ಬೆಂಗಳೂರು:ಪ್ಲಾಸ್ಟಿಕ್ ನಿಷೇಧವಾಗಿದೆ. ಪ್ಲಾಸ್ಟಿಕ್ ಪರಿಸರಕ್ಕೆ ಹಾನಿಕಾರಕ ಎಂದೆಲ್ಲಾ ಜನಜಾಗೃತಿ ಮೂಡಿಸಿದಬಳಿಕವೂ ನಗರದ ಹಲವೆಡೆ ಎಗ್ಗಿಲ್ಲದೆ ಪ್ಲಾಸ್ಟಿಕ್ ಬಳಸಲಾಗ್ತಿದೆ. ಅದರಲ್ಲೂ ಪ್ರಮುಖ ಹೊಟೇಲ್ಗಳು, ವಾಣಿಜ್ಯ ಕಟ್ಟಡಗಳು ನಿಯಮಗಳನ್ನ ಗಾಳಿಗೆ ತೂರಿವೆ.
ಹೌದು, ಬರಿ ಮಾತಲ್ಲಿ ಹೇಳಿ ಸುಸ್ತಾದ ಬಿಬಿಎಂಪಿ ಅಧಿಕಾರಿಗಳು ಈಗ ಸಾವಿರಾರು ರುಪಾಯಿದಂಡ ಹಾಕುವ ಮೂಲಕ ಜಾಗೃತಿಯ ಬರೆ ಹಾಕಲು ಮುಂದಾಗಿದ್ದಾರೆ. ಐದು ಸಾವಿರದಿಂದ ಐವತ್ತು ಸಾವಿರದವರೆಗೆ ದಂಡ ಹಾಕಿ, ನಿಯಮ ಪಾಲಿಸುವಂತೆ ಪಾಲಿಕೆ ಒತ್ತಡ ಹೇರುತ್ತಿದೆ.
ಮಹಾಲಕ್ಷ್ಮಿಪುರ ವ್ಯಾಪ್ತಿಯ, ರಾಜಾಜಿನಗರದ ಎಂಪಾಯರ್ ಹೊಟೇಲ್ಗೆ 25,000 ರುಪಾಯಿ ದಂಡ ವಿಧಿಸುವುದಲ್ಲದೆ,ಅಲ್ಲಿದ್ದ ಪ್ಲಾಸ್ಟಿಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಷ್ಟೇಅಲ್ಲದೆಪ್ಲಾಸ್ಟಿಕ್ ಬಳಸುತ್ತಿದ್ದ ಮಹದೇವಪುರ ಝೋನ್ ಹೋಟೇಲ್ಗಳಿಗೆ 50 ಸಾವಿರ, ಚಿಕ್ಕಪೇಟೆ ವ್ಯಾಪ್ತಿಯ ಹೊಟೇಲ್ಗಳಿಗೆ 20,500 ರೂಪಾಯಿ ದಂಡ ವಿಧಿಸಲಾಗಿದೆ. ಚರ್ಚ್ ಸ್ಟ್ರೀಟ್ ಭೀಮಾಸ್ ಹೋಟೇಲ್ ರಸ್ತೆಗೆ ನೀರು ಬಿಟ್ಟಿರುವುದರಿಂದ ಒಂದು ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. ಯಶವಂತಪುರದ ಕೆಲ ಹೋಟೇಲ್ ಗಳಿಗೆ25 ಸಾವಿರ ರೂಪಾಯಿ ದಂಡ ಹಾಗೂಕಸವನ್ನು ರಸ್ತೆಗೆ ಎಸೆದು ಬೆಂಕಿ ಹಾಕಿರುವುದಕ್ಕೆನಂದಿನಿ ಲೇಔಟ್ನ ನಿರುಪಮ್ ಲೀತು ಫ್ಯಾಕ್ಟರಿಗೆ 50 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಹೋಟೇಲ್ ಹಾಗೂ ವಾಣಿಜ್ಯ ಕಟ್ಟಡಗಳಂತಹ ಬಲ್ಕ್ ಕಸ ಉತ್ಪತ್ತಿ ಮಾಡುವವರು, ಸರಿಯಾದ ವಿಧಾನದಲ್ಲಿ ಕಸವನ್ನು ನಿರ್ವಹಣೆ ಮಾಡಬೇಕಾಗಿರುತ್ತದೆ. ಹಸಿ ಕಸ ಒಣ ಕಸ ವಿಂಗಡಿಸಿ, ಕಸ ವಿಲೇವಾರಿಗೆ ನೀಡಬೇಕಾಗುತ್ತದೆ. ಅದರ ಬದಲು ರಸ್ತೆಗೆ ಎಸೆಯೋದು, ರಾಜಕಾಲುವೆಗಳಿಗೆ ಎಸೆಯೋದುಅಥವಾ ಸುಟ್ಟು ಹಾಕುವುದು ಮಾಡಿದರೆ ಅಂಥವರಿಗೆ ಪಾಲಿಕೆ ಅಧಿಕಾರಿಗಳು ತಕ್ಕ ಪಾಠ ಕಲಿಸಲಿದ್ದಾರೆ.
ಇದೀಗ ಸ್ಲಿಪ್ ಹರಿದು ದಂಡ ಹಾಕುತ್ತಿರುವ ಬಿಬಿಎಂಪಿ ಅಧಿಕಾರಿಗಳು, ಇನ್ನು ಕೆಲವೇ ದಿನಗಳಲ್ಲಿ ದಂಡ ವಿಧಿಸುವುದಕ್ಕಾಗಿಯೇ ಅಭಿವೃದ್ಧಿಪಡಿಸಿದ ಆಪ್ಮೂಲಕ ದಂಡ ವಿಧಿಸಲಿದ್ದಾರೆ. ಹೀಗಾಗಿ ಪಾಲಿಕೆಯ ಕಣ್ತಪ್ಪಿಸಿ ಪ್ಲಾಸ್ಟಿಕ್ ಬಳಕೆಮಾಡುವವರುಇನ್ಮುಂದೆಯಾದ್ರು ಎಚ್ಚೆತ್ತುಕೊಳ್ಳೋದು ಒಳಿತು.ಇಲ್ಲದಿದ್ರೆ ದಂಡ ಪಾವತಿಸಿ ಜೇಬಿಗೆ ಕತ್ತರಿ ಹಾಕಿಸಿಕೊಳ್ಳೋದು ಗ್ಯಾರಂಟಿ.