ಕರ್ನಾಟಕ

karnataka

ETV Bharat / state

ಬೆಂಗಳೂರು: ತೆರಿಗೆ ವಂಚಿಸಿರುವ ಕಾಲೇಜು ಎದುರು ಬಿಬಿಎಂಪಿಯಿಂದ ತಮಟೆ ಚಳವಳಿ

ತೆರಿಗೆ ಕಟ್ಟದ ಹಿನ್ನೆಲೆ ಮಾನ್ಯತಾ ಟೆಕ್ ಪಾರ್ಕ್ ಮಾಲೀಕರಿಗೆ ವಾರೆಂಟ್ ನೀಡಿರುವ ಬಿಬಿಎಂಪಿ ಜಂಟಿ ಆಯುಕ್ತರು, ತೆರಿಗೆ ಪಾವತಿಸುವಂತೆ ಸೂಚಿಸಿದ್ದಾರೆ. 72,70,90,177 ರೂ. ತೆರಿಗೆ ಬಾಕಿ ಉಳಿಸಿಕೊಂಡಿದೆ. ಸಮೀಕ್ಷೆಯಲ್ಲಿ ತೆರಿಗೆ ವಂಚನೆ ಮಾಡಿರೋದು ಕಂಡುಬಂದಿದೆ.‌ 2018-19 ನೇ ಸಾಲಿನಲ್ಲಿ ನಡೆದಿದ್ದ ಸರ್ವೆಯಲ್ಲಿ ಸುಳ್ಳು ಅಳತೆ ನೀಡಿರುವುದು ಗೊತ್ತಾಗಿದೆಯಂತೆ.

bbmp-gave-notice-to-tax-fraud-collage
ತೆರಿಗೆ ವಂಚಿಸಿರುವ ಕಾಲೇಜು ಎದುರು ಬಿಬಿಎಂಪಿಯಿಂದ ತಮಟೆ ಚಳುವಳಿ

By

Published : Feb 2, 2022, 9:58 PM IST

ಬೆಂಗಳೂರು: ಬಜೆಟ್ ಹಿನ್ನೆಲೆ ಹಣಕಾಸು ಜೋಡಣೆಗೆ ಮುಂದಾಗಿರುವ ಬಿಬಿಎಂಪಿ, ಕೋಟ್ಯಂತರ ರೂಪಾಯಿ ತೆರಿಗೆ ಪಾವತಿಸದ ವಂಚಕರಿಗೆ ನೋಟಿಸ್ ನೀಡಿ ಆಸ್ತಿ ಜಪ್ತಿ ಮಾಡುವುದಾಗಿ ಬಿಸಿ ಮುಟ್ಟಿಸಲು ಮುಂದಾಗಿದೆ.

ಬುಧವಾರ ಎಂ. ಎಸ್ ಪಾಳ್ಯದ ಸಂಭ್ರಮ್ ಕಾಲೇಜು ಎದುರು ಬಿಬಿಎಂಪಿ ತಮಟೆ ಚಳುವಳಿ ನಡೆಸಿತು. ಸಂಭ್ರಮ್ ಕಾಲೇಜ್ ಮುಂಭಾಗ ತಮಟೆ ಭಾರಿಸಿ ನೋಟಿಸ್ ಅಂಟಿಸುವ ಮೂಲಕ ತೆರಿಗೆ ಪಾವತಿಸುವಂತೆ ಎಚ್ಚರಿಕೆ ನೀಡಿತು.

ಸಂಭ್ರಮ್ ಕಾಲೇಜು 10 ಕೋಟಿ 4 ಲಕ್ಷ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಇದರ ಆಸ್ತಿಯನ್ನು ಕಂದಾಯ ಪರಿಷ್ಕರಣೆಗೆ ಒಳಪಡಿಸಲಾಗಿತ್ತು. 10 ವರ್ಷದಿಂದ ತೆರಿಗೆಯಲ್ಲಿ ವ್ಯತ್ಯಾಸ ಮಾಡಿ ಬಿಬಿಎಂಪಿಗೆ ವಂಚಿಸಿರುವ ಆರೋಪವೂ ಸಂಭ್ರಮ್ ಕಾಲೇಜ್ ಮೇಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕೋಟಿಗಟ್ಟಲೆ ತೆರಿಗೆ ಕಟ್ಟಡ ಮಾನ್ಯತಾ ಟೆಕ್ ಪಾರ್ಕ್:ತೆರಿಗೆ ಕಟ್ಟದ ಹಿನ್ನೆಲೆ ಮಾನ್ಯತಾ ಟೆಕ್ ಪಾರ್ಕ್ ಮಾಲೀಕರಿಗೆ ವಾರೆಂಟ್ ನೀಡಿರುವ ಬಿಬಿಎಂಪಿ ಜಂಟಿ ಆಯುಕ್ತರು, ತೆರಿಗೆ ಪಾವತಿಸುವಂತೆ ಸೂಚಿಸಿದ್ದಾರೆ. 72,70,90,177 ರೂ. ತೆರಿಗೆ ಬಾಕಿ ಉಳಿಸಿಕೊಂಡಿದೆ. ಸಮೀಕ್ಷೆಯಲ್ಲಿ ತೆರಿಗೆ ವಂಚನೆ ಮಾಡಿರೋದು ಕಂಡು ಬಂದಿದೆ.‌ 2018-19 ನೇ ಸಾಲಿನಲ್ಲಿ ನಡೆದಿದ್ದ ಸರ್ವೆಯಲ್ಲಿ ಸುಳ್ಳು ಅಳತೆ ನೀಡಿರುವುದು ಗೊತ್ತಾಗಿದೆಯಂತೆ.

ಚೆಕ್ ಬೌನ್ಸ್ ಮಾಡಿರುವ ರಾಯಲ್ ಗ್ರಾಂಡ್ ಕಲ್ಯಾಣ ಮಂಟಪ: ರಾಯಲ್ ಗ್ರಾಂಡ್ ಕಲ್ಯಾಣ ಮಂಟಪಕ್ಕೆ 2012-2013 ರಿಂದ ಈ ತಹಲ್​ವರೆಗೂ ಆಸ್ತಿ ತೆರಿಗೆ ಬಾಕಿ ಮೊತ್ತ ರೂ. 70,68,930/- ಗಳು ಬಾಕಿ ಇದೆ. ಬಾಕಿ ವಸೂಲಾತಿ ಸಂಬಂಧ ನೀಡಲಾಗಿದ್ದ ನೋಟಿಸ್‌ಗೆ ಕಳೆದ ತಿಂಗಳು ನೀಡಲಾಗಿತ್ತು. ಕೊಟ್ಟ 9 ಲಕ್ಷ ಚೆಕ್ ಬೌನ್ಸ್ ಆಗಿದೆ. ಕೂಡಲೇ ಬಾಕಿ ತೆರಿಗೆ ಕಟ್ಟಿ, ಇಲ್ಲದಿದ್ದರೆ ಜಪ್ತಿ ಮಾಡುವ ಎಚ್ಚರಿಕೆಯನ್ನು ಪಾಲಿಕೆ ನೀಡಿದೆ.

ಓದಿ:ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

ABOUT THE AUTHOR

...view details