ಕರ್ನಾಟಕ

karnataka

ಜಾಹೀರಾತು ಬೈಲಾ ರಚನೆ... ಹಿಂದಿನ ಸರ್ಕಾರದ ನಿರ್ಣಯಕ್ಕೆ ಪಾಲಿಕೆ ಸದಸ್ಯರ ವಿರೋಧ

By

Published : Jul 29, 2019, 8:32 PM IST

ಬಿಬಿಎಂಪಿಯು ಬೆಂಗಳೂರು ವ್ಯಾಪ್ತಿಯಲ್ಲಿ ಜಾಹೀರಾತು ಅಳವಡಿಕೆ ಬ್ಯಾನ್ ಮಾಡಿ, ಕೌನ್ಸಿಲ್ ಒಪ್ಪಿಗೆಯೊಂದಿಗೆ ರಚಿಸಿದ್ದ ಜಾಹೀರಾತು ಬೈಲಾವನ್ನು ಕಳೆದ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿತ್ತು. ವಾಣಿಜ್ಯ ಜಾಹೀರಾತಿಗೆ ಅನುಮತಿ ನೀಡಿತ್ತು. ಇದು ಪಾಲಿಕೆಗೆ ಮಾಡುವ ಅವಮಾನ. ನಗರದ ಸೌಂದರ್ಯಕ್ಕೆ ಧಕ್ಕೆ ಬರುತ್ತದೆ ಎಂದು ಬಿಬಿಎಂಪಿ ಸದಸ್ಯರು ವಿರೋಧಿಸಿದರು.

ಬಿಬಿಎಂಪಿ ಕೌನ್ಸಿಲ್ ಸಭೆ

ಬೆಂಗಳೂರು:ನೂತನ ಜಾಹೀರಾತು ಬೈಲಾ, ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರದ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಹಿಂದಿನ ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ನಗರದಲ್ಲಿ ವಾಣಿಜ್ಯ ಜಾಹೀರಾತು ಅಳವಡಿಕೆಗೆ ಅವಕಾಶವಿದೆಯೆಂದು ಜಾಹೀರಾತು ಬೈಲಾ ಸಿದ್ಧಪಡಿಸಿತ್ತು. ಆದ್ರೆ ಇದನ್ನು ಇಂದಿನ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಪಕ್ಷಾತೀತವಾಗಿ ಎಲ್ಲಾ ಕಾರ್ಪೋರೇಟರ್ಸ್ ವಿರೋಧಿಸಿದರು.

ಬಿಬಿಎಂಪಿಯು ಬೆಂಗಳೂರು ವ್ಯಾಪ್ತಿಯಲ್ಲಿ ಜಾಹೀರಾತು ಅಳವಡಿಕೆ ಬ್ಯಾನ್ ಮಾಡಿ, ಕೌನ್ಸಿಲ್ ಒಪ್ಪಿಗೆಯೊಂದಿಗೆ ರಚಿಸಿದ್ದ ಜಾಹೀರಾತು ಬೈಲಾವನ್ನು ಕಳೆದ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿತ್ತು. ವಾಣಿಜ್ಯ ಜಾಹೀರಾತಿಗೆ ಅನುಮತಿ ನೀಡಿತ್ತು. ಇದು ಪಾಲಿಕೆಗೆ ಮಾಡುವ ಅವಮಾನ, ನಗರದ ಸೌಂದರ್ಯಕ್ಕೆ ಧಕ್ಕೆ ಬರುತ್ತದೆ ಎಂದು ಪಾಲಿಕೆ ಸದಸ್ಯರು ವಿರೋಧಿಸಿದರು.

