ಬೆಂಗಳೂರು :ನಗರದಲ್ಲಿ ಕೊರೊನಾ ಮೂರನೇ ಅಲೆ ಭೀತಿ ಹೆಚ್ಚಾಗಿದೆ. ಹೀಗಾಗಿ, ಈಗಾಗಲೇ 8 ಸಾವಿರ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಕೇರ್ ಸೆಂಟರ್ ಖಾಸಗಿ ಆಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಆರಂಭದಲ್ಲೇ ಭರ್ಜರಿ ಬೆಡ್ ವ್ಯವಸ್ಥೆ ಮಾಡಲಾಗಿದೆ. 4 ಸರ್ಕಾರಿ ಮೆಡಿಕಲ್ ಕಾಲೇಜು, 16 ಸರ್ಕಾರಿ ಆಸ್ಪತ್ರೆಗಳು ಸೇರಿ 160 ಕಡೆ ಹಾಸಿಗೆಗಳು ಸಿದ್ಧವಾಗಿವೆ.
ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯಕ್ಕೆ ಒಟ್ಟು 8 ಕೋವಿಡ್ ಕೇರ್ ಸೆಂಟರ್‌ಗಳು ಸಿದ್ಧವಾಗಿವೆ. ಬಿಬಿಎಂಪಿ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಒಟ್ಟು 600 ಬೆಡ್ ವ್ಯವಸ್ಥೆ ಮಾಡಿದೆ. ಜೊತೆಗೆ ಬಿಬಿಎಂಪಿ ಖಾಸಗಿ ಕ್ಷೇತ್ರದಿಂದ 6000 ಬೆಡ್‌ಗಳಿಗೆ ಬೇಡಿಕೆ ಇಟ್ಟಿದೆ.
ಪಾಲಿಕೆ ನಗರದ 140 ಖಾಸಗಿ ಆಸ್ಪತ್ರೆಗಳಲ್ಲಿ 6000 ಹಾಸಿಗೆ ಸಿದ್ಧತೆ ಮಾಡಿಕೊಂಡಿದೆ. ಇದಲ್ಲದೇ ಮೆಡಿಕಲ್ ಕಾಲೇಜು ಹಾಗೂ ಸಾಮಾನ್ಯ ಆಸ್ಪತ್ರೆ ಸೇರಿದಂತೆ 140 ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ಗಳು ರೆಡಿ ಇವೆ.
ಹೀಗೆ ಮೂರನೇ ಅಲೆಗೆ ಆರಂಭದಲ್ಲೇ 8 ಸಾವಿರ ಬೆಡ್ ವ್ಯವಸ್ಥೆ ಮಾಡಿಕೊಂಡು ಬಿಬಿಎಂಪಿ ಸಿದ್ಧಗೊಂಡಿದೆ. ಈಗಾಗಲೇ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಅಪಾರ್ಟ್ಮೆಂಟ್ಗಳಲ್ಲಿ ಕೊರೊನಾ ಸ್ಫೋಟಗೊಳ್ಳುತ್ತಿದೆ. ಈ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಪಾಲಿಕೆ ಬೆಡ್ ವ್ಯವಸ್ಥೆ ಮಾಡಿಕೊಂಡಿದೆ.
ಸರ್ಕಾರಿ ಮೆಡಿಕಲ್ ಕಾಲೇಜು ಹಾಸಿಗೆ ವ್ಯವಸ್ಥೆ :
ಜನರಲ್ ಬೆಡ್ : 20
HDU ಬೆಡ್ : 621
ICU ಬೆಡ್ : 53
ICU-V ಬೆಡ್ : 76
ಒಟ್ಟು ಬೆಡ್ : 770
ಸರ್ಕಾರಿ ಆಸ್ಪತ್ರೆಗಳ ಹಾಸಿಗೆ ವ್ಯವಸ್ಥೆ :
ಜನರಲ್ ಬೆಡ್ : 649
HDU ಬೆಡ್ : 210
ICU ಬೆಡ್ : 65
ICU-V ಬೆಡ್ : 127
ಒಟ್ಟು ಬೆಡ್ : 1,051