ಕರ್ನಾಟಕ

karnataka

ETV Bharat / state

ಇದೇ ತಿಂಗಳು ಬಿಬಿಎಂಪಿ ಮೇಯರ್​​​-ಉಪ ಮೇಯರ್​​ ಚುನಾವಣೆ? - ಪ್ರಾದೇಶಿಕ ಚುನಾವಣೆ ಆಯೋಗ

ಸೆಪ್ಟಂಬರ್ 27ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್-ಉಪ ಮೇಯರ್ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಈಗಾಗಲೇ ಪ್ರಾದೇಶಿಕ ಚುನಾವಣೆ ಆಯೋಗ ಸಿದ್ಧತೆ ಕೈಗೆತ್ತಿಕೊಂಡಿದೆ.

ಬಿಬಿಎಂಪಿ ಚುನಾವಣೆ

By

Published : Sep 12, 2019, 4:51 PM IST

ಬೆಂಗಳೂರು: ಇದೇ ತಿಂಗಳಲ್ಲಿ ಬಿಬಿಎಂಪಿ ಮೇಯರ್-ಉಪ ಮೇಯರ್ ಚುನಾವಣೆ ನಡೆಯಲಿದ್ದು, ಸೆಪ್ಟೆಂಬರ್ 27ಕ್ಕೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ.

ಬಿಬಿಎಂಪಿ ಚುನಾವಣೆ

ಮೇಯರ್ ಗಂಗಾಂಬಿಕೆ ಹಾಗೂ ಉಪ ಮೇಯರ್ ಭದ್ರೇಗೌಡ ಅವಧಿ ಸೆಪ್ಟೆಂಬರ್ 28ಕ್ಕೆ ಮುಗಿಯಲಿದ್ದು, ನೂತನ ಮೇಯರ್ ಆಯ್ಕೆಗೆ ಈಗಾಗಲೇ ಪ್ರಾದೇಶಿಕ ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ಪ್ರಾದೇಶಿಕ ಚುನಾವಣಾ ಆಯುಕ್ತ ಹರ್ಷಗುಪ್ತ ಈಗಾಗಲೇ ಪಾಲಿಕೆಯಿಂದ ಮತದಾರರ ಪಟ್ಟಿ ತರಿಸಿ, ಚುನಾವಣಾ ಸಿದ್ಧತೆ ಕೈಗೊಂಡಿದ್ದಾರೆ ಎನ್ನಲಾಗಿದೆ.

ಇನ್ನು ನಿಗದಿಯಾದ ದಿನಾಂಕವನ್ನು ಅಧಿಕೃತವಾಗಿ ಪ್ರಕಟಣೆ ಮಾಡುವುದಷ್ಟೇ ಬಾಕಿ ಇದೆ.ಇನ್ನೂ ನಗರಾಭಿವೃದ್ಧಿ ಇಲಾಖೆಯಿಂದ ಸೂಚನೆ ಬಂದಿಲ್ಲ. ಅದು ಬಂದ ಬಳಿಕ ಚುನಾವಣೆ ದಿನಾಂಕ ನಿಗದಿಯಾಗಲಿದೆ ಎಂದು ಬಿಬಿಎಂಪಿ ಕೌನ್ಸಿಲ್ ಕಾರ್ಯದರ್ಶಿ ಪಲ್ಲವಿ ತಿಳಿಸಿದ್ದಾರೆ.

ಸ್ಥಾಯಿ ಸಮಿತಿಗಳ ಚುನಾವಣೆಯೂ ಸೆಪ್ಟೆಂಬರ್​​ನಲ್ಲಿ ನಡೆಸಬೇಕಾ ಅಥವಾ ಒಂದು ವರ್ಷ ಪೂರ್ಣಗೊಂಡ ಬಳಿಕ ಡಿಸೆಂಬರ್​​​ನಲ್ಲಿ ಚುನಾವಣೆ ನಡೆಸಬೇಕಾ ಎಂಬ ಗೊಂದಲವಿದ್ದು, ಬಿಜೆಪಿ ಹಾಗೂ ಮೈತ್ರಿ ಪಕ್ಷಗಳ ನಡುವೆ ಪೈಪೋಟಿ ಆರಂಭವಾಗಿದೆ ಎನ್ನಲಾಗಿದೆ.

ABOUT THE AUTHOR

...view details