ಸರ್ಕಾರ ಮಾಡಿರುವ ಹೊಸ ಬೈಲಾಕ್ಕೆ ಪಾಲಿಕೆಯ ಅಭಿಪ್ರಾಯ ಕೇಳಿದ್ದು, ನಾಳೆ ಕೌನ್ಸಿಲ್ ಸಭೆಯಲ್ಲಿ ವಿರೋಧದ ನಿರ್ಣಯ ಮಾಡಿ ಸರ್ಕಾರಕ್ಕೆ ಕಳಿಸಿಕೊಡಲು ಬಿಬಿಎಂಪಿ ತೀರ್ಮಾನಿಸಿದೆ. ಇದೇ ವೇಳೆ ಕೌನ್ಸಿಲ್​​ನಲ್ಲಿ ಮಾತನಾಡಿದ ಪಾಲಿಕೆ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ಚುನಾವಣೆ ಸಮಯದಲ್ಲಿ ಹಣ ಮಾಡುವ ಉದ್ದೇಶದಿಂದ ಡಿಸಿಎಂ ಪರಮೇಶ್ವರ್ ಜಾಹೀರಾತು ಬೈಲಾದಲ್ಲಿ ವಾಣಿಜ್ಯ ಜಾಹೀರಾತಿಗೆ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದರು.

ಬಿಬಿಎಂಪಿ ಕೌನ್ಸಿಲ್ ಸಭೆ

ಆಡಳಿತ ಪಕ್ಷದವರಾದ ವಾಜಿದ್, ರಿಜ್ವಾನ್ ಅರ್ಷದ್, ಗುಣಶೇಖರ್ ಕೂಡಾ ಕಳೆದ ಸರ್ಕಾರದ ಈ ನಿರ್ಧಾರ ತಪ್ಪು ಎಂದರು. ಸಣ್ಣಪುಟ್ಟ ಜಾಹೀರಾತುದಾರರನ್ನು ಬೀದಿಗೆ ತಂದು ಕೋಟ್ಯಂತರ ರೂಪಾಯಿ ವ್ಯವಹಾರದ ದೊಡ್ಡ ದೊಡ್ಡ ಬಿಲ್ಡರ್ಸ್​ಗೆ ಕೊಡೋದು ಎಷ್ಟು ಸರಿ ಎಂದು ರಿಜ್ವಾನ್ ಅರ್ಷದ್ ಪ್ರಶ್ನಿಸಿದರು. ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ಆಯುಕ್ತ ಮಂಜುನಾಥ್ ಪ್ರಸಾದ್, 2018ರ ಆಗಸ್ಟ್​ ತಿಂಗಳಲ್ಲಿ ಜಾಹೀರಾತು ನಿಷೇಧಕ್ಕೆ ತೀರ್ಮಾನಿಸಲಾಯಿತು. ಆದ್ರೆ ಟೌನ್ ಹಾಲ್​​ನಲ್ಲಿ ಆಕ್ಷೇಪಣೆದಾರರ ಸಭೆ ನಡೆಸಿದಾಗ ವೈಯಕ್ತಿಕವಾಗಿ ನಿಂದನೆ ಮಾಡಲಾಯಿತು. ಜಾಹೀರಾತು ನಿಷೇಧ ಮಾಡಿರುವ ನನಗೂ, ನನ್ನ ಮಕ್ಕಳಿಗೂ ಶಾಪ ತಟ್ಟುತ್ತೆ ಎಂದಿದ್ದರು. ಆದರೆ ಈ ನಿರ್ಧಾರ ಮಾಡುವುದು ನಾನಲ್ಲ, ಕೌನ್ಸಿಲ್. ಕೌನ್ಸಿಲ್ ನಿರ್ಧಾರದಂತೆ ನಾನು ನಡೆಯುತ್ತೇನೆ. ಈ ಹೊಸ ಬೈಲಾ ನಿಯಮಕ್ಕೆ ಒಪ್ಪಿಗೆಯಿಲ್ಲವಾದರೆ ಅದೇ ನಿರ್ಣಯವನ್ನು ಸರ್ಕಾರಕ್ಕೆ ಕಳಿಸಬಹುದು ಎಂದರು.

ಅಲ್ಲದೆ ಆಗಸ್ಟ್​ 1ರಂದು ಹೈಕೋರ್ಟ್ ವಿಚಾರಣೆಯಲ್ಲೂ ಈ ವಿಚಾರ ಚರ್ಚೆಗೆ ಬರಲಿದೆ. ಆ ವೇಳೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿ ಮೂರು ತಿಂಗಳು ಆಗಿರುವುದರಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವುದರಿಂದ ಇದನ್ನು ಅನುಮೋದಿಸಲ್ಪಟ್ಟಿದೆ ಎಂದು ನಿರ್ಣಯ ಮಾಡಲು ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು.

ABOUT THE AUTHOR

...view details