ಕರ್ನಾಟಕ

karnataka

ETV Bharat / state

ಬಿಬಿಎಂಪಿಯಿಂದ ಗುತ್ತಿಗೆದಾರರಿಗೆ ನೀಡಬೇಕಾಗಿರುವ 3 ಸಾವಿರ ಕೋಟಿ ಬಿಲ್ ಬಾಕಿ - ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್

ಬಿಬಿಎಂಪಿ ಗುತ್ತಿಗೆದಾರರಿಗೆ ನೀಡಬೇಕಾಗಿದ್ದ 3 ಸಾವಿರ ಕೋಟಿ ಮೌಲ್ಯದ ಬಾಕಿ ಬಿಲ್ ಇತ್ಯರ್ಥಪಡಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

BBMP
ಬಿಬಿಎಂಪಿ

By

Published : Oct 9, 2022, 2:37 PM IST

ಬೆಂಗಳೂರು:ಪಾಲಿಕೆಯಲ್ಲಿ ಕೆಲಸಗಳಾಗಬೇಕಾಗಿದ್ದರೆ ಶೇ.50ರಷ್ಟು ಕಮಿಷನ್ ನೀಡಬೇಕು ಎಂದು ಆರೋಪದ ನಡುವೆ ಗುತ್ತಿಗೆದಾರರಿಗೆ ನೀಡಬೇಕಾಗಿದ್ದ 3 ಸಾವಿರ ಕೋಟಿ ಮೌಲ್ಯದ ಬಾಕಿ ಬಿಲ್ ಇತ್ಯರ್ಥಪಡಿಸಿಲ್ಲ ಎಂದು ತಿಳಿದು ಬಂದಿದೆ.

ಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಕೆ.ಪಿ ಆರೋಪ ಮಾಡಿದ್ದು, 2020 ರಿಂದ ಬಾಕಿ ಬಿಲ್ ಇತ್ಯರ್ಥವಾಗಿಲ್ಲ ಹಾಗೂ ಹೊಸ ಟೆಂಡರ್‌ನ್ನೂ ಕರೆದಿಲ್ಲ. ಇವೆಲ್ಲವೂ ನಾವು ಶೇ. 50 ರಷ್ಟು ಕಮಿಷನ್ ಆರೋಪ ಮಾಡಿದ ಬಳಿಕ ನಡೆದಿದ್ದು. ಕಮಿಷನ್ ವ್ಯವಸ್ಥೆಯ ಬಗ್ಗೆ ಸಾರ್ವಜನಿಕವಾಗಿ ಆರೋಪ ಮಾಡಿದ್ದಕ್ಕಾಗಿ ಪಾಲಿಕೆ ಈ ರೀತಿ ನಡೆದುಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಬಿಬಿಎಂಪಿ ಗುತ್ತಿಗೆದಾರರಿಗೆ 23 ತಿಂಗಳ ಬಿಲ್ ಬಾಕಿ: ಆಡಳಿತಗಾರರಿಗೆ ಎಚ್ಚರಿಕೆ ಪತ್ರ

ಈ ಹಿಂದೆ ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಸಂಘದ ಕ್ಲಾಸ್ 3, 2, 1 ಗುತ್ತಿಗೆದಾರರು ಟೆಂಡರ್​​ಗಳನ್ನು ಪಡೆಯುತ್ತಿದ್ದರು. ಆದರೆ ಈಗ ಇತರ ರಾಜ್ಯಗಳ ಪ್ರಭಾವಿ ಗುತ್ತಿಗೆದಾರರಿಗೆ ಆದ್ಯತೆ ನೀಡಲಾಗುತ್ತಿದೆ. ಜೀವನೋಪಾಯಕ್ಕೆ ತೊಂದರೆಯಾಗುತ್ತಿದೆ. ಹಬ್ಬಗಳು ಮುಕ್ತಾಯಗೊಂಡ ಬಳಿಕ ಸಭೆಯನ್ನು ನಡೆಸುತ್ತೇವೆ ಹಾಗೂ ಸಂಘ ಕೂಡ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.

ತೆರಿಗೆ ಸಂಗ್ರಹ, ಆದಾಯ ಸೃಷ್ಟಿ ಹೆಚ್ಚಾಗಿಲ್ಲ:ಈ ಕುರಿತು ಪಾಲಿಕೆ ವಿಶೇಷಾಯುಕ್ತ ದೀಪಕ್ ಮಾತನಾಡಿದ್ದು, ಈ ಆರೋಪಗಳು ನಿರಾಧಾರ. ಪಾಲಿಕೆ ಈ ಹಿಂದೆ 3-4 ವರ್ಷಗಳಿಗೆ ಒಮ್ಮೆ ಬಿಲ್​​ ಇತ್ಯರ್ಥಗೊಳಿಸುತ್ತಿತ್ತು. ಈಗ ಆ ಅವಧಿ 18-24 ತಿಂಗಳಿಗೆ ಕುಗ್ಗಿದೆ. ಪಾಲಿಕೆ ಬಳಿ ಸಾಕಷ್ಟು ಹಣ ಇದ್ದು, ಬಿಲ್ ಮೊತ್ತ ಇತ್ಯರ್ಥಗೊಳಿಸದೇ ಇದ್ದಲ್ಲಿ ಈ ಆರೋಪವನ್ನು ಒಪ್ಪಬಹುದಾಗಿತ್ತು. ಆದರೆ ತೆರಿಗೆ ಸಂಗ್ರಹ ಹಾಗೂ ಆದಾಯ ಸೃಷ್ಟಿ ಹೆಚ್ಚಾಗಿಲ್ಲ. ಪಾಲಿಕೆ ಬಾಕಿ ಹಣ ಇಟ್ಟುಕೊಳ್ಳುವುದಿಲ್ಲ. ಶೀಘ್ರವೇ ಪೇಮೆಂಟ್ ಮಾಡಲಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ:ಗುತ್ತಿಗೆದಾರರಿಗೆ ಬಿಲ್ ಪಾವತಿ ವಿಳಂಬ ಆರೋಪ : ಮತ್ತೆಷ್ಟು ಜನ ಸಾಯಬೇಕೆಂದು ಪ್ರಶ್ನಿಸಿದ ಹೈಕೋರ್ಟ್

ABOUT THE AUTHOR

...view details