ಬೆಂಗಳೂರು:ಮಾಜಿ ಶಾಸಕ ಹಾಗೂ ಪೌರಕಾರ್ಮಿಕರ ಪಿತಾಮಹ ಎಂದೇ ಕರೆಯಲ್ಪಡುವ ಐಪಿಡಿ ಸಾಲಪ್ಪ ಅವರ 23ನೇ ಪುಣ್ಯ ಸ್ಮರಣೆಯನ್ನು ಬಿಬಿಎಂಪಿ ಅಧಿಕಾರಿಗಳು ಆಚರಣೆ ಮಾಡಿದರು.
ಮೇಯರ್ ಗಂಗಾಂಬಿಕೆ ಹಾಗೂ ಆಡಳಿತ ವರ್ಗ ಐಪಿಡಿ ಸಾಲಪ್ಪ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಮೇಯರ್ ಗಂಗಾಂಬಿಕೆ ಮಾತನಾಡಿ, ಐಪಿಡಿ ಸಾಲಪ್ಪ ಅವರಂದ್ರೆ ಪೌರಕಾರ್ಮಿಕರ ಪಿತಾಮಹ. ಕೆಲ ವರ್ಷಗಳ ಹಿಂದೆ ಪೌರ ಕಾರ್ಮಿಕರಿಗೆ ಯಾವ ಸೌಲಭ್ಯ ಸಿಗಬೇಕು. ಬೇರೆ ಬೇರೆ ವಿಭಾಗದಲ್ಲಿ ಕೆಲಸ ಮಾಡುವಂತಹ ನೌಕರರಿಗೆ ಯಾವೆಲ್ಲ ಸೌಲಭ್ಯ ಸಿಗುತ್ತವೋ ಆ ಎಲ್ಲಾ ಸೌಲಭ್ಯಗಳು ಪೌರ ಕಾರ್ಮಿಕರಿಗೆ ಸಿಗಬೇಕು. ಹೀಗೆ ಮುಂತಾದ ವಿಷಯಗಳನೊಳಗೊಂಡ ಮೂವತ್ತು ವರದಿಗಳನ್ನು ತಯಾರಿಸಿ ಸರ್ಕಾರದಿಂದ ಅನುಮೋದನೆ ಪಡೆಯುವಲ್ಲಿ ಯಶ್ವಸಿಯಾದರು. ಪೌರಕಾರ್ಮಿಕರು ಕೂಡಾ ಎಲ್ಲರಂತೆ ಬದುಕಬೇಕೆಂದು ಹಠ ತೊಟ್ಟವರು ಅವರು. ಇಂದು ಅವರ ಪುಣ್ಯ ಸ್ಮರಣೆ ಆಚರಿಸುತ್ತಿದ್ದೇವೆ ಎಂದರು.