ಬೆಂಗಳೂರು: ಜನವರಿ 26 ಗಣರಾಜ್ಯೋತ್ಸವ ಆಚರಣೆಗೆ ಬಿಬಿಎಂಪಿ ಕೇಂದ್ರ ಕಚೇರಿಗೆ ಹಾಜರಾಗದ ಅಧಿಕಾರಿಗಳನ್ನು ಮೇಯರ್ ಗೌತಮ್ ಕುಮಾರ್ ದೇಶದ್ರೋಹಿಗಳು ಎಂದಿದ್ದರು. ಆದರೆ ಇದೀಗ ಆ ಪದ ಕಠಿಣವಾಗಿದೆ ಹಿಂದಕ್ಕೆ ಪಡೆಯುತ್ತೇನೆ, ಆದ್ರೆ, ಧ್ವಜಾರೋಹಣಕ್ಕೆ ಬಾರದೇ ಗೈರಾದ ಅಧಿಕಾರಿಗಳ ಒಂದು ದಿನದ ಸಂಬಳವನ್ನು ಕಡಿತ ಮಾಡಲು ಆಯುಕ್ತರಿಗೆ ಸೂಚಿಸಿದ್ದೇನೆ ಎಂದಿದ್ದಾರೆ.
ಅಧಿಕಾರಿಗಳನ್ನು ದೇಶದ್ರೋಹಿ ಎಂದಿದ್ದ ಮೇಯರ್: ಮಾತು ಹಿಂಪಡೆಯುತ್ತೇನೆ ಎಂದಿದ್ಯಾಕೆ? - BBMP Mayor Gautam Kumar
ಜನವರಿ 26 ಗಣರಾಜ್ಯೋತ್ಸವ ಆಚರಣೆಗೆ ಬಿಬಿಎಂಪಿ ಕೇಂದ್ರ ಕಚೇರಿಗೆ ಹಾಜರಾಗದ ಅಧಿಕಾರಿಗಳನ್ನು ಮೇಯರ್ ಗೌತಮ್ ಕುಮಾರ್ ದೇಶದ್ರೋಹಿಗಳು ಎಂದಿದ್ದರು. ಆದರೆ, ಇದೀಗ ಆ ಪದ ಕಠಿಣವಾಗಿದೆ ಹಿಂದಕ್ಕೆ ಪಡೆಯುತ್ತೇನೆ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ರಾಷ್ಟ್ರಧ್ವಜಕ್ಕೆ ನಮಸ್ಕರಿಸಲು ಸಿಗೋದು ಎರಡು ಮೂರು ಅವಕಾಶ ಮಾತ್ರ. ಅದರಲ್ಲಿ ಬಿಬಿಎಂಪಿಯಲ್ಲಿ ದೊಡ್ಡ ಆಚರಣೆ ಇದ್ದಾಗ ಹಾಜರಾಗಲು ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಅದನ್ನು ಮೀರಿ ಅಧಿಕಾರಿಗಳು ಹಾಜರಾಗಿಲ್ಲ. ಶಾಲಾ ಮಕ್ಕಳನ್ನು ನಿಲ್ಲಿಸಿ ನಾವು ಸಂಖ್ಯಾಬಲ ತೋರಿಸಬೇಕಾಯ್ತು. ಇದರ ಅಗತ್ಯ ಇಲ್ಲ. ಇದು ಪಾಲಿಕೆಗೆ ಮಾಡಿದ ಅವಮಾನ. ಹಾಗಾಗಿ ಅವತ್ತು ದೇಶದ್ರೋಹಿಗಳು ಎಂದು ಪದಬಳಕೆ ಮಾಡಲಾಗಿತ್ತು. ಆ ಪದವನ್ನು ಹಿಂದಕ್ಕೆ ಪಡೆಯುತ್ತೇನೆ ಎಂದಿದ್ದಾರೆ.
ರಾಷ್ಟ್ರಧ್ವಜಕ್ಕೆ ಗೌರವ ತೋರಿಸುವುದು ಅಧಿಕಾರಿಗಳ ಜವಾಬ್ದಾರಿ. ಅದಕ್ಕೆ ಗೌರವ ತೋರಿಸುವ ಕೆಲಸ ಮಾಡದವರು ಇನ್ನು ಕರ್ತವ್ಯವನ್ನು ಎಷ್ಟು ನಿಷ್ಠೆಯಿಂದ ಮಾಡಬಲ್ಲರು ಎಂದು ಪ್ರಶ್ನಿಸಿದರು.