ಕರ್ನಾಟಕ

karnataka

ETV Bharat / state

ಎಸಿಬಿ ಬಲೆಗೆ ಬಿದ್ದ ಬಿಬಿಎಂಪಿ ಅಧಿಕಾರಿ : ನೂರಾರು ಕಡತ, ಲಕ್ಷಾಂತರ ರೂ. ನಗದು ಪತ್ತೆ - ಲಂಚ ಸ್ವೀಕರಸುವಾಗ ಬಿಬಿಎಂಪಿ ಅಧಿಕಾರಿ ಬಂಧನ

ಬಿಬಿಎಂಪಿ ಸಹಾಯಕ ನಿರ್ದೇಶಕನ ಮನೆ ಮೇಲೆ ಎಸಿಬಿ ದಾಳಿ ಮಾಡಿ ವಿಚಾರಣೆ ನಡೆಸಿದಾಗ, ಆತನ ಕಾರಿನಲ್ಲಿ ಬಿಬಿಎಂಪಿ ನಗರ ಯೋಜನೆ ಇಲಾಖೆಗೆ ಸೇರಿದ 50 ಕ್ಕೂ ಹೆಚ್ಚು ಕಡತಗಳು, ಬಿಬಿಎಂಪಿ ಹಿರಿಯ ಅಧಿಕಾರಿಗಳ ಹೆಸರಿನಲ್ಲಿನಲ್ಲಿದ್ದ ಸೀಲ್​, ಕಚೇರಿಯ ಸೀಲ್​ ಹಾಗೂ ದಾಖಲೆಯಿಲ್ಲದ 7.40 ಲಕ್ಷ ರೂ ನಗದು ಹಣ ಪತ್ತೆಯಾಗಿವೆ.

BBMP officer arrested by ACB while receiving Bribe
ಎಸಿಬಿ ದಾಳಿ ವೇಳೆ ಅಧಿಕಾರಿ ಮನೆಯಲ್ಲಿ ಪತ್ತೆಯಾದ ವಸ್ತುಗಳು

By

Published : Feb 8, 2021, 4:59 PM IST

ಬೆಂಗಳೂರು : ನಿರ್ಮಾಣಗೊಂಡ ಕಟ್ಟಡಕ್ಕೆ ಸ್ವಾಧೀನಪತ್ರ (ಒಸಿ) ನೀಡಲು ವ್ಯಕ್ತಿಯೋರ್ವರಿಂದ ಲಂಚ ಸ್ವೀಕರಿಸುವಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕನನ್ನು ಬಂಧಿಸಿದ್ದು, ಅಧಿಕಾರಿಯ ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ನಗದು, 480ಕ್ಕೂ ಹೆಚ್ಚು ಕಡತಗಳನ್ನು ಜಪ್ತಿ ಮಾಡಿದ್ದಾರೆ.

ಸಹಾಯಕ ನಿರ್ದೇಶಕನಾಗಿರುವ ದೇವೆಂದ್ರಪ್ಪ ಎಂಬಾತನ ಮನೆ ಮೇಲೆ ಎಸಿಬಿ ದಾಳಿ ಮಾಡಿ ವಿಚಾರಣೆ ನಡೆಸಿದಾಗ, ಆತನ ಕಾರಿನಲ್ಲಿ ಬಿಬಿಎಂಪಿ ನಗರ ಯೋಜನೆ ಇಲಾಖೆಗೆ ಸೇರಿದ 50ಕ್ಕೂ ಹೆಚ್ಚು ಕಡತಗಳು, ಬಿಬಿಎಂಪಿ ಹಿರಿಯ ಅಧಿಕಾರಿಗಳ ಹೆಸರಿನಲ್ಲಿನಲ್ಲಿದ್ದ ಸೀಲ್​, ಕಚೇರಿಯ ಸೀಲ್​ ಹಾಗೂ ದಾಖಲೆಯಿಲ್ಲದ 7.40 ಲಕ್ಷ ರೂ. ನಗದು ಪತ್ತೆಯಾಗಿವೆ. ಆರೋಪಿ ಅಧಿಕಾರಿಯ ಮನೆಯಿಂದ ಇದುವರೆಗೆ ಒಟ್ಟು 27.40 ಲಕ್ಷ ರೂ‌‌‌. ಜಪ್ತಿ ಮಾಡಲಾಗಿದೆ.

