ಬೆಂಗಳೂರು:ಆರ್.ಆರ್ ನಗರದ ಮತಗಟ್ಟೆ 344 ರ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಮತದಾನ ಮಾಡಲು ಬಂದ ವೇಳೆ ವೀಲ್ ಚೇರ್ ವ್ಯವಸ್ಥೆ ಇಲ್ಲದೇ ವಾಪಸ್ ಹೋದ ಮತದಾರನಿಗೆ ಕೊನೆಗೂ ಅಧಿಕಾರಿಗಳು ಚೇರ್ ವ್ಯವಸ್ಥೆ ಮಾಡಿದ್ದಾರೆ.
ವೀಲ್ ಚೇರ್ ಇಲ್ಲದೇ ವಾಪಸಾದ ವಿಶೇಷ ಚೇತನ ವೋಟರ್: ಚೇರ್ ವ್ಯವಸ್ಥೆಯಾದ ಬಳಿಕ ಮತದಾನ - RR Nagar Voting
ಆರ್.ಆರ್ ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ವೀಲ್ ಚೇರ್ ವ್ಯವಸ್ಥೆಯಿಲ್ಲದೇ ವಿಶೇಷ ಚೇತನ ಮತದಾರರೊಬ್ಬರು ವಾಪಸ್ ಹೋದ ಬಗ್ಗೆ ಸುದ್ದಿಯಾಗಿತ್ತು. ಮಾಧ್ಯಮಗಳ ವರದಿ ನೋಡಿದ ಅಧಿಕಾರಿಗಳು ಚೇರ್ ವ್ಯವಸ್ಥೆ ಮಾಡಿದ್ದಾರೆ.
ವೀಲ್ ಚೇರ್ ವ್ಯವಸ್ಥೆ ಮಾಡಿದ ಅಧಿಕಾರಿಗಳು
ಅಂಥೋನಿ ಜಾರ್ಜ್ ಎಂಬವರು ಮತ ಚಲಾಯಿಸಲು ಬಂದ ವೇಳೆ ಚೇರ್ ವ್ಯವಸ್ಥೆ ಇಲ್ಲದ ಕಾರಣ ವಾಪಸ್ ಹೋಗಿದ್ದರು. ಅವರ ಪತ್ನಿ ಮಾತ್ರ ಮತ ಚಲಾಯಿಸಿದ್ದರು. ಈ ಕುರಿತು ಚುನಾವಣಾ ಅಧಿಕಾರಿಗಳನ್ನು ವಿಚಾರಿಸಿದರೆ ಬಿಬಿಎಂಪಿ ಅಧಿಕಾರಿಗಳನ್ನು ಕೇಳಿ ಎಂದು ಹಾರಿಕೆ ಉತ್ತರ ನೀಡಿದ್ದರು. ಈ ಕುರಿತು ಮಾಧ್ಯಮಗಳು ಸುದ್ದಿ ಬಿತ್ತರ ಮಾಡಿದ್ದವು.
ಸುದ್ದಿ ಬಿತ್ತರವಾಗುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು ವೀಲ್ ಚೇರ್ ವ್ಯವಸ್ಥೆ ಮಾಡಿದ್ದರು. ಚೇರ್ ವ್ಯವಸ್ಥೆಯಾದ ವಿಷಯ ತಿಳಿದ ಅಂಥೋನಿ ಜಾರ್ಜ್ ಮತ್ತೆ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ.