ಕರ್ನಾಟಕ

karnataka

ETV Bharat / state

ಪಾಲಿಕೆಯಿಂದ 5 ವರ್ಷಗಳ ನಂತರ ಬೀದಿ ಬದಿ ವ್ಯಾಪಾರಿಗಳು, ಮಾರಾಟ ಪ್ರದೇಶಗಳ ಸಮೀಕ್ಷೆ - Etv Bharata Kannada

5 ವರ್ಷಗಳ ನಂತರ ಬಿಬಿಎಂಪಿ ಬೀದಿ ಬದಿ ವ್ಯಾಪಾರಿಗಳು ಮತ್ತು ಮಾರಾಟ ಪ್ರದೇಶಗಳ ಸಮೀಕ್ಷೆ ನಡೆಸಲು ಸಿದ್ದತೆ ನಡೆಸಿದೆ.

KN_BNG
ಬಿಬಿಎಂಪಿ

By

Published : Nov 30, 2022, 8:00 PM IST

ಬೆಂಗಳೂರು: ರಾಜಧಾನಿಯಲ್ಲಿ ಬರೋಬ್ಬರಿ 5 ವರ್ಷಗಳ ನಂತರ ಬೀದಿ ಬದಿ ವ್ಯಾಪಾರಿಗಳು ಮತ್ತು ಮಾರಾಟ ಪ್ರದೇಶಗಳ ಸಮೀಕ್ಷೆಗೆ ಬಿಬಿಎಂಪಿ ಸಿದ್ಧತೆ ನಡೆಸಿದ್ದು, ಇದಕ್ಕಾಗಿ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಪಿಎಸ್‌) ಆಧಾರಿತ ಅಪ್ಲಿಕೇಶನ್‌ಗಳನ್ನು ಬಳಸಲಾಗುತ್ತಿದೆ.

ಸಮೀಕ್ಷೆ ನಡೆಸುವ ಮೊದಲು, ಬೀದಿ ವ್ಯಾಪಾರಿಗಳ ಸಂಘಗಳೊಂದಿಗೆ ಸಭೆ ನಡೆಸಲಾಗುತ್ತದೆ. ಅದಾದ ನಂತರ ಮಾರಾಟಗಾರರು ಮತ್ತು ವ್ಯಾಪಾರದ ಪ್ರದೇಶಗಳನ್ನು ಗುರುತಿಸಲು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಪಿಎಸ್‌) ಆಧಾರಿತ ಅಪ್ಲಿಕೇಶನ್‌ಗಳನ್ನು ಬಳಕೆ ಮಾಡಲಿದೆ. ಪಾಲಿಕೆ ಸಮೀಕ್ಷಾ ತಂಡವು ಬೀದಿ ಬದಿಯಲ್ಲಿ ವ್ಯಾಪಾರ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ವ್ಯಾಪಾರಿಗಳ ಸಂಪೂರ್ಣ ಮಾಹಿತಿ ಹಾಗೂ ದಾಖಲೆಗಳನ್ನು ಕಲೆ ಹಾಕಲಿದೆ.

ಮೊಹಲ್ಲಾ,‌ ರಸ್ತೆ, ಗಲ್ಲಿ, ಓಣಿ, ಫುಟ್‌ಪಾತ್‌, ಸಾರ್ವಜನಿಕ ಉದ್ಯಾನ ಸೇರಿದಂತೆ ಇನ್ನಿತರ ಕಡೆ ನಿಗದಿತ ಸ್ಥಳಗಳಲ್ಲಿ ವ್ಯಾಪಾರಸ್ಥರ ಪಟ್ಟಿ ಸಿದ್ಧಗೊಂಡ ನಂತರ ಅವರಿಗೆ ಗುರುತಿನ ಚೀಟಿ, ಪ್ರಮಾಣ ಪತ್ರ ನೀಡಲಾಗುತ್ತದೆ. ಈ ಸಮೀಕ್ಷೆಯು ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ನಡೆಸಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆ ಅಧಿಕಾರಿಯೊಬ್ಬರು, ಬೀದಿ ವ್ಯಾಪಾರಿಗಳ (ಜೀವ ರಕ್ಷಣೆ ಮತ್ತು ಬೀದಿ ವ್ಯಾಪಾರದ ನಿಯಂತ್ರಣ) ಕಾಯ್ದೆ, 2014ರ ಪ್ರಕಾರ ನಗರದೊಳಗೆ ಮಾರಾಟ ವಲಯಗಳನ್ನು ಒದಗಿಸುತ್ತದೆ. ಶೇ.40ಕ್ಕಿಂತ ಹೆಚ್ಚು ಬೀದಿ ವ್ಯಾಪಾರಿಗಳ ಪ್ರಾತಿನಿಧ್ಯ ಹೊಂದಿರುವ ಪಟ್ಟಣ, ಮಾರಾಟ ಸಮಿತಿಯನ್ನು ರಚಿಸಬೇಕು ಎನ್ನುವುದು ಈ ಕಾಯ್ದೆಯ ನಿಯಮವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಕರ್ನಾಟಕ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ

ABOUT THE AUTHOR

...view details