ಕರ್ನಾಟಕ

karnataka

ETV Bharat / state

ಮುಂದುವರಿದ ಪಾಲಿಕೆಯ ಒತ್ತುವರಿ ತೆರವು ಕಾರ್ಯಾಚರಣೆ: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಜೆಸಿಬಿ ಆಪರೇಷನ್ - ಈಟಿವಿ ಭಾರತ ಕನ್ನಡ

ಬಿಬಿಎಂಪಿಯ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಮೂರು ಕಡೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

bbmp-enrcoachment-clearance-at-mahadevpur-zone
ಮುಂದುವರೆದ ಪಾಲಿಕೆಯ ಒತ್ತುವರಿ ತೆರವು ಕಾರ್ಯಾಚರಣೆ: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಜೆಸಿಬಿ ಆಪರೇಷನ್

By

Published : Sep 22, 2022, 7:57 PM IST

ಬೆಂಗಳೂರು : ಬಿಬಿಎಂಪಿ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಮುನ್ನೇನಕೊಳಲಿನ ಶಾಂತಿನಿಕೇತನ ಲೇಔಟ್ ನಲ್ಲಿ ಒಂದು ಅಂತಸ್ತಿನ ಕಟ್ಟಡ, ಪಾಪಯ್ಯ ರೆಡ್ಡಿ ಲೇಔಟ್ ನಲ್ಲಿ 4 ಅಂತಸ್ತಿನ ಕಟ್ಟಡ, ಸರ್ಜಾಪುರ ರಸ್ತೆಯ ಗ್ರೀನ್ ವುಡ್ ರೆಸಿಡೆನ್ಸಿ ಬಳಿ ಸ್ಲ್ಯಾಬ್ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ತೆರವು ಕಾರ್ಯಾಚರಣೆ: ಮುನ್ನೇನಕೊಳಲು ಬಳಿಯ ಶಾಂತಿ ನಿಕೇತನ ಲೇಔಟ್ ನಲ್ಲಿ ಒಂದು ಅಂತಸ್ತಿನ ಕಟ್ಟಡ(ಗ್ರೌಂಡ್ + 1)ವನ್ನು ರಾಜಕಾಲುವೆ ಮೇಲೆ ನಿರ್ಮಾಣ ಮಾಡಿಕೊಂಡಿರುತ್ತಾರೆ. ಈ ಪೈಕಿ ಈಗಾಗಲೇ ಮನೆಯಲ್ಲಿ ವಾಸವಿದ್ದವರಿಗೆ ಕೂಡಲೇ ಮನೆಯನ್ನು ಖಾಲಿ ಮಾಡಲು ಕಂದಾಯ ಇಲಾಖೆಯ ತಹಶೀಲ್ದಾರ್ ವತಿಯಿಂದ ನೋಟಿಸ್ ನೀಡಲಾಗಿತ್ತು. ಅದರಂತೆ ಮನೆಯಲ್ಲಿದ್ದವರು ಖಾಲಿ ಮಾಡಿದ ಬಳಿಕ ಇಂದು ಹಿಟಾಚಿ ಮೂಲಕ ಸಂಪೂರ್ಣ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ.

ಪಾಪಯ್ಯ ರೆಡ್ಡಿ ಲೇಔಟ್ ನಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದ 4 ಅಂತಸ್ತಿನ ಕಟ್ಟಡ(ಗ್ರೌಂಡ್ + 4)ವನ್ನು ಸೆಪ್ಟೆಂಬರ್ 13 ರಂದು ರಂದು ಕಾಂಪೌಂಡ್ ಗೋಡೆಯನ್ನು ಒಡೆದು ಮನೆಯಲ್ಲಿ ವಾಸವಿರುವವರಿಗೆ ಬೇರೆಡೆ ಸ್ಥಳಾಂತರವಾಗಲು ಕಂದಾಯ ಇಲಾಖೆಯ ತಹಶೀಲ್ದಾರ್ ವತಿಯಿಂದ ನೋಟಿಸ್ ನೀಡಲಾಗಿತ್ತು.

ಆ ಬಳಿಕ ಮನೆಯಲ್ಲಿ ವಾಸವಿದ್ದವರೆಲ್ಲರೂ ಖಾಲಿ ಮಾಡಿದ ನಂತರ ಇಂದು ಹಿಟಾಚಿ ಮೂಲಕ ಕಟ್ಟಡ ಮುಂಭಾಗದ ಕೆಲಭಾಗವನ್ನು ತೆರವುಗೊಳಿಸಲಾಗಿರುತ್ತದೆ. ಸದರಿ ಕಟ್ಟಡವನ್ನು ಹಿಟಾಚಿ ಮೂಲಕ ತೆರವುಗೊಳಿಸಲು ಮುಂದಾದಲ್ಲಿ ಅಕ್ಕ ಪಕ್ಕದ ಮನೆಗಳಿಗೆ ಹಾನಿಯಾಗುವ ಸಂಭವವಿದೆ. ಆದ್ದರಿಂದ ಸಿಬ್ಬಂದಿಯ ಮೂಲಕ ಅವಶ್ಯಕ ಸಲಕರಣೆಗಳನ್ನು ಬಳಸಿಕೊಂಡು ಸಂಪೂರ್ಣ ಕಟ್ಟಡವನ್ನು ನೆಲಸಮಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.

