ಬೆಂಗಳೂರು: ನಗರದಲ್ಲಿ ಈಗಾಗಲೇ ಕೆರೆ ಜಾಗ, ರಾಜಕಾಲುವೆಗಳು ಹಾಗೇ ಬಫರ್ ಝೋನ್ಗಳನ್ನು ಬಿಡದೆ ಭೂಗಳ್ಳರು ಆಕ್ರಮಿಸಿದ್ದು, ಆಕಾಶದೆತ್ತರದ ಕಟ್ಟಡಗಳನ್ನೂ ಕಟ್ಟಿದ್ದಾರೆ.
ಹೆಬ್ಬಾಳ ಕೆರೆ ಬಫರ್ ಝೋನ್ನ ತಾತ್ಕಾಲಿಕ ಶೆಡ್ ತೆರವು ಮಾಡಿ: ಪಾಲಿಕೆ ಆದೇಶ - ಬೆಂಗಳೂರು ಸಿದ್ದಿ
ಹೆಬ್ಬಾಳ ಕೆರೆ ಪಕ್ಕದಲ್ಲಿರುವ ಅರಣ್ಯ ಇಲಾಖೆಯ ಬಫರ್ ಝೋನ್ನಲ್ಲಿ ತಾತ್ಕಾಲಿಕ ಶೆಡ್ಗಳು ನಿರ್ಮಾಣವಾಗಿದ್ದು, ಶೆಡ್ಗಳನ್ನು ಕೂಡಲೇ ತೆರವು ಮಾಡಲು ಮಾಲಿಕರಿಗೆ ಪಾಲಿಕೆ ಆದೇಶ ನೀಡಿದೆ.
![ಹೆಬ್ಬಾಳ ಕೆರೆ ಬಫರ್ ಝೋನ್ನ ತಾತ್ಕಾಲಿಕ ಶೆಡ್ ತೆರವು ಮಾಡಿ: ಪಾಲಿಕೆ ಆದೇಶ Bangalore](https://etvbharatimages.akamaized.net/etvbharat/prod-images/768-512-8666219-thumbnail-3x2-bng.jpg)
ಹೆಬ್ಬಾಳ ಕೆರೆ
ಇದೀಗ ಹೆಬ್ಬಾಳ ಕೆರೆ ಪಕ್ಕದಲ್ಲಿರುವ ಅರಣ್ಯ ಇಲಾಖೆಯ ಬಫರ್ ಝೋನ್ನಲ್ಲಿ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಪಾಲಿಕೆಯ ಕಂದಾಯ ಇಲಾಖೆ, ಕಾಮಗಾರಿ ಇಲಾಖೆ, ಅರಣ್ಯ ಇಲಾಖೆ, ಹಾಗೂ ಕೆರೆ ಸಂರಕ್ಷಣಾ ಇಲಾಖೆಯವ್ರು ಜಂಟಿ ಪರಿಶೀಲನೆ ನಡೆಸಿ, ಬಫರ್ ಝೋನ್ನಲ್ಲಿದ್ದ ತಾತ್ಕಾಲಿಕ ಶೆಡ್ಅನ್ನು ತೆರವು ಮಾಡಲು ಮಾಲಿಕರಿಗೆ ಸೂಚಿಸಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.