ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಪುತ್ರ ಆತ್ಮಹತ್ಯೆ

ಬಿಬಿಎಂಪಿ ಮಾಜಿ ಕಾರ್ಪೋರೇಟರೊಬ್ಬರ ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

BBMP Ex corporator son suicide, ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಪುತ್ರ ಆತ್ಮಹತ್ಯೆ
ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಪುತ್ರ ಆತ್ಮಹತ್ಯೆ

By

Published : Aug 10, 2023, 4:31 PM IST

Updated : Aug 10, 2023, 8:10 PM IST

ಬೆಂಗಳೂರಲ್ಲಿ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಪುತ್ರ ಆತ್ಮಹತ್ಯೆ

ಬೆಂಗಳೂರು:ಬಿಬಿಎಂಪಿ ಮಾಜಿ ಸದಸ್ಯ ದೊಡ್ಡಯ್ಯ ಎಂಬುವವರ ಪುತ್ರ ಗೌತಮ (29) ಆತ್ಮಹತ್ಯೆಗೆ ಶರಣಾಗಿದ್ದಾರೆ. ಬುಧವಾರ ರಾತ್ರಿ ಗೌತಮ್ ಮನೆಯಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.‌ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿರುವ ಚಂದ್ರಾಲೇಔಟ್ ಪೊಲೀಸರು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಗೌತಮ್​​ಗೆ‌ ಮದುವೆ ಮಾಡಲು ಇತ್ತೀಚೆಗೆ ಪೋಷಕರು ಕನ್ಯೆ ಹುಡುಕುತ್ತಿದ್ದರು. ಇವರ ತಂದೆ ದೊಡ್ಡಯ್ಯ ಕಾಂಗ್ರೆಸ್​​ನಲ್ಲಿ ಗುರುತಿಸಿಕೊಂಡಿದ್ದು, ಅತ್ತಿಗುಪ್ಪೆ ವಾರ್ಡ್​​ನ ಮಾಜಿ ಕಾರ್ಪೋರೇಟರ್ ಆಗಿದ್ದಾರೆ. ಗೌತಮ್ ತಂದೆ ದೊಡ್ಡಣ್ಣ ಈ ಬಗ್ಗೆ ಪ್ರತಿಕ್ರಿಯಿಸಿ, ನನ್ನ ಮಗ ಗುತ್ತಿಗೆದಾರ ಅಲ್ಲ ಎಂದು ತಿಳಿಸಿದ್ದಾರೆ.

'ಊಟಕ್ಕೆ ಕರೆಯೋಕೆ ರೂಮ್​ಗೆ ಹೋದ್ವಿ. ರೂಮ್​ನಿಂದ ವಾಸನೆ ಬರುತಿತ್ತು. ಫೋನ್ ಮಾಡಿದ್ರೆ ರಿಸೀವ್ ಮಾಡ್ತಿರಲಿಲ್ಲ. ಬಾಗಿಲು ತೆಗೆಸಿ ನೋಡಿದರೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 29 ವರ್ಷದ ಗೌತಮ್ ನಾಲ್ಕೈದು ತಿಂಗಳಿಂದ ಖಿನ್ನತೆಯಲ್ಲಿದ್ದ.‌ ಆರು ತಿಂಗಳ ಹಿಂದೆ ಮದುವೆ ಮಾಡಿ ಅಂದಿದ್ದ. ಹೆಣ್ಣು ಹುಡುಕುತ್ತಾ ಇದ್ವಿ. ಹುಡುಗಿ ಫೋಟೋ ತೋರಿಸ್ತಿದ್ವಿ, ಮೊನ್ನೆ ಅಷ್ಟೇ ಒಂದು ಹುಡುಗಿಯ ಚೆನಾಗಿದ್ದಾಳೆ, ಅವರ ಮನೇಲಿ ಮಾತಾಡಿ ಅಂದಿದ್ದ. ಆದ್ರೆ ಈಗ ಹೀಗೆ ಮಾಡಿಕೊಂಡಿದ್ದಾನೆ. ಅವನು ಗುತ್ತಿಗೆದಾರ ಅಲ್ಲ. ಅವನ ಹತ್ತಿರ ಲೈಸೆನ್ಸ್ ಕೂಡ ಇರಲಿಲ್ಲ. ಈವರೆಗೆ ಏನ್ ಕೇಳಿ ಬಂದಿದೆ ಅದೆಲ್ಲಾ ಸುಳ್ಳು ಸುದ್ದಿ' ಎಂದು ದೊಡ್ಡಣ್ಣ ಹೇಳಿದ್ದಾರೆ.

ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಪ್ರತಿಕ್ರಿಯಿಸಿ, ದೊಡ್ಡಯ್ಯ ಅತ್ತಿಗುಪ್ಪೆ ಮಾಜಿ ಕಾರ್ಪೋರೇಟರ್ ಆಗಿದ್ದಾರೆ. ಇವರಿಗೆ ಮೂರು ಜನ ಮಕ್ಕಳಿದ್ದಾರೆ. ಗೌತಮ್ ಮೂರನೇ ಮಗ. ಪ್ರತಿ ದಿನ ಲೇಟ್ ಆಗಿ ಮನೆಗೆ ಬರ್ತಿದ್ದ‌ನಂತೆ. ನಿನ್ನೆ ಊಟಕ್ಕೆ ಕರೆದಾಗ ಆತ ಬಾಗಿಲು ಓಪನ್ ಮಾಡಿಲ್ಲ‌‌. ಆ ಬಳಿಕ ಡೋರ್ ತೆಗೆದು ನೋಡಿದಾಗ, ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸದ್ಯ ವೈಯಕ್ತಿಕ ವಿಚಾರಕ್ಕೆ ಅಂತ ಗೊತ್ತಾಗಿದೆ. ಡೆತ್ ನೋಟ್ ಏನೂ ಸಿಕ್ಕಿಲ್ಲ. ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡ್ತಿದ್ದೇವೆ ಎಂದಿದ್ದಾರೆ.

'ಗೌತಮ್ ಯಾವುದೇ ಗುತ್ತಿಗೆದಾರನಲ್ಲ. ಅವರ ಹೆಸರಲ್ಲಿ ಯಾವುದೇ ಪರವಾನಗಿ ಇಲ್ಲ. ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೌತಮ್​ಗೆ ಮದುವೆ ಮಾಡಲು ಎರಡು ತಿಂಗಳಿಂದ ಹೆಣ್ಣು ಹುಡುಕುತ್ತಿದ್ದೆವು. ಗುತ್ತಿಗೆದಾರ ಆತ್ಮಹತ್ಯೆಗೆ ಶರಣು ಎನ್ನುವುದು ಸುಳ್ಳು. ಬಿಜೆಪಿಯವರು ಪಿತೂರಿ ಮಾಡಿ ಸುಳ್ಳು ಮಾಹಿತಿ ನೀಡಿದ್ದಾರೆ. ನಾವು ಕಾಂಗ್ರೆಸ್ ಪಕ್ಷದವರು ನಮ್ಮ ವಿರುದ್ಧ ಬಿಜೆಪಿಯವರು ಪಿತೂರಿ ಮಾಡಿದ್ದಾರೆ' ಎಂದು ಮೃತನ ಸಂಬಂಧಿ ಆನಂದ್​ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ:Mandya crime: ಐಎಎಸ್​ ಕನಸು ನನಸಾಗಲಿಲ್ಲವೆಂದು ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆ!

Last Updated : Aug 10, 2023, 8:10 PM IST

ABOUT THE AUTHOR

...view details