಿದೆ. ಇದೀಗ ಬಿಬಿಎಂಪಿ ತನ್ನದೇ ಆದ ಬೈಲಾ ರಚಿಸಿದ್ದು, ಸುಮಾರು ಐವತ್ತು ಪುಟಗಳಲ್ಲಿ ಈ ನಿಯಮಗಳಿವೆ. ಯಾವ ರೀತಿ ಕಸ ನಿರ್ವಹಣೆ ಮಾಡಬೇಕು, ಎಷ್ಟು ದಂಡ ವಿಧಿಸಬೇಕು ಎಂಬ ಮಾಹಿತಿಯನ್ನು ಬೈಲಾದಲ್ಲಿ ನೀಡಲಾಗಿದೆ. ಜನರ ಸಲಹೆಯನ್ನು ಪಡೆದು ಅಂತಿಮಗೊಳಿಸಿದ ಬಳಿಕ ಸರ್ಕಾರ ಅಧಿಸೂಚನೆ ಹೊರಡಿಸಲಿದೆ ಎಂದು ಆಯುಕ್ತ ರಂದೀಪ್ ತಿಳಿಸಿದ್ದಾರೆ.