ಬೆಂಗಳೂರು :ಕೋವಿಡ್ ನಿಯಮ ಪಾಲಿಸದ ಮಾಲ್ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಲು ಸರ್ಕಾರ ಆದೇಶಿಸಿತ್ತು. ಅದರಂತೆ ಇಂದು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಗರುಡಾ ಮಾಲ್ ಮೇಲೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ್ದರು.
ಆರೋಗ್ಯ ಇಲಾಖೆ ನೀಡುರುವ ಆದೇಶದ ಪ್ರಕಾರ ಮಾಲ್/ಚಿತ್ರಮಂದಿರಗಳಿಗೆ ಎರಡು ಡೋಸ್ ಲಸಿಕೆ ಪಡೆದವರಿಗೆ ಅನುಮತಿ ಇದೆ. ಆದರೆ, ಗರುಡಾ ಮಾಲ್‌ಗೆ ಬಂದಂತಹ ಜನರು ಲಸಿಕೆ ಪಡೆದಿದ್ದರೋ, ಇಲ್ಲವೋ ಎಂಬುದನ್ನು ಪರಿಶೀಲಿಸಿಲ್ಲ. ಆ ಮೂಲಕ ಕೋವಿಡ್ ನಿಯಮ ಪಾಲಿಸಿಲ್ಲ ಎಂದು ತಿಳಿದು ಬಂದಿದೆ.