ಬೆಂಗಳೂರು:2019ನೇ ಸಾಲಿನ ಕೆಂಪೇಗೌಡ ದಿನಾಚರಣೆಯನ್ನು ಬಿಬಿಎಂಪಿಯ ಮೇಯರ್ ಗಂಗಾಂಬಿಕೆ ಅವರು ಕೆಂಪೇಗೌಡ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟನೆ ಮಾಡಿದರು.
ಬಿಬಿಎಂಪಿಯ ಕೆಂಪೇಗೌಡ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಉದ್ಘಾಟಿಸಿದ ಮೇಯರ್ ಗಂಗಾಬಿಕೆ - ಕೆಂಪೇಗೌಡ ದಿನಾಚರಣೆ
ಇಂದು ಕೆಂಪೇಗೌಡ ದಿನಾಚರಣೆಯನ್ನು ಬಿಬಿಎಂಪಿಯಲ್ಲಿ ಆಚರಿಸುತ್ತಿದ್ದು, ಬಿಬಿಎಂಪಿಯ ಮೇಯರ್ ಗಂಗಾಂಬಿಕೆಯವರು ಕೆಂಪೇಗೌಡ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟನೆ ಮಾಡಿದರು. ಇವರಿಗೆ ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ , ಆಡಳಿತ ಪಕ್ಷದ ನಾಯಕ ವಾಜೀದ್, ವಿಶೇಷ ಆಯುಕ್ತರಾದ ರಂದೀಪ್ ಸಾಥ್ ನೀಡಿದರು.
ಬಿಬಿಎಂಪಿ ಕೇಂದ್ರ ಕಚೇರಿಯ ಮುಂಭಾಗದ ಕೆಂಪೇಗೌಡ ಪುತ್ಥಳಿ ಹಾಗೂ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಜಯಂತಿಗೆ ಚಾಲನೆ ನೀಡಲಾಯಿತು. ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್, ಆಡಳಿತ ಪಕ್ಷದ ನಾಯಕ ವಾಜೀದ್, ವಿಶೇಷ ಆಯುಕ್ತರಾದ ರಂದೀಪ್ ಮೇಯರ್ಗೆ ಸಾಥ್ ನೀಡಿದರು.
ಇನ್ನು ಮೇಖ್ರಿ ವೃತ್ತದ ಬಳಿಯ ಕೆಂಪೇಗೌಡ ಪುತ್ಥಳಿಯಿಂದ ಜ್ಯೋತಿ ತರುವ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದು, ನಗರದ ಲಾಲ್ಬಾಗ್ ಸೇರಿದಂತೆ ನಾಲ್ಕು ಗಡಿಗೋಪುರಗಳಿಂದ ಸಾಂಸ್ಕೃತಿಕ ತಂಡಗಳ ಮೂಲಕ ಜ್ಯೋತಿ ಕೇಂದ್ರ ಕಚೇರಿಗೆ ಬರಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಸಂಜೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.