ಬೆಂಗಳೂರು: ಹೊಂಗಸಂದ್ರವನ್ನು ಕಂಟೈನ್ಮೆಂಟ್ ಏರಿಯಾ ಎಂದು ಘೋಷಿಸಲಾಗಿದೆ. ನಮ್ಮ ನಾಯಕರ ಮನವಿ ಮೇರೆಗೆ ನಗರದಲ್ಲಿರುವ ಕೆಲವು ಕ್ಲಬ್ಗಳನ್ನು ಕ್ವಾರಂಟೈನ್ಗೆ ಬಳಸಲು ಚಿಂತಿಸಲಾಗಿದ್ದು, ಈ ವಿಚಾರವಾಗಿ ಆಯುಕ್ತರ ಜೊತೆ ಮಾತನಾಡಿದ್ದೇನೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.
ಹೊಂಗಸಂದ್ರದಲ್ಲಿ 9 ಜನರಿಗೆ ಕೊರೊನಾ: ಮೇಯರ್ ಗೌತಮ್ ಕುಮಾರ್ ಹೇಳಿದ್ದೇನು?
ಹೊಂಗಸಂದ್ರದಲ್ಲಿ ನಿನ್ನೆ 12 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ 9 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅವರು ಯಾರೊಂದಿಗೆ ಸಂಪರ್ಕ ಹೊಂದಿದ್ರು ಎಂಬ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.
ಹೊಂಗಸಂದ್ರದಲ್ಲಿ ನಿನ್ನೆ 12 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ 9 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅವರು ಯಾರೊಂದಿಗೆ ಸಂಪರ್ಕ ಹೊಂದಿದ್ರು ಎಂಬ ಮಾಹಿತಿ ಕಲೆಹಾಕಲಾಗುತ್ತಿದೆ. ಅಲ್ಲದೇ ಈಗಾಗಲೇ ಹೊಂಗಸಂದ್ರದ 176 ಜನರಲ್ಲಿ 134 ಜನರನ್ನು ಸಿ.ವಿ. ರಾಮನ್ ನಗರ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದರು.
ಇಂದು ಬೆಳಗ್ಗೆ ಸುರಿದ ಮಳೆಗೆ ಲಗ್ಗೆರೆಯಲ್ಲಿ ರಸ್ತೆ ಕುಸಿದಿದ್ದು, ಸ್ಲಂ ಬೋರ್ಡ್ ನಿರ್ಮಿಸಿದ್ದ ಕಟ್ಟಡದ ಬಳಿ ಘಟನೆ ನಡೆದಿದೆ. ಅಧಿಕಾರಿಗಳಿಂದ ಘಟನೆ ಬಗ್ಗೆ ಮಾಹಿತಿ ಪಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದ್ರು.