ಕರ್ನಾಟಕ

karnataka

ETV Bharat / state

ನಿರ್ದಿಷ್ಟ ಎತ್ತರ ಮೀರಿ ಕಟ್ಟಡ ನಿರ್ಮಿಸಿರುವ ಮಾಲೀಕರಿಗೆ ಪಾಲಿಕೆ ನೋಟಿಸ್​.. - ಬೆಂಗಳೂರಿನಲ್ಲಿ ಕಟ್ಟಡಗಳ ಮಾಲೀಕರಿಗೆ ಬಿಬಿಎಂಪಿ ನೋಟಿಸ್‌ ಜಾರಿ

ಯಲಹಂಕ ವಾಯು ನೆಲೆಯ ಸುತ್ತ ಸುಮಾರು 5 ಕಿಲೋಮೀಟರ್ ನೋ ಫ್ಲೈಯಿಂಗ್ ಝೋನ್ ಎಂದು ಉಲ್ಲೇಖಿಸಲಾಗಿದೆ ಎಂದು ಬಿಬಿಎಂಪಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಬಿಬಿಎಂಪಿ
ಬಿಬಿಎಂಪಿ

By

Published : Jun 3, 2022, 5:48 PM IST

ಬೆಂಗಳೂರು: ಯಲಹಂಕ ವಾಯುನೆಲೆ ಸಮೀಪ ಕಾನೂನು ಬಾಹಿರವಾಗಿ ತಲೆ ಎತ್ತಿರುವ 11 ಕಟ್ಟಡಗಳ ಮಾಲೀಕರಿಗೆ ಬಿಬಿಎಂಪಿ ನೋಟಿಸ್‌ ನೀಡಿದೆ. ನಿರ್ದಿಷ್ಟ ಎತ್ತರವನ್ನು ಮೀರಿ ಕಟ್ಟಡ ನಿರ್ಮಿಸಿರುವ ಮಾಲೀಕರಿಗೆ ಈ ನೋಟಿಸ್ ನೀಡಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು ಕಟ್ಟಡಗಳನ್ನು ತೆರವುಗೊಳಿಸಲು ಸಹ ಆದೇಶ ಹೊರಡಿಸಲಾಗಿದೆ. ವಿಮಾನ ಸುರಕ್ಷತಾ ದೃಷ್ಟಿಯಿಂದ ಕಟ್ಟಡ ತೆರವಿಗೆ ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

ನೋ ಫ್ಲೈಯಿಂಗ್ ಝೋನ್:ಯಲಹಂಕ ವಾಯು ನೆಲೆಯ ಸುತ್ತ ಸುಮಾರು 5 ಕಿಲೋಮೀಟರ್ ನೋ ಫ್ಲೈಯಿಂಗ್ ಝೋನ್ ಎಂದು ಉಲ್ಲೇಖಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಓದಿ:ಮೋದಿ ಅಧಿಕಾರಕ್ಕೆ ಬಂದ ನಂತರ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಗೌರವ ಸಿಕ್ಕಿದೆ: ಶೋಭಾ ಕರಂದ್ಲಾಜೆ

For All Latest Updates

TAGGED:

ABOUT THE AUTHOR

...view details