ಕರ್ನಾಟಕ

karnataka

ETV Bharat / state

ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ: ಕಸದ ಲಾರಿ ಬೈಕ್​ ಡಿಕ್ಕಿ, ಸವಾರ ಸಾವು - ಈಟಿವಿ ಭಾರತ ಕನ್ನಡ

ಬೆಂಗಳೂರಿನ ಕಸದ ಲಾರಿ ಮತ್ತೊಂದು ಬಲಿ ಪಡೆದಿದೆ. ಕೆಲ ತಿಂಗಳ ಹಿಂದೆ ಸರಣಿಯಾಗಿ ಅಪಘಾತಗಳು ನಡೆಯುತ್ತಿವೆ . ಇದರಿಂದ ಎಚ್ಚೆತ್ತ ಬಿಬಿಎಂಪಿ ಕೆಲವು ಕ್ರಮ ಜರುಗಿಸಿತ್ತಾದರೂ, ಇಂದು ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಕೈಗಾರಿಕಾ ಪ್ರದೇಶದಲ್ಲಿ ನಡೆದ ಅಪಘಾತದಲ್ಲಿ ಬೈಕ್​ ಸವಾರ ಸಾವನ್ನಪ್ಪಿದ್ದಾನೆ.

Etv Bharat
ಕಸದ ಲಾರಿ ಬೈಕ್​ ಡಿಕ್ಕಿ

By

Published : Nov 22, 2022, 4:07 PM IST

ನೆಲಮಂಗಲ: ಬಿಬಿಎಂಪಿ‌ ಕಸದ ಲಾರಿ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ‌ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಅಸ್ಸೋಂ ಮೂಲದ ಬಾಬು ಪೇಗು (35) ಎಂಬಾತ ಕಸದ ಲಾರಿಯಿಂದ ಮೃತಪಟ್ಟ ದುರ್ದೈವಿ.

ಅಂದಹಾಗೆ ಬೆಂಗಳೂರಿನ ಕಸವನ್ನು ಬಿಬಿಎಂಪಿ ಲಾರಿಗಳ‌ ಮೂಲಕ ದೊಡ್ಡಬಳ್ಳಾಪುರ ಕಡೆಯ ಎಂಎಸ್​ಜಿಪಿ ಕಸದ ಘಟಕಕ್ಕೆ ಸಾಗಿಸಲಾಗುತ್ತದೆ. ಹೀಗೆ ಕಸ ತುಂಬಿಕೊಂಡು ಬರುತ್ತಿದ್ದ ಬಿಬಿಎಂಪಿ ಲಾರಿ ಬೈಕ್​ಗೆ ಡಿಕ್ಕಿ ಹೊಡೆದಿದ್ದು, ಕೆಳಗೆ ಬಿದ್ದ ಬೈಕ್ ಸವಾರನ ತಲೆ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಘಟನೆ ಬಳಿಕ ಬಿಬಿಎಂಪಿ ಲಾರಿ ಚಾಲಕ ಸ್ಥಳದಲ್ಲೇ ಗಾಡಿ‌ಬಿಟ್ಟು ಪರಾರಿಯಾಗಿದ್ದಾನೆ.‌ ಸ್ಥಳಕ್ಕೆ ಡಾಬಸ್ ಪೇಟೆ ಪೊಲೀಸರು‌ ಭೇಟಿ‌ ನೀಡಿ‌ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಬಿಬಿಎಂಪಿ ಕಸದ ಲಾರಿ ಹರಿದು ಬಾಲಕಿ ಸಾವು.. 6ಕ್ಕೂ ಅಧಿಕ ಮಂದಿಗೆ ಗಾಯ

ABOUT THE AUTHOR

...view details