ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 243 ವಾರ್ಡ್ ಮರು ವಿಂಗಡಣೆಯ ಕರಡು ಅಧಿಸೂಚನೆ ಬಿಡುಗಡೆಯಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ, ಕೆಲ ಕ್ಷೇತ್ರಗಳಲ್ಲಿ ವಾರ್ಡ್ಗಳ ಸಂಖ್ಯೆ ಹೆಚ್ಚಳವಾಗಿದೆ. ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ವಾರ್ಡ್ಗಳ ಸಂಖ್ಯೆ ಕಡಿಮೆಯಾಗಿದೆ. ಇನ್ನೂ ಕೆಲ ಕ್ಷೇತ್ರಗಳಲ್ಲಿ ವಾರ್ಡ್ಗಳ ಸಂಖ್ಯೆ ಯಥಾಸ್ಥಿತಿ ಇದೆ. ಜಂಟಿ ಆಯುಕ್ತರ ಕಚೇರಿಯಲ್ಲಿ ಮಾಹಿತಿ ಸಿಗಲಿದೆ.
ಮುಂದಿನ 15 ದಿಗಳಲ್ಲಿ ಸಾರ್ವಜನಿಕರು ಆನ್ ಲೈನ್ ಮೂಲಕ ಹಾಗೂ ನೇರವಾಗಿ ನಗರಾಭಿವೃದ್ಧಿ ಇಲಾಖೆಯ ಕಚೇರಿಗೆ ಆಕ್ಷೇಪಣೆ ಕಳುಹಿಸಬಹುದು. 2011ರ ಜನಗಣತಿ ಆಧಾರದ ಮೇಲೆ 198 ರಿಂದ 243 ವಾರ್ಡ್ಗೆ ಹೆಚ್ಚಿಸಿ ವಿಂಗಡನೆ ಮಾಡಲಾಗಿದೆ ಎಂದು ಹೇಳಿದರು.