ಬೆಂಗಳೂರು:ಜಯಮಹಲ್ ಪ್ಯಾಲೇಸ್ ಸಭಾಂಗಣದಲ್ಲಿ ಬಿಬಿಎಂಪಿ ನೌಕರರ ಸಹಕಾರ ಸಂಘದ 2023-2028 ನೇ ಸಾಲಿನ ಆಡಳಿತ ಮಂಡಳಿ ಚುನಾವಣೆ ಮತಯಾಚನೆ ಮತ್ತು ಬಹಿರಂಗ ಪ್ರಚಾರ ಕಾರ್ಯಕ್ರಮ ನಡೆಯಿತು. ಅಧ್ಯಕ್ಷ ಎ. ಅಮೃತ್ ರಾಜ್ ಮತ್ತು ಕೆ. ಜಿ. ರವಿ ನೇತೃತ್ವದ ತಂಡದಲ್ಲಿ ಸಿ.ಎಂ. ಮುನಿರಾಜು, ಎಂ ಮಹೇಶ್ ಮತ್ತು ಎಲ್.ಆರ್ ಮಂಜುನಾಥ್ ಹಾಗೂ ಎನ್ ಹರೀಶ್ ಕುಮಾರ್, ವಿನಯಕುಮಾರ್ 7 ಸಾಮಾನ್ಯ ವರ್ಗದಲ್ಲಿ ಹಾಗೂ ಕೆ.ಎನ್. ಗಂಗಾಧರ್ (ಲಾಲಿ) ಒಂದು ಪರಿಶಿಷ್ಟ ಜಾತಿ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.
ಇದೇ ಭಾನುವಾರ 17ನೇ ತಾರೀಖು ಬಿಬಿಎಂಪಿ ಕೇಂದ್ರ ಕಚೇರಿ ಡಾ. ರಾಜ್ ಕುಮಾರ್ ಗಾಜಿನಮನೆ ಅವರಣದಲ್ಲಿ ಮತದಾನ ಜರುಗಲಿದ್ದು, ನೌಕರರ ಸಹಕಾರ ಸಂಘದಲ್ಲಿ 2600ಕ್ಕೂ ಮತದಾರರು ಇದ್ದಾರೆ. ಈ ಕುರಿತು ಎ. ಅಮೃತ್ ರಾಜ್ ಮಾತನಾಡಿ, 1914ರಲ್ಲಿ ಬಿಬಿಎಂಪಿ ನೌಕರರ ಸಹಕಾರ ಸಂಘ ಸ್ಥಾಪನೆಯಾಯಿತು. 111ವರ್ಷಗಳ ಇತಿಹಾಸವಿದೆ. ಕಳೆದ ಐದು ವರ್ಷ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ ಮತ್ತು ಐದು ವರ್ಷದ ಆಡಳಿತ ತೃಪ್ತಿ ಇದೆ ಎಂದಿದ್ದಾರೆ.
ಸದಸ್ಯರಿಗೆ ಶೇಕಡ 13ರಷ್ಟು ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಆಡಳಿತ ನಿರ್ವಹಣೆ ವೆಚ್ಚ ಕಡಿಮೆ ಮಾಡಿ, ಸಂಘ ಲಾಭದತ್ತ ಸಾಗಿದೆ. ಸದಸ್ಯರಿಗೆ ದೀರ್ಘಾವಧಿ ಮತ್ತು ಅಲ್ಪಾವಧಿ ಸಾಲ ನೀಡಲಾಗುತ್ತಿದೆ. 2 ಲಕ್ಷದಿಂದ 5ಲಕ್ಷವರೆಗೆ ಸಾಲ ಸೌಲಭ್ಯವಿದೆ. ಸಾಲ ಪಡೆಯಲು ಅರ್ಜಿ ಸಲ್ಲಿಸಿದ ಸದಸ್ಯರಿಗೆ ತಕ್ಷಣ ಸಾಲ ಮಂಜೂರು ಮಾಡಲಾಗುತ್ತಿದೆ ಎಂದು ಹೇಳಿದರು.