ಕರ್ನಾಟಕ

karnataka

ETV Bharat / state

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಬೆನ್ನಲ್ಲೇ ಪಾಲಿಕೆಯಿಂದ ಮಸೀದಿ ತೆರವಿಗೆ ನೋಟಿಸ್ - BBMP issued notice to demolish the vijayanagara Mosque

ಈದ್ಗಾ ಮೈದಾನ ವಿವಾದ ಬೆನ್ನಲ್ಲೇ ಮಸೀದಿ ತೆರವಿಗೆ ನೋಟಿಸ್​- ಮಸ್ಜಿದ್ ಎ ಅಲ್ ಖುಬ ಎಂಬ ಮಸೀದಿ ತೆರವಿಗೆ ಬಿಬಿಎಂಪಿಯಿಂದ ನೋಟಿಸ್ - ಪ್ರಾದೇಶಿಕ ಆಯುಕ್ತರ ಆದೇಶದ ಮೇರೆಗೆ ಕ್ರಮ ಎಂದ ಅಧಿಕಾರಿಗಳು

ಬಿಬಿಎಂಪಿ
ಬಿಬಿಎಂಪಿ

By

Published : Jul 18, 2022, 7:21 PM IST

ಬೆಂಗಳೂರು: ಚಾಮರಾಜಪೇಟೆ ಮೈದಾನದ ಕಿಚ್ಚು ಆರುವ ಮುನ್ನವೇ ಮತ್ತೊಂದು ವಿಚಾರ ಮುನ್ನಲೆಗೆ ಬಂದಿದೆ. ಒತ್ತುವರಿ ಆರೋಪದ ಹಿನ್ನೆಲೆ ವಿಜಯ ನಗರದ ಮಸೀದಿಯೊಂದನ್ನು ತೆರವುಗೊಳಿಸಲು ಬಿಬಿಎಂಪಿ ಮುಂದಾಗಿದೆ.

ಪಾಲಿಕೆ ನೋಟಿಸ್​

ಮಸ್ಜಿದ್ ಎ ಅಲ್ ಖುಬ ಎಂಬ ಮಸೀದಿಯನ್ನು ತೆರವುಗೊಳಿಸಲು ಬಿಬಿಎಂಪಿಯಿಂದ ನೋಟಿಸ್ ನೀಡಲಾಗಿದೆ. ಸಾರ್ವಜನಿಕರಿಗೆ ಮೀಸಲಿಟ್ಟ ಐದು ಅಡಿ ಪ್ಯಾಸೇಜ್ ಒತ್ತುವರಿ ಮಾಡಿಕೊಂಡ ಮಸೀದಿ ಕಟ್ಟಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.

ಬಿಬಿಎಂಪಿಯಿಂದ ನೋಟಿಸ್​ ನೀಡಿರುವುದು

ಈಗ ಒತ್ತುವರಿ ಮಾಡಿ ನಿರ್ಮಿಸಿರುವ ಭಾಗವನ್ನು ತೆರವು ಮಾಡಿ ಬಿಬಿಎಂಪಿ ವಶಕ್ಕೆ ಪಡೆಯಲು ಪ್ರಾದೇಶಿಕ ಆಯುಕ್ತರು ಆದೇಶ ಮಾಡಿದ್ದರು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಪಾಲಿಕೆಯಿಂದ ಮಸೀದಿ ತೆರವಿಗೆ ನೋಟಿಸ್

ನಿವೇಶನ ಸಂಖ್ಯೆ 13 ಹಾಗೂ 15 ರಲ್ಲಿ ಮಸೀದಿ ನಿರ್ಮಾಣವಾಗಿದೆ. ನಿವೇಶನ ಸಂಖ್ಯೆ 14, 5.5 ಅಡಿ ಅಗಲ, 45 ಅಡಿ ಉದ್ದವಿತ್ತು. ಅದನ್ನು ಸಾರ್ವಜನಿಕರ ಓಡಾಟಕ್ಕೆ ಪ್ಯಾಸೇಜ್ ಗೆ ಬಳಸಬೇಕಿದ್ದು, ದುರ್ಬಳಕೆ ಆರೋಪ ಕೇಳಿ ಬಂದಿತ್ತು ಎಂದು ಮಾಹಿತಿ ನೀಡಿದ್ದಾರೆ.

ಪಾಲಿಕೆಯಿಂದ ಮಸೀದಿ ತೆರವಿಗೆ ನೋಟಿಸ್

ಓದಿ:ಜಿಎಸ್​ಟಿ ಏರಿಕೆ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ : ಹೆಚ್​ಡಿಕೆ ವಾಗ್ದಾಳಿ

For All Latest Updates

TAGGED:

ABOUT THE AUTHOR

...view details