ಬೆಂಗಳೂರು:ಪ್ಲಾಸ್ಟಿಕ್ ಕವರ್ ಬಳಸಿದ್ದಕ್ಕೆ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಸದ್ಯ 500 ರೂಪಾಯಿ ದಂಡ ತೆರಬೇಕಾಗಿದೆ.
ಪ್ಲಾಸ್ಟಿಕ್ ಬಳಸಿದ್ದಕ್ಕೆ 500 ರೂ. ದಂಡ ಕಟ್ಟಬೇಕಿದೆ ಬಿಬಿಎಂಪಿ ಮೇಯರ್ ಗಂಗಾಂಬಿಕೆ.. - ಮೇಯರ್ ಪ್ಲಾಸ್ಟಿಕ್ ಕವರ್ ಬಳಕೆ
ಪ್ಲಾಸ್ಟಿಕ್ ಬಳಕೆ ನಿಷೇಧವಿದ್ರೂ ಸಹ ಬಿಬಿಎಂಪಿ ಮೇಯರ್ ಪ್ಲಾಸ್ಟಿಕ್ ಬಳಸಿ ಸದ್ಯ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಫೋಟೋ ವೈರಲ್ ಆಗಿದ್ದೇ ತಡ ಮೇಯರ್ ಗಂಗಾಂಬಿಕೆ ಕ್ಷಮೆಯಾಚಿಸಿ ದಂಡ ತೆರುವುದಾಗಿ ತಿಳಿಸಿದ್ದಾರೆ.
ಜುಲೈ 30 ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮೇಯರ್ ಶುಭಾಶಯ ತಿಳಿಸಿದ್ದರು. ಈ ಸಂದರ್ಭ ಸಿಎಂಗೆ ಶುಭಕೋರಲು ಕೊಂಡೊಯ್ದಿದ್ದ ಡ್ರೈಫ್ರೂಟ್ಸ್ ಬುಟ್ಟಿಯ ಮೇಲ್ಪದರವನ್ನು ಪ್ಲಾಸ್ಟಿಕ್ನಿಂದ ಮುಚ್ಚಲಾಗಿತ್ತು.
ಇನ್ನು ಮೇಯರ್ ಪ್ಲಾಸ್ಟಿಕ್ ಬಳಕೆಯ ಫೋಟೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಇದರಿಂದ ಎಚ್ಚೆತ್ತ ಮೇಯರ್ ಗಂಗಾಂಬಿಕೆ ಕ್ಷಮೆಯಾಚಿಸಿದ್ದಾರೆ. ಅಲ್ಲದೆ ಪ್ಲಾಸ್ಟಿಕ್ ಕವರ್ ಬಳಸಿದ್ದು ತಪ್ಪು. ಹಾಗಾಗಿ 500 ರೂ. ದಂಡ ಕಟ್ಟುವುದಾಗಿ ತಿಳಿಸಿದ್ದಾರೆ. ಅಲ್ಲದೆ ತಾನೇ ಖುದ್ದು ಬಿಬಿಎಂಪಿ ಆರೋಗ್ಯ ಇಲಾಖೆಗೆ ತೆರಳಿ ದಂಡ ಕಟ್ಟೋದಾಗಿ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಹೇಳಿದ್ದಾರೆ.