ಕರ್ನಾಟಕ

karnataka

ETV Bharat / state

ವೃದ್ದನ ಮೇಲೆ ಬಿಬಿಎಂಪಿ ಕಸದ ಲಾರಿ ಹರಿಸಿ ಪರಾರಿಯಾಗಿದ್ದ ಚಾಲಕನ ಬಂಧನ - ಬೆಂಗಳೂರಿನಲ್ಲಿ ಬಿಬಿಎಂಪಿ ಕಸದ ಲಾರಿ ಚಾಲಕನ ಬಂಧನ

ಮಾರ್ಚ್ 31ರಂದು ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ವೃದ್ದನ ಮೇಲೆ ಬಿಬಿಎಂಪಿ ಕಸದ ಲಾರಿ ಹರಿದು ಸ್ಥಳದಲ್ಲೇ 70 ವರ್ಷದ ರಾಮಯ್ಯ ಸಾವನ್ನಪ್ಪಿದ್ದ. ಅಪಘಾತ ಮಾಡಿದ ಚಾಲಕ ಆಂಜಪ್ಪ ಡಂಪಿಂಗ್ ಯಾರ್ಡ್ ನಲ್ಲಿ ಲಾರಿ ನಿಲ್ಲಿಸಿ ತಲೆಮರೆಸಿಕೊಂಡಿದ್ದ. ಚಿಕ್ಕಜಾಲ ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬಿಬಿಎಂಪಿ ಕಸದ ಲಾರಿ ಚಾಲಕನ ಬಂಧನ
ಬಿಬಿಎಂಪಿ ಕಸದ ಲಾರಿ ಚಾಲಕನ ಬಂಧನ

By

Published : Apr 2, 2022, 7:06 PM IST

ಯಲಹಂಕ : ಬಿಬಿಎಂಪಿ ಕಸದ ಲಾರಿಗೆ ಸಿಲುಕಿ 70 ವರ್ಷದ ವೃದ್ದ ಸಾವನ್ನಪ್ಪಿದ್ದು, ಘಟನೆ ನಂತರ ತಲೆಮರೆಸಿಕೊಂಡಿದ್ದ ಲಾರಿ ಚಾಲಕನನ್ನ ಬಂಧಿಸುವಲ್ಲಿ ಚಿಕ್ಕಜಾಲ ಪೊಲೀಸರು ಯಶಸ್ವಿಯಾಗಿದ್ದಾರೆ. ಮಾರ್ಚ್ 31ರಂದು ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ವೃದ್ದನ ಮೇಲೆ ಬಿಬಿಎಂಪಿ ಕಸದ ಲಾರಿ ಹರಿದು ಸ್ಥಳದಲ್ಲೇ 70 ವರ್ಷದ ರಾಮಯ್ಯ ಸಾವನ್ನಪ್ಪಿದ್ದ.

ಅಪಘಾತ ಮಾಡಿದ ಚಾಲಕ ಆಂಜಪ್ಪ ಡಂಪಿಂಗ್ ಯಾರ್ಡ್ ನಲ್ಲಿ ಲಾರಿ ನಿಲ್ಲಿಸಿ ತಲೆಮರೆಸಿಕೊಂಡಿದ್ದ. ಚಿಕ್ಕಜಾಲ ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ.. ಲಾರಿ ಹರಿದು ವೃದ್ಧನ ದೇಹ ಛಿದ್ರ ಛಿದ್ರ

ABOUT THE AUTHOR

...view details