ಕರ್ನಾಟಕ

karnataka

ETV Bharat / state

Live Video- ಬೆಂಗಳೂರಲ್ಲಿ ತೆರವು ಕಾರ್ಯಾಚರಣೆ ವೇಳೆ ಕುಸಿದು ಬಿತ್ತು ಬೃಹತ್​ ಕಟ್ಟಡ! - ಕಟ್ಟಡ ತೆರವು ವೇಳೆ ಕಟ್ಟಡ ಕುಸಿದು ಬಿದ್ದಿದೆ

ಕಮಲಾನಗರದಲ್ಲಿ ಶಿಥಿಲಗೊಂಡಿದ್ದ ಕಟ್ಟಡ ತೆರವು ವೇಳೆ ಕಟ್ಟಡವೊಂದು ಕುಸಿದು ಬಿದ್ದಿದೆ. ಈ ವೇಳೆ ಪಕ್ಕದ ಮತ್ತೊಂದು ಕಟ್ಟಡಕ್ಕೂ ಹಾನಿಯಾಗಿದೆ.

bbmp-operation-to-take-down-building-which-basement-collapsed-earlier
ಬೆಂಗಳೂರು: ತೆರವು ಕಾರ್ಯಾಚರಣೆ ವೇಳೆ ಕುಸಿದು ಬಿದ್ದ ಕಟ್ಟಡ

By

Published : Oct 13, 2021, 12:30 PM IST

ಬೆಂಗಳೂರು:ಮಹಾಲಕ್ಷ್ಮಿ ಲೇಔಟ್ ಬಳಿಯ ಕಮಲಾನಗರದಲ್ಲಿ ಶಿಥಿಲಗೊಂಡಿದ್ದ ಬೃಹತ್​ ಕಟ್ಟಡ ತೆರವು ವೇಳೆ ಅದು ಕುಸಿದು ಬಿದ್ದಿದೆ. ನಿನ್ನೆ ರಾತ್ರಿ ಇದರ ತಳಪಾಯ ಕುಸಿತದಿಂದಾಗಿ ಕುಸಿಯುವ ಹಂತಕ್ಕೆ ತಲುಪಿತ್ತು. ಇಂದು ತೆರವು ಕಾರ್ಯಾಚರಣೆ ವೇಳೆ ಪಕ್ಕದ ಕಟ್ಟಡಕ್ಕೂ ಹಾನಿಯಾಗಿದ್ದು, ಆ ಕಟ್ಟಡ ತೆರವಿಗೂ ನೋಟಿಸ್​​​ ನೀಡಲಾಗಿದೆ.

ಬೆಳಗ್ಗೆಯೇ ಕಟ್ಟಡ ತೆರವಿಗೆ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಇಡೀ ಕಟ್ಟಡ ಕುಸಿದು ಬಿದ್ದಿದ್ದು, ಪಕ್ಕದ ಕಟ್ಟಡಕ್ಕೆ ಹಾನಿಯಾಗಿದೆ. ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ತಿಳಿದುಬಂದಿದೆ.

ತೆರವು ಕಾರ್ಯಾಚರಣೆ ವೇಳೆ ಕುಸಿದು ಬಿದ್ದ ಕಟ್ಟಡ

ಮೊದಲೇ ನೋಟಿಸ್ ನೀಡಲಾಗಿದ್ದ ಕಟ್ಟಡ ನಿನ್ನೆ ರಾತ್ರಿ ವಾಲಿಕೊಂಡಿತ್ತು. ಕಟ್ಟಡದಲ್ಲಿ ವಾಸವಿದ್ದ ಕುಟುಂಬಸ್ಥರನ್ನು ಖಾಲಿ ಮಾಡಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿತ್ತು. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಆದರೆ ಇಂದು ತೆರವು ಕಾರ್ಯಾಚರಣೆ ವೇಳೆ ಮತ್ತೊಂದು ಕಟ್ಟಡಕ್ಕೆ ಹಾನಿಯಾಗಿದ್ದು, ಆ ಕಟ್ಟಡ ತೆರವಿಗೂ ನೋಟಿಸ್ ನೀಡಲಾಗಿದೆ.

ABOUT THE AUTHOR

...view details