ಕರ್ನಾಟಕ

karnataka

ETV Bharat / state

ಕೋವಿಡ್ ನಿಯಂತ್ರಣಕ್ಕೆ 'ಫಿಜಿಕಲ್ ಟ್ರಯಾಜಿಂಗ್' ನಡೆಸಲು ಬಿಬಿಎಂಪಿ ಸಿದ್ಧತೆ - ಕೋವಿಡ್ ನಿಯಂತ್ರಣಕ್ಕೆ ಫಿಜಿಕಲ್ ಟ್ರಯಾಜಿಂಗ್

ಸದ್ಯ ನಗರದಲ್ಲಿ ಕೋವಿಡ್​​ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಫಿಜಿಕಲ್ ಟ್ರಯಾಜಿಂಗ್​​ ಮಾಡಲು ಆರಂಭಿಸಿದೆ. ದಿನನಿತ್ಯ 3 ಸಾವಿರಕ್ಕೂ ಹೆಚ್ಚು ಜನರಿಗೆ ತಪಾಸಣೆ ಮಾಡುವ ಗುರಿ ಹೊಂದಲಾಗಿದೆ..

BBMP
ಬಿಬಿಎಂಪಿ

By

Published : Jan 23, 2022, 2:06 PM IST

ಬೆಂಗಳೂರು :ರಾಜಧಾನಿಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಬಿಬಿಎಂಪಿ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಕೆಮ್ಮು, ಶೀತ, ಜ್ವರದಂತಹ ಲಕ್ಷಣಗಳಿರುವವರ ಮನೆ ಮನೆಗೆ ತೆರಳಿ ಪರೀಕ್ಷೆ ನಡೆಸಲು ಮುಂದಾಗಿದೆ.

198 ವಾರ್ಡ್​ಗಳಲ್ಲಿ ಫಿಜಿಕಲ್ ಟ್ರಯಾಜಿಂಗ್ ನಡೆಸಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಿದೆ. ಕೋವಿಡ್ 2ನೇ ಅಲೆಯ ತೀವ್ರತೆ ಸಂದರ್ಭದಲ್ಲಿ ಟ್ರಯಾಜಿಂಗ್ ಆರಂಭಿಸಲಾಗಿತ್ತು. ಬಳಿಕ 2ನೇ ಅಲೆಯ ತೀವ್ರತೆ ಕಡಿಮೆಯಾದಾಗ ಸ್ಥಗಿತಗೊಳಿಸಲಾಗಿತ್ತು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಸದ್ಯ ನಗರದಲ್ಲಿ ಕೋವಿಡ್​​ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಫಿಜಿಕಲ್ ಟ್ರಯಾಜಿಂಗ್​​ ಮಾಡಲು ಆರಂಭಿಸಿದೆ. ದಿನನಿತ್ಯ 3 ಸಾವಿರಕ್ಕೂ ಹೆಚ್ಚು ಜನರಿಗೆ ತಪಾಸಣೆ ಮಾಡುವ ಗುರಿ ಹೊಂದಲಾಗಿದೆ.

ಈ ಟ್ರಯಾಜಿಂಗ್‍ನಲ್ಲಿ ರೋಗಿಗಳಿಗೆ ರೋಗ ಲಕ್ಷಣಗಳು ಹೆಚ್ಚಾಗಿ ಕಂಡು ಬಂದರೆ ಆಸ್ಪತ್ರೆಗೆ ದಾಖಲು ಮಾಡಲಾಗುವುದು ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಇದನ್ನೂ ಓದಿ:ಕೋವಿಡ್ 3ನೇ ಅಲೆ ಅಪಾಯಕಾರಿ ಅಲ್ಲವೇ ಅಲ್ಲ ಅಂತಿವೆ ಅಂಕಿ-ಅಂಶಗಳು!

For All Latest Updates

TAGGED:

ABOUT THE AUTHOR

...view details