ಕರ್ನಾಟಕ

karnataka

ETV Bharat / state

ವಲಯವಾರು ಲೇಬರ್ ಟೆಂಡರ್ ಕರೆಯಲು ಬಿಬಿಎಂಪಿ ಆಯುಕ್ತರ ಸೂಚನೆ - ಬೆಂಗಳೂರು ರಸ್ತೆ ಗುಂಡಿ ಬಗ್ಗೆ ಬಿಬಿಎಂಪಿ ಆಯುಕ್ತರ ಸಭೆ

ಬೆಂಗಳೂರಿನಲ್ಲಿ ಸಮರ್ಪಕವಾಗಿ ರಸ್ತೆ ಗುಂಡಿ ಮುಚ್ಚುವುದರ ಬಗ್ಗೆ ಹಾಗೂ ಪ್ರಗತಿ ಪರಿಶೀಲನೆ ಬಗ್ಗೆ ಬಿಬಿಎಂಪಿ ಆಯುಕ್ತರು ಸಭೆ ನಡೆಸಿ ಚರ್ಚೆ ನಡೆಸಿದರು.

bbmp-commissioners-meeting-on-road-work
ಬಿಬಿಎಂಪಿ

By

Published : Aug 30, 2020, 3:33 AM IST

ಬೆಂಗಳೂರು:ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು ಸೆಪ್ಟೆಂಬರ್ ತಿಂಗಳಾಂತ್ಯದವರೆಗೆ ಗಡುವು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಎಂಜಿನಿಯರ್​​ಗಳ ಸಭೆ ನಡೆಸಿದರು.

ಆಯುಕ್ತರು ಸಮರ್ಪಕವಾಗಿ ರಸ್ತೆ ಗುಂಡಿ ಮುಚ್ಚುವುದರ ಬಗ್ಗೆ ಹಾಗೂ ಪ್ರಗತಿ ಪರಿಶೀಲನೆ ಬಗ್ಗೆ ಚರ್ಚೆ ನಡೆಸಿದರು. ಇನ್ನು ಮುಂದೆ ರಸ್ತೆಗುಂಡಿ ಮುಚ್ಚಲು ವಿಧಾನಸಭಾ ಕ್ಷೇತ್ರವಾರು ಸ್ಥಳೀಯರ‌‌ನ್ನೇ ಬಳಸಿಕೊಳ್ಳಲು ಕ್ಷೇತ್ರವಾರು ಟೆಂಡರ್ ಕರೆಯಲು ನಿರ್ಧರಿಸಲಾಗಿದೆ ಎಂದು ಈಟಿವಿ ಭಾರತಕ್ಕೆ ಮುಖ್ಯ ಎಂಜಿನಿಯರ್​​ ಬಿ.ಎನ್. ಪ್ರಹ್ಲಾದ್ ತಿಳಿಸಿದ್ದಾರೆ.

ಬಿಬಿಎಂಪಿ ಆಯುಕ್ತರ ಸಭೆ

ವೈಜ್ಞಾನಿಕವಾಗಿ ರಸ್ತೆ ಗುಂಡಿ ಮುಚ್ಚುವುದರ ಜೊತೆಗೆ ಮುಂದಿನ ದಿನಗಳಲ್ಲಿ ರಸ್ತೆ ಗುಂಡಿಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಲು ವಲಯವಾರು ಲೇಬರ್ ಟೆಂಡರ್ ಕರೆಯಲು ಆಯುಕ್ತರು ಸೂಚನೆ ನೀಡಿದ್ದಾರೆ. ಹೀಗಾಗಿ 27 ಕ್ಷೇತ್ರಗಳಿಗೂ ಡಾಂಬರ್​, ಯಂತ್ರಗಳು, ಸಿಬ್ಬಂದಿ ನಿಯೋಜಿಸುವುದು ಸವಾಲಾಗುವ ಹಿನ್ನಲೆ, ಕ್ಷೇತ್ರವಾರು ಟೆಂಡರ್ ಕರೆಯಲಾಗುವುದು. ಡಾಂಬರ್​ನ್ನು ಮಾತ್ರ ಪಾಲಿಕೆಯ ಕೇಂದ್ರದಿಂದ ಹಂಚಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ರಸ್ತೆ ಮಾಹಿತಿ:

ನಗರದ ಒಟ್ಟು ರಸ್ತೆಗಳು- 474

ಒಟ್ಟು ರಸ್ತೆಗಳ ಉದ್ದ- 1,323 ಕಿ.ಮೀ

ರಸ್ತೆ ಗುಂಡಿ ಮುಕ್ತವಾದ ರಸ್ತೆ- 354

ಇನ್ನೂ ಬಾಕಿ ಇರುವ ರಸ್ತೆ- 459

ದುರಸ್ತಿ ಮಾಡಬೇಕಾದ ರಸ್ತೆ- 234

ರಸ್ತೆಗುಂಡಿ ಅಗೆಯಲಾಗಿರುವ ರಸ್ತೆ-236

ABOUT THE AUTHOR

...view details