ಕರ್ನಾಟಕ

karnataka

By

Published : Jul 14, 2020, 7:03 PM IST

Updated : Jul 14, 2020, 7:55 PM IST

ETV Bharat / state

ಕೊರೊನಾ ಬಂದು ವಾರವಾದ್ರೂ ಸಿಗದ ಚಿಕಿತ್ಸೆ: ಮತ್ತೋರ್ವ ಬಿಬಿಎಂಪಿ ನೌಕರ ಬಲಿ

ಆಸ್ಪತ್ರೆಗೆ ದಾಖಲಿಸಲು ನಿನ್ನೆ ಫೋನ್ ಬಂದಿದ್ದು, ಆ್ಯಂಬುಲೆನ್ಸ್ ಸಿಗದ ಕಾರಣ ಇಂದು ಮನೆಯಲ್ಲೇ ಅವರು ತೀರಿಕೊಂಡಿದ್ದಾರೆ. ಈ ಮೂಲಕ, ಪಾಲಿಕೆ ಸಿಬ್ಬಂದಿ-ಅಧಿಕಾರಿಗಳಲ್ಲಿ ಈವರೆಗೆ ಇಬ್ಬರು ಮೃತಪಟ್ಟಿದ್ದಾರೆ.

ಮತ್ತೋರ್ವ ಬಿಬಿಎಂಪಿ ನೌಕರ ಬಲಿ
ಮತ್ತೋರ್ವ ಬಿಬಿಎಂಪಿ ನೌಕರ ಬಲಿ

ಬೆಂಗಳೂರು: ಬಿಬಿಎಂಪಿಯ ಶಿವನಗರ ವಾರ್ಡ್‌ನಲ್ಲಿ ಹೆಡ್ ಗ್ಯಾಂಗ್ ಮ್ಯಾನ್ ಆಗಿದ್ದ ನರಸಿಂಹ ಅವರಿಗೂ ಕೋವಿಡ್​ನಿಂದ ಜ್ವರ ಬಂದಿತ್ತು. ಬಳಿಕ ನಡೆಸಲಾದ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ಗೊತ್ತಾಗಿತ್ತು. ಆದರೆ ಅವರನ್ನು ಆಸ್ಪತ್ರೆಗೆ ದಾಖಲಿಸಲು ನಿನ್ನೆ ಫೋನ್ ಬಂದಿದ್ದು, ಆ್ಯಂಬುಲೆನ್ಸ್ ಸಿಗದ ಕಾರಣ ಇಂದು ಮನೆಯಲ್ಲೇ ತೀರಿಕೊಂಡಿದ್ದಾರೆ.

ಚಿಕಿತ್ಸೆ ಫಲಿಸದೆ ಕೊರೊನಾಗೆ ಬಲಿಯಾದ ಬಿಬಿಎಂಪಿ ಅಧಿಕಾರಿ

ಕೊರೊನಾಗೆ ಬಿಬಿಎಂಪಿ ಅಧಿಕಾರಿ ಬಲಿ:

ಯಲಹಂಕ ವಲಯದ ಸಹ ಕಂದಾಯ ಅಧಿಕಾರಿ ಹಾಗೂ ಕಂದಾಯ ಪರಿವೀಕ್ಷಕರೂ ಆಗಿದ್ದ 55 ವರ್ಷದ ನಟರಾಜ್ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಕೇಂದ್ರ ಸರ್ಕಾರದ ಸೂಚನೆಯಂತೆ ಇವರ ಕುಟುಂಬಕ್ಕೆ 30 ಲಕ್ಷ ರೂ ವಿಮೆ ಬಿಡುಗಡೆ ಮಾಡುವಂತೆ ಪಾಲಿಕೆ ಅಧಿಕಾರಿ-ಸಿಬ್ಬಂದಿಗಳ ಸಂಘ ಮನವಿ ಮಾಡಿದೆ.

Last Updated : Jul 14, 2020, 7:55 PM IST

ABOUT THE AUTHOR

...view details