ಬೆಂಗಳೂರು: ಕಸ ನಿರ್ವಹಣೆ ಶುಲ್ಕ ಹೆಸರಲ್ಲಿ ಸಿಲಿಕಾನ್ ಸಿಟಿ ಜನರ ಜೇಬಿಗೆ ಕತ್ತರಿ ಬೀಳುವ ದಿನಗಳು ಹೆಚ್ಚು ದೂರವಿಲ್ಲ. ಇನ್ಮುಂದೆ ಪ್ರತೀ ತಿಂಗಳು ನೀರಿನ ಬಿಲ್, ವಿದ್ಯುತ್ ಬಿಲ್ ರೀತಿಯೇ ಕಸ ನಿರ್ವಹಣೆ ಶುಲ್ಕವೂ ಬೆಂಗಳೂರು ನಾಗರಿಕರ ಕೈ ಸುಡಲಿದೆ.
ಬಿಬಿಎಂಪಿಗೆ ಕಸ ನಿರ್ವಹಣೆ ವೆಚ್ಚ ಹೆಚ್ಚಿನ ಹೊರೆಯಾಗುತ್ತಿದ್ದು, ಇದಕ್ಕಾಗಿ ಪ್ರತೀ ಮನೆ, ವಾಣಿಜ್ಯ ಕಟ್ಟಡಗಳಿಂದ ಪ್ರತ್ಯೇಕವಾಗಿ ಪ್ರತೀ ತಿಂಗಳು ಕಸ ನಿರ್ವಹಣೆ ಶುಲ್ಕ ಸಂಗ್ರಹಣೆಗೆ ಈಗಾಗಲೇ ನಿರ್ಧರಿಸಿದೆ. ಆದರೆ ಆಸ್ತಿ ತೆರಿಗೆ ಜೊತೆ ಸಂಗ್ರಹಿಸಲು ನಿರ್ಧರಿಸಿದ್ದ ಬಿಬಿಎಂಪಿ, ಇದೀಗ ಪ್ರತೀ ತಿಂಗಳು ವಿದ್ಯುತ್ ಬಿಲ್ ಜೊತೆಗೆ ಕಸದ ಶುಲ್ಕ ಸಂಗ್ರಹಿಸುವ ಪ್ರಸ್ತಾವನೆಯನ್ನು ಬಿಬಿಎಂಪಿ ಸರ್ಕಾರಕ್ಕೆ ಕಳಿಸಿದೆ.
ಭಾರೀ ಪ್ರಮಾಣದ ಕಸ ಉತ್ಪಾದಕರನ್ನು ಹೊರತುಪಡಿಸಿ ಉಳಿದವರ ಕಸ ನಿರ್ವಹಣೆ ಪಾಲಿಕೆ ಮಾಡುತ್ತಿದೆ. ಇದರಲ್ಲಿ ಶೇ.5 ರಿಂದ 6 ರಷ್ಟು ಮಾತ್ರ ಕಸದ ಉಪಕರದ ಮೂಲಕ ಈವರೆಗೆ ಸಂಗ್ರಹಿಸಲಾಗುತ್ತಿತ್ತು. ಆದರೆ 2016ರ ಕಸ ನಿರ್ವಹಣೆ ನಿಯಮ ಹೇಳುವ ಪ್ರಕಾರವೂ ಕಸ ಉತ್ಪಾದಿಸುವವರೇ ಅದರ ವೆಚ್ಚ ಭರಿಸಬೇಕೆಂಬುದು ನಿಯಮದಲ್ಲಿದೆ. ಬೀದಿ ಗುಡಿಸುವ ಕಾರ್ಯಕ್ಕೆ ವಾರ್ಷಿಕವಾಗಿ 380 ಕೋಟಿ ರೂ ವೆಚ್ಚವಾಗ್ತಿದೆ. ಉಪಕರದ ಮೂಲಕ ಸಂಗ್ರಹವಾಗುವ 43 ಕೋಟಿ ರೂ. ಅನ್ನು ಈ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ಆಯುಕ್ತರು ಪತ್ರದಲ್ಲಿ ತಿಳಿಸಿದ್ದಾರೆ.
ಇದೀಗ 2020 ಜೂನ್ 4 ರಂದು ಬಿಬಿಎಂಪಿಯ ಪೌರ ಕಸ ನಿರ್ವಹಣೆ ಉಪನಿಯಮಗಳ ಕುರಿತು ರಾಜ್ಯ ಪತ್ರದಲ್ಲಿ ಅಧಿಸೂಚನೆ ಪ್ರಕಟವಾಗಿದೆ.
ಶುಲ್ಕ ಯಾರಿಗೆ ಎಷ್ಟು ಶುಲ್ಕ?
ಪ್ರತೀ ಮನೆಗೆ- 200 ರೂ
ವಸತಿ ಕಟ್ಟಡಗಳಿಗೆ (ವಿಸ್ತೀರ್ಣ- ಚ.ಅಡಿ ಶುಲ್ಕ)
1000 ದವರೆಗೆ 10 ರೂ
1001-3000. 30 ರೂ
3000 ಮೇಲ್ಪಟ್ಟು 50 ರೂ
ವಾಣಿಜ್ಯ ಕಟ್ಟಡಗಳಿಗೆ (ವಿಸ್ತೀರ್ಣ -ಚ.ಅಡಿ ಶುಲ್ಕ)
1000. 50 ರೂ
1001-3000. 100 ರೂ
5000 ಮೇಲ್ಪಟ್ಟ ಕಟ್ಟಡಗಳಿಗೆ 200 ರೂ
ಕೈಗಾರಿಕಾ ಕಟ್ಟಡ(ವಿಸ್ತೀರ್ಣ -ಚ.ಅಡಿ ಶುಲ್ಕ)
1000. 50 ರೂ