ಎಸಿಬಿ ದಾಳಿ ವೇಳೆ ಅಧಿಕಾರಿ ಮನೆಯಲ್ಲಿ ಪತ್ತೆಯಾದ ವಸ್ತುಗಳು

ಓದಿ : ಹತ್ತಾರು ನಿಮಿಷ ಕಾದರೂ ಬರಲಿಲ್ಲ ರವಿಕುಮಾರ್; ಅನುಪಸ್ಥಿತಿಯಲ್ಲೇ ಹೊರಟ್ಟಿ ನಾಮಪತ್ರ ಸಲ್ಲಿಕೆ

ಆರೋಪಿ ಮನೆ ಶೋಧ ನಡೆಸಿದಾಗ, ಆತನ ಬಳಿ ಬೆಲೆ ಬಾಳುವ ಕಾರುಗಳು, ವಿವಿಧ ಬ್ಯಾಂಕ್ ಅಕೌಂಟುಗಳು, ನಿಶ್ಚಿತ ಠೇವಣಿ (ಎಫ್.ಡಿ) ಹಣ, ಸುಮಾರು 120 ಲೀಟರ್ ಮದ್ಯದ ಬಾಟಲಿ ಹಾಗೂ ಬಿಬಿಎಂಪಿ ನಗರ ಯೋಜನೆ ವಿಭಾಗಕ್ಕೆ ಸೇರಿದ ಸುಮಾರು 480ಕ್ಕೂ ಹೆಚ್ಚು ಕಡತಗಳು ಮತ್ತು 23 ಬಿಬಿಎಂಪಿ ಹಿರಿಯ ಅಧಿಕಾರಿಗಳ ಹೆಸರಿನಲ್ಲಿನದ್ದ ಸೀಲ್​, ಕಚೇರಿಯ ಸೀಲ್​ ಸಿಕ್ಕಿವೆ.
ಆರೋಪಿ ಬಳಿಯಿದ್ದ ಬೆಲೆ ಬಾಳುವ ಕಾರುಗಳು, ವಿವಿಧ ಬ್ಯಾಂಕ್ ಅಕೌಂಟ್, ಎಫ್.ಡಿ ಠೇವಣಿ ಹಾಗೂ ದಾಖಲೆಯಿಲ್ಲದ ಹಣದ ಕುರಿತು ಪ್ರತ್ಯೇಕವಾಗಿ ತನಿಖೆ ಕೈಗೊಳ್ಳಲಾಗುವುದು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ :ನಗರದ ಖಾಸಗಿ ಕಂಪೆನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ದೂರುದಾರರು, ಹುಳಿಮಾವಿನ ಖಾಸಗಿ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲು ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ಎಡಿಟಿಪಿ ಕಚೇರಿಗೆ ನಕ್ಷೆ ಮಂಜೂರಾತಿ ಅರ್ಜಿ ಸಲ್ಲಿಸಿ ಮಂಜೂರಾತಿ ಪಡೆದು ಕಟ್ಟಡ ನಿರ್ಮಿಸಿದ್ದರು‌. ಬಳಿಕ ಪೂರ್ಣಗೊಂಡ ಕಾಮಗಾರಿಗೆ ಒ.ಸಿ ಪಡೆಯಲು ಎಡಿಟಿಪಿ ದೇವೇಂದ್ರಪ್ಪ ಬಳಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ 40 ಲಕ್ಷ ರೂ. ಹಣ ನೀಡಿದರೆ ಒ.ಸಿ ನೀಡುವುದಾಗಿ ದೂರುದಾರರಿಗೆ ದೇವೇಂದ್ರಪ್ಪ ಹೇಳಿದ್ದನಂತೆ. ಈ‌ ಸಂಬಂಧ ಕಟ್ಟಡ ಮಾಲೀಕ ಎಸಿಬಿಗೆ ದೂರು ನೀಡಿದ್ದರು. ದೂರಿನನ್ವಯ ಕಾರ್ಯಾಚರಣೆ ಕೈಗೊಂಡ ಎಸಿಬಿ ಅಧಿಕಾರಿಗಳು, 20 ಲಕ್ಷ ರೂ. ಲಂಚ ಪಡೆದುಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ಆರೋಪಿಯನ್ನು ಬಂಧಿಸಿದ್ದು, ಹಣ ಜಪ್ತಿ ಮಾಡಿ ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.‌

For All Latest Updates

ABOUT THE AUTHOR

...view details