ಬೆಂಗಳೂರು:ಮಹಾನಗರದ ಯಾವುದೇ ರಸ್ತೆಯಲ್ಲಿ ಹೋದ್ರು ಕಸದ ಲಾರಿ ಮತ್ತು ಕಾಂಪ್ಯಾಕ್ಟರ್ ಗಳ ದುರ್ವಾಸನೆಯಿಂದ ತಪ್ಪಿಸಿಕೊಳ್ಳೋದು ಅಸಾಧ್ಯ. ಅದ್ರಲ್ಲೂ ಕಸದ ಲಾರಿಗಳು ಒಂದು ಕಿಲೋ ಮೀಟರ್ ದೂರದಲ್ಲಿದ್ರೂ ಗಬ್ಬುವಾಸನೆ ಹರಡಿ, ವಾಹನ ಸವಾರರಿಗೆ ನರಕ ಯಾತನೆ ಅನುಭವಿಸಿವಂತೆ ಮಾಡುತ್ತೆ. ಸದ್ಯದಲ್ಲೇ ಇದಕ್ಕೆ ಬ್ರೇಕ್ ಬೀಳಲಿದೆ ಎಂದು ಮೇಯರ್ ಗಂಗಾಂಬಿಕೆ ಭರವಸೆ ನೀಡಿದ್ದಾರೆ.
ಕಸದ ದುರ್ವಾಸನೆಯಿಂದ ಸಿಲಿಕಾನ ಸಿಟಿ ಜನರಿಗೆ ಸಿಕ್ಕ ಮುಕ್ತಿ... ಇನ್ಮುಂದೆ ನೋ ಬ್ಯಾಡ್ ಸ್ಮೇಲ್
ಸಪ್ಟೆಂಬರ್ 1 ರಿಂದ ಜಾರಿಯಾಗಲಿರುವ ಹೊಸ ಟೆಂಡರ್ನ ನಿಯಮದ ಪ್ರಕಾರ ಕಾಂಪ್ಯಾಕ್ಟರ್ ಅಥವಾ ಗೂಡ್ಸ್ ಆಟೋಗಳಲ್ಲಿ ಟ್ಯಾಂಕರ್ ವ್ಯವಸ್ಥೆ ಮಾಡಲು ಕಡ್ಡಾಯ ಮಾಡಲಾಗಿದೆ. ಇದರಿಂದ ರಸ್ತೆಯುದ್ದಕ್ಕೂ ಲಿಚೆಟ್ ನೀರು ಚೆಲ್ಲಿಕೊಂಡು ಹೋಗದೆ ಟ್ಯಾಂಕರ್ ನಲ್ಲೇ ಶೇಖರಣೆಯಾಗಲಿದೆ.
ಹಸಿ ಕಸದಿಂದ ಸುರಿಯುವ ಲಿಚೆಟ್ ನೀರು (ಕಸದ ಕೊಚ್ಚೆ ನೀರು) ರಸ್ತೆಗೆ ಸುರಿಯುವುದರಿಂದ ರಸ್ತೆ ಗಬ್ಬು ವಾಸನೆ ಬರುತ್ತದೆ. ಜನರಂತು ಕಸ ವಿಲೆವಾರಿ ಘಟಕಗಳಿಗೆ ತೆರಳುವ ಕಸದ ಲಾರಿಯ ಪಕ್ಕದಲ್ಲಿ ಹೋಗಲು ಅಸಹ್ಯ ಪಡುತ್ತಿರುತ್ತಾರೆ. ಕಸದ ನಿರ್ವಹಣೆಗಾಗಿ ಕೋಟ್ಯಾಂತರ ರುಪಾಯಿ ಸುರಿಯುವ ಪಾಲಿಕೆ, ಈ ಅವ್ಯವಸ್ಥೆ ಬಗ್ಗೆ ಈ ವರೆಗೆ ತಲೆಕೆಡಿಸಿಕೊಂಡಿರಲಿಲ್ಲ.
ಇದೀಗ ಸಪ್ಟೆಂಬರ್ 1 ರಿಂದ ಜಾರಿಯಾಗಲಿರುವ ಹೊಸ ಟೆಂಡರ್ನ ನಿಯಮದ ಪ್ರಕಾರ ಕಾಂಪ್ಯಾಕ್ಟರ್ ಅಥವಾ ಗೂಡ್ಸ್ ಆಟೋಗಳಲ್ಲಿ ಟ್ಯಾಂಕರ್ ವ್ಯವಸ್ಥೆ ಮಾಡಲು ಕಡ್ಡಾಯ ಮಾಡಲಾಗಿದೆ. ಇದರಿಂದ ರಸ್ತೆಯುದ್ದಕ್ಕೂ ಲಿಚೆಟ್ ನೀರು ಚೆಲ್ಲಿಕೊಂಡು ಹೋಗದೆ ಟ್ಯಾಂಕರ್ ನಲ್ಲೇ ಶೇಖರಣೆಯಾಗಲಿದ್ದು, ಪ್ರಯಾಣಿಕರಿಗೆ ದುರ್ವಾಸನೆಯಿಂದ ಮುಕ್ತಿ ಸಿಗಲಿದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.