ಬೆಂಗಳೂರು : ನಗರದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸಹಾಯವಾಗಬೇಕು ಎಂದು ಮದುಮೇಹ ಸಮಸ್ಯೆಯಿಂದ ಉಂಟಾಗುವ ಕಣ್ಣಿನ ಸಮಸ್ಯೆಯನ್ನು ಬಿಬಿಎಂಪಿ ಆಸ್ಪತ್ರೆಗಳಲ್ಲೇ ಪತ್ತೆಹಚ್ಚಲು ಬಿಬಿಎಂಪಿ ಡಿಜಿಟಲ್ ಫಂಡಸ್ ಕ್ಯಾಮರಾ ಖರೀದಿಗೆ ಮುಂದಾಗಿದೆ.
ಬಿಬಿಎಂಪಿ ಆಸ್ಪತ್ರೆಯಲ್ಲಿ ಸಿಗಲಿದೆ ಡಯಾಬಿಟಿಕ್ ರೆಟಿನೋಪತಿ ಚಿಕಿತ್ಸೆ
ಡಯಾಬಿಟಿಕ್ ರೆಟಿನೋಪತಿ ಸಾಮಾನ್ಯವಾಗಿ ಮದುಮೇಹ ರೋಗಿಗಳಲ್ಲಿ ಕಂಡು ಬರುವ ಸಮಸ್ಯೆಯಾಗಿದ್ದು, ಪಾಲಿಕೆ ಆಸ್ಪತ್ರೆಗಳಲ್ಲಿ ಇದಕ್ಕೆ ಚಿಕಿತ್ಸೆ ಸಿಗುತ್ತಿರಲಿಲ್ಲ. ಆದರೆ, ಡಿಜಿಟಲ್ ಫಂಡಸ್ ಕ್ಯಾಮರಾ ಮೂಲಕ ಎಲ್ಲ ವೈದ್ಯರೂ, ಶುಶ್ರೂಕಿಯರೂ ಸಮಸ್ಯೆ ಪತ್ತೆಹಚ್ಚಬಹುದು. ಹಾಗೇ ಚಿಕಿತ್ಸೆ ನೀಡಬಹುದು ಎಂಬ ಕಾರಣಕ್ಕೆ ಈ ಸಾಧನ ಖರೀದಿ ಮಾಡಲಾಗುತ್ತಿದೆ.
ಡಯಾಬಿಟಿಕ್ ರೆಟಿನೋಪತಿ ಸಾಮಾನ್ಯವಾಗಿ ಮದುಮೇಹ ರೋಗಿಗಳಲ್ಲಿ ಕಂಡುಬರುವ ಸಮಸ್ಯೆಯಾಗಿದ್ದು, ಪಾಲಿಕೆ ಆಸ್ಪತ್ರೆಗಳಲ್ಲಿ ಇದಕ್ಕೆ ಚಿಕಿತ್ಸೆ ಸಿಗುತ್ತಿರಲಿಲ್ಲ. ಆದರೆ, ಡಿಜಿಟಲ್ ಫಂಡಸ್ ಕ್ಯಾಮರಾ ಮೂಲಕ ಎಲ್ಲ ವೈದ್ಯರೂ, ಶುಶ್ರೂಷಿಕಿಯರು ಸಮಸ್ಯೆ ಪತ್ತೆಹಚ್ಚಬಹುದು. ಹಾಗೇ ಚಿಕಿತ್ಸೆ ನೀಡಬಹುದು ಎಂಬ ಕಾರಣಕ್ಕೆ ಈ ಸಾಧನ ಖರೀದಿ ಮಾಡಲಾಗುತ್ತಿದೆ.
ಇದು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸಹಕಾರವಾಗಲಿದೆ. ಒಂದು ಡಿಜಿಟಲ್ ಫಂಡಸ್ ಕ್ಯಾಮರಾದ ವೆಚ್ಚ 4.68 ಲಕ್ಷವಾಗಿದ್ದು, ಹಂತ ಹಂತವಾಗಿ ಎಲ್ಲ ಪಾಲಿಕೆ ಆಸ್ಪತ್ರೆಗಳಿಗೆ ಖರೀದಿಸಲು ಚಿಂತಿಸಲಾಗಿದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ.