ಬೆಂಗಳೂರು: ಬಿಬಿಎಂಪಿಯ ಬೃಹತ್ ಮಳೆ ನೀರುಗಾಲುವೆ ಮುಖ್ಯ ಇಂಜಿನಿಯರ್ ಆಗಿದ್ದ ಪ್ರಹ್ಲಾದ್ ಅವರನ್ನು ರಸ್ತೆ ಮೂಲ ಸೌಕರ್ಯದ ಮುಖ್ಯ ಇಂಜಿನಿಯರ್ ಆಗಿ ಮುಂಬಡ್ತಿ ನೀಡಲಾಗಿದೆ. ಆದ್ರೆ ಪ್ರಹ್ಲಾದ್ ವಿರುದ್ಧ ಹಲವು ಹಗರಣಗಳ ಆರೋಪ ಇರುವಾಗ ಮುಂಬಡ್ತಿ ನೀಡಿರುವುದು ತಪ್ಪು ಎಂದು ಸಾಮಾಜಿಕ ಹೋರಾಟಗಾರರಾದ ಗಣೇಶ್ ಸಿಂಗ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ.
ಪಾಲಿಕೆ ಅಧಿಕಾರಿ ಪ್ರಹ್ಲಾದ್ ಮುಂಬಡ್ತಿ ವಿರೋಧಿಸಿ ಎಸಿಬಿಗೆ ದೂರು - ಎಸಿಬಿಯಲ್ಲಿ ದೂರು ದಾಖಲು,
ಪಾಲಿಕೆ ಅಧಿಕಾರಿ ಪ್ರಹ್ಲಾದ್ ಮುಂಬಡ್ತಿಯನ್ನು ವಿರೋಧಿಸಿ ಸಾಮಾಜಿಕ ಹೋರಾಟಗಾರರೊಬ್ಬರು ಎಸಿಬಿಗೆ ದೂರು ನೀಡಿದ್ದಾರೆ.
ಎಸಿಬಿ, ಬಿಎಂಟಿಎಫ್ನಲ್ಲಿ ಈಗಾಗಲೇ ಪ್ರಹ್ಲಾದ್ ವಿರುದ್ಧ ಎನ್ಆರ್ ರಮೇಶ್ ಅನೇಕ ದೂರುಗಳನ್ನು ಸಲ್ಲಿಸಿದ್ದಾರೆ. ಇಲ್ಲಿ ವಿಚಾರಣೆ ಎದುರಿಸುತ್ತಿರುವಾಗಲೇ ಪ್ರಮುಖ ಹುದ್ದೆಗಳಿಗೆ ಮುಂಬಡ್ತಿ ನೀಡಲು ಕೋಟ್ಯಂತರ ರೂಪಾಯಿ ಹಗರಣ ನಡೆದಿದೆ ಎಂದು ಗಣೇಶ್ ಸಿಂಗ್ ಆರೋಪಿಸಿದ್ದಾರೆ.
ಟ್ರಾಫಿಕ್ ಇಂಜಿನಿಯರಿಂಗ್ ಸೆಲ್ನಲ್ಲಿ 109 ಕೋಟಿ ಮೊತ್ತದ ಹಗರಣದ ಆರೋಪ ಎದುರಿಸುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ಟಿಇಸಿ ಕೋಶದ ಮಾತೃ ಇಲಾಖೆಯಾದ ರಸ್ತೆ ಮೂಲ ಸೌಕರ್ಯ ಇಲಾಖೆಗೆ ಚೀಫ್ ಇಂಜಿನಿಯರ್ ಆಗಿ ನಿಯೋಜಿಸಲಾಗಿದೆ. ಇದು ಕಾನೂನು ಬಾಹಿರ. ಕಾನೂನು ಬಾಹಿರ ಕಾರ್ಯದಲ್ಲಿ ಬಿಬಿಎಂಪಿ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ಹಾಗೂ ಸಿ.ಇ, ಪ್ರಹ್ಲಾದ್ ನಡುವೆ ಕೋಟ್ಯಂತರ ರೂಪಾಯಿ ಕೊಡು ಕೊಳ್ಳುವಿಕೆ ಕಾರ್ಯ ನಡೆದಿದೆ ಎಂದು ಆರೋಪಿಸಿದ್ದಾರೆ.