ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 198 ವಾರ್ಡ್ಗಳಲ್ಲಿನ ವಾಣಿಜ್ಯ ಪರವಾನಗಿ ವಿತರಣೆ ಹಾಗೂ ನವೀಕರಣ ಪ್ರಗತಿಯ ಕುರಿತು ಬಿಬಿಎಂಪಿ ಆಡಳಿತ ವರ್ಗ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿತು.
ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಿಬಿಎಂಪಿ ಅಧಿಕಾರಿಗಳು ನಗರದಲ್ಲಿ ಉದ್ದಿಮೆ ಪರವಾನಗಿ ವಿತರಣೆಯನ್ನು ಆನ್‌ಲೈನ್ ವ್ಯವಸ್ಥೆಯಲ್ಲಿ ಅಳವಡಿಸಿದ್ದರೂ ಸಹ ನವೀಕರಣ ಅರ್ಜಿಗಳು ಬೇಗ ವಿತರಣೆಯಾಗುತ್ತಿದ್ದು, ಹೊಸದಾಗಿ ಟ್ರೇಡ್ ಲೈಸನ್ಸ್ ವಿತರಣೆ ಮಾಡುವ ಪ್ರಕರಣಗಳಲ್ಲಿ ವಿಳಂಬವಾಗುತ್ತಿದೆ. ಹಾಗಾಗಿ ಈಗಿರುವ ವ್ಯವಸ್ಥೆಯನ್ನು ಇನ್ನೂ ಸರಳೀಕರಿಸುವ ಬಗ್ಗೆ ಚರ್ಚೆ ಇಂದು ನಡೆಸಲಾಯಿತು.
ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಿಬಿಎಂಪಿ ಅಧಿಕಾರಿಗಳು ಕೆಲವೊಂದು ಉದ್ದಿಮೆಗಳಿಗೆ ಸ್ಥಳ ಪರಿಶೀಲನೆ ಅಗತ್ಯವಿರುವುದಿಲ್ಲ. ಹಾಗಾಗಿ ಅಂತಹ ಪರವಾನಗಿ ಸ್ಥಳ ಪರಿಶೀಲಿನೆಯ ಹಂತವನ್ನು ಕಡಿತಗೊಳಿಸಿ ಶೀಘ್ರವಾಗಿ ಪರವಾನಗಿ ವಿತರಣೆ ಮಾಡಲು ಕ್ರಮ ವಹಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.
ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಿಬಿಎಂಪಿ ಅಧಿಕಾರಿಗಳು ಟ್ರೇಡ್ ಲೈಸನ್ಸ್ ಪಡೆಯಲು ಉದ್ದಿಮೆದಾರರು ಕಚೇರಿಗೆ ಭೇಟಿ ನೀಡುವುದನ್ನು ತಪ್ಪಿಸುವ ಸಲುವಾಗಿ ಆನ್‌ಲೈನ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೆ ಉದ್ದಿಮೆದಾರರು ಸುಲಭ ಮತ್ತು ಸರಳ ವಿಧಾನದಲ್ಲಿ ಲೈಸನ್ಸ್ ಪಡೆಯುವಂತೆ ಅನುಕೂಲ ಮಾಡಿಕೊಡಲು ತಯಾರಿ ನಡೆದಿದೆ.
ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಿಬಿಎಂಪಿ ಅಧಿಕಾರಿಗಳು ವಲಯವಾರು ಎಷ್ಟು ಅರ್ಜಿಗಳು ಸ್ವೀಕೃತಗೊಂಡಿವೆ, ಎಷ್ಟು ಪರವಾನಗಿ ನೀಡಲಾಗಿದೆ, ಬಾಕಿ ಇರುವ ಅರ್ಜಿಗಳ ವಿವರಗಳನ್ನು ಒಳಗೊಂಡಂತೆ ಡ್ಯಾಶ್‌ಬೋರ್ಡ್ ಸಿದ್ಧಪಡಿಸಲು ಮತ್ತು ಇದರಿಂದ ಬಾಕಿ ಇರುವ ಅರ್ಜಿಗಳ ಮೇಲೆ ಮೇಲಾಧಿಕಾರಿಗಳು ನಿಗಾ ವಹಿಸುವ ಜೊತೆಗೆ ಉದ್ದಿಮೆ ಪರವಾನಗಿಯನ್ನು ಡಿಜಿ ಲಾಕರ್ನೊಂದಿಗೆ ಸಮೀಕರಿಸುವ ಬಗ್ಗೆಯೂ ಕ್ರಮ ವಹಿಸಲು ಬಿಬಿಎಂಪಿ ಅಧಿಕಾರಿಗಳು ಸೂಚಿಸಿದರು.