ಕರ್ನಾಟಕ

karnataka

ETV Bharat / state

ರಾಮನವಮಿ ಹಿನ್ನೆಲೆ ಮಾಂಸ ಮಾರಾಟ, ಪ್ರಾಣಿವಧೆ ನಿಷೇಧ: ಬಿಬಿಎಂಪಿ ಸುತ್ತೋಲೆ - etv bharata kannada

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಮನವಮಿ ಹಿನ್ನೆಲೆ ಮಾ.30 ಗುರುವಾರದಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿ ವಧೆಯನ್ನು ನಿಷೇಧಿಸಿದೆ.

bbmp-imposing-meat-sale-and-animal-slaughtering-in-gengaluru-on-march-30
ರಾಮನವಮಿ ಹಿನ್ನೆಲೆ ಮಾಂಸ ಮಾರಾಟ, ಪ್ರಾಣಿ ಹತ್ಯೆ ನಿಷೇಧ: ಬಿಬಿಎಂಪಿ

By

Published : Mar 29, 2023, 10:30 PM IST

ಬೆಂಗಳೂರು: ರಾಮನವಮಿ ಹಿನ್ನೆಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾರ್ಚ್ 30 ರ ಗುರುವಾರದಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿವಧೆ ನಿಷೇಧಿಸಿದೆ. ಮಾರ್ಚ್ 30ರಂದು ರಾಮನವಮಿ ಪ್ರಯುಕ್ತ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿವಧೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಸುತ್ತೋಲೆಯನ್ನು ಜಂಟಿ ನಿರ್ದೇಶಕರು (ಪ್ರಾಣಿ ಕಲ್ಯಾಣ) ಹೊರಡಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆದೇಶಕ್ಕೆ ಹಲವರು ಆಕ್ರೋಶ ಹೊರಹಾಕಿದ್ದಾರೆ. ಇಂತಹ ನಿ‍ಷೇಧಗಳು ಇಂಟರ್‌ನೆಟ್ ಆಧಾರಿತ ಮಾಂಸ ಮಾರಾಟಗಾರರಿಗೆ ಸಹಾಯ ಮಾಡಲು ಹೊರಡಿಸಲಾಗುತ್ತಿದೆ ಎಂದು ಮಾಂಸ ಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ಹೊರಡಿಸಿರುವ ಸುತ್ತೋಲೆ

ಮಹಾ ಶಿವರಾತ್ರಿ ಸಂದರ್ಭ ಪ್ರಾಣಿ ಬಲಿ ನಿಷೇಧಿಸಿದ್ದ ಪಾಲಿಕೆ:ಫೆಬ್ರವರಿಯಲ್ಲಿ, ಮಹಾ ಶಿವರಾತ್ರಿ ಸಂದರ್ಭದಲ್ಲಿ ಮಾಂಸ ಮಾರಾಟ ಮತ್ತು ವಧೆ ನಿಷೇಧಿಸಿ ಬಿಬಿಎಂಪಿ ಇದೇ ರೀತಿಯ ಆದೇಶವನ್ನು ಹೊರಡಿಸಿತ್ತು.

ರಾಮನವಮಿ 2023 ರ ಆಚರಣೆ:ಗುರುವಾರ ದೇಶಾದ್ಯಂತ ನಡೆಯಲಿರುವ ರಾಮ ನವಮಿ 2023 ರ ಆಚರಣೆಗೆ ಶ್ರೀರಾಮನ ಭಕ್ತರು ಎಲ್ಲ ರೀತಿಯಿಂದ ಸಿದ್ಧರಾಗಿದ್ದಾರೆ. ಈ ದಿನವನ್ನು ಪ್ರಪಂಚದಾದ್ಯಂತ ಹಿಂದೂಗಳು ಉತ್ಸಾಹ ಮತ್ತು ವಿಜೃಂಭಣೆಯಿಂದ ಆಚರಿಸುತ್ತಾರೆ. ವಿವಿಧ ಭಕ್ತರು ದೇವಾಲಯಗಳಿಗೆ ಹೋಗುತ್ತಾರೆ. ಅಲ್ಲಿ ಪ್ರಾರ್ಥನೆಯನ್ನೂ ಸಲ್ಲಿಸುತ್ತಾರೆ ಮತ್ತು ಭಜನೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಅವರಲ್ಲಿ ಹೆಚ್ಚಿನ ಭಕ್ತರು ರಾಮನವಮಿಯ ಈ ಹಬ್ಬದ ಸಂದರ್ಭಕ್ಕೆ ಮುಂಚಿತವಾಗಿ ತಪಸ್ಸು ಮತ್ತು ಮಂತ್ರಗಳನ್ನು ಪಠಿಸುತ್ತಾರೆ.

ಈ ದಿನದಂದು ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಾನ್ ವಿಗ್ರಹಗಳೊಂದಿಗೆ ವಿಶೇಷ ಮೆರವಣಿಗೆಗಳನ್ನು ನಡೆಸಲಾಗುತ್ತದೆ. ರಾಮ ನವಮಿ ಹಬ್ಬವು ಮುಖ್ಯವಾಗಿ ಭಗವಾನ್ ವಿಷ್ಣುವಿನ ಏಳನೇ ಅವತಾರವೆಂದು ನಂಬಲಾದ ಅಯೋಧ್ಯೆಯ ರಾಜಕುಮಾರ ಭಗವಾನ್ ರಾಮನ ಜನ್ಮ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ. ಈ ಹಬ್ಬವನ್ನು ಚೈತ್ರ ಮಾಸದ ಶುಕ್ಲ ಪಕ್ಷದ 9ನೇ ದಿನ ಆಚರಿಸಲಾಗುತ್ತದೆ.

ಇದನ್ನೂ ಓದಿ:ನಾಳೆ ರಾಮನವಮಿ.. ದೇಶಾದ್ಯಂತ ಹೀಗಿರಲಿದೆ ಆಚರಣೆ

ABOUT THE AUTHOR

...view details