ಮುಂದುವರೆದ ಪಾಲಿಕೆಯ ಒತ್ತುವರಿ ತೆರವು ಕಾರ್ಯಾಚರಣೆ: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಜೆಸಿಬಿ ಆಪರೇಷನ್

ಸ್ಲ್ಯಾಬ್ ತೆರವು ಕಾರ್ಯ ಮುಂದುವರಿಕೆ :ಸರ್ಜಾಪುರ ರಸ್ತೆಯ ಗ್ರೀನ್ ಹುಡ್ ರೆಸಿಡೆನ್ಸ್ ಬಳಿ ಮಳೆ ನೀರುಗಾಲುವೆಯ ಮೇಲೆ ಅಳವಡಿಸಿದ್ದ ಸ್ಲ್ಯಾಬ್ ನ ತೆರವು ಕಾರ್ಯಾ ಬಹುತೇಕ ಪೂರ್ಣಗೊಂಡಿದ್ದು, ಸ್ಲ್ಯಾಬ್ ಗೆ ಅಳವಡಿಸಿರುವ ಕಬ್ಬಿಣದ ಕಂಬಿಗಳನ್ನು ತೆರವುಗೊಳಿಸಬೇಕಿದೆ. ಜೊತೆಗೆ ಮಳೆ ನೀರುಗಾಲುವೆಯ ಮೇಲೆ ಅಳವಡಿಸಿರುವ ಸ್ಲ್ಯಾಬ್ ಮೇಲ್ಭಾಗದಲ್ಲಿ ಹಸಿರೀಕರಣ ಮಾಡಿದ್ದು, ಅದನ್ನು ತೆರವುಗೊಳಿಸಿ ನಂತರ ಬಾಕಿಯಿರುವ ಸ್ಲ್ಯಾಬ್ ತೆರವು ಕಾರ್ಯ ನಡೆಯಲಿದೆ. ಇನ್ನು ಮಾರತಹಳ್ಳಿ ಪೊಲೀಸ್ ಠಾಣೆಯ ಹಿಂಭಾಗ, ಜಲಮಂಡಳಿ ಎಸ್.ಟಿ.ಪಿ ಬಳಿ ರಾಜಕಾಲುವೆಯ ಮೇಲೆ ನಿರ್ಮಾಣ ಮಾಡಿರುವ ಸೇತುವೆ ತೆರವು ಕಾರ್ಯಾಚರಣೆ ಪೂರ್ಣಗೊಳಿಸಲಾಗಿದೆ ಎಂದು ಪಾಲಿಕೆ ಮಾಹಿತಿ ನೀಡಿದೆ.

ವಲಯ ಆಯುಕ್ತ ಸ್ಥಳದಲ್ಲಿ ಉಪಸ್ಥಿತಿ :ಮುನ್ನೇನಕೊಳಲು, ಪಾಪಯ್ಯ ರೆಡ್ಡಿ ಲೇಔಟ್ ನಲ್ಲಿ 4 ಅಂತಸ್ತಿನ ಕಟ್ಟಡ(ಗ್ರೌಂಡ್ + 4) ತೆರವು ಕಾರ್ಯಾಚರಣೆಯ ವೇಳೆ ಮಹದೇವಪುರ ವಲಯ ಆಯುಕ್ತ ಡಾ. ತ್ರಿಲೋಕ್ ಚಂದ್ರ, ವಲಯ ಜಂಟಿ ಆಯುಕ್ತ ವೆಂಕಟಾಚಲಪತಿ, ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ ಉಪಸ್ಥಿತರಿದ್ದರು.

ಈ ವೇಳೆ, ವಲಯ ಆಯುಕ್ತರಾದ ಡಾ. ತ್ರಿಲೋಕ್ ಚಂದ್ರ ಶಾಂತಿನಿಕೇತನ ಹಾಗೂ ಪಾಪಯ್ಯ ರೆಡ್ಡಿ ಲೇಔಟ್ ನಲ್ಲಿ ಸುಮಾರು 500 ಮೀಟರ್ ನಷ್ಟು ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದು, ಬಾಕಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅದಕ್ಕಾಗಿ ಅವಶ್ಯಕ ಯಂತ್ರೋಪಕರಣಗಳು ಹಾಗೂ ಸಿಬ್ಬಂದಿ ನಿಯೋಜನೆ ಮಾಡಿಕೊಂಡು ತ್ವರಿತವಾಗಿ ಕಾರ್ಯನಿರ್ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಒತ್ತುವರಿ ತೆರವು ಕಾರ್ಯಾಚರಣೆ ಮಾಡಿರುವ ಸ್ಥಳಗಳಲ್ಲಿ ಬೃಹತ್ ಮಳೆ ನೀರುಗಾಲುವೆ ವಿಭಾಗದ ಕೂಡಲೇ ಕಾಲುವೆ ನಿರ್ಮಾಣ ಮಾಡಲು ಅಗತ್ಯ ಕ್ರಮಗಳ್ನು ಕೈಗೊಳ್ಳಲು ಸೂಚನೆ ನೀಡಿದರು.

ಇದನ್ನೂ ಓದಿ :ರಾಜ್ಯಾದ್ಯಂತ ಯಾವುದೇ ಮುಲಾಜಿಲ್ಲದೇ ಒತ್ತುವರಿ ತೆರವು: ಸಚಿವ ಭೈರತಿ ಬಸವರಾಜ

ABOUT THE AUTHOR

...view details