ಬೆಂಗಳೂರು: ನಗರದ ಸ್ವಚ್ಛತೆ ಬಗ್ಗೆ ಸಾರ್ವಜನಿಕರು ಪ್ರತಿಕ್ರಿಯೆ ನೀಡದೇ ಇರುವುದು ಬಹಳ ದುಃಖದ ಸಂಗತಿ ಎಂದು ಬಿಬಿಎಂಪಿ ಆಯುಕ್ತ ಬಿ ಹೆಚ್ ಅನಿಲ್ ಕುಮಾರ್ ಈಟಿವಿ ಭಾರತ್‌ಗೆ ನೀಡಿದ ಹೇಳಿಕೆಯಲ್ಲಿ ಬೇಸರ ಹೊರ ಹಾಕಿದ್ದಾರೆ.
ಬೆಂಗಳೂರಿಗರಲ್ಲಿ ಎದ್ದು ಕಾಣುತ್ತಿದೆ ನಗರಾಭಿಮಾನದ ಕೊರತೆ..! ಬಿಬಿಎಂಪಿ ಆಯುಕ್ತರ ಬೇಸರ - BBMP Commissioner news
ಸಣ್ಣಪುಟ್ಟ ನಗರಗಳಲ್ಲಿ ಲಕ್ಷಾಂತರ ಜನ ಅಭಿಪ್ರಾಯ ನೀಡಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಕೇವಲ ಹತ್ತು ಸಾವಿರ ಜನ ಪ್ರತಿಕ್ರಿಯೆ ನೀಡಿರುವುದು ದುಃಖದ ಸಂಗತಿ. ಈಗಲಾದರೂ ಒಂದು ನಿಮಿಷದ ಆನ್ಲೈನ್ ಸರ್ವೇಗೆ ಪ್ರತಿಕ್ರಿಯೆ ನೀಡಬೇಕು ಎಂದು ಮನವಿ ಮಾಡಿದರು.
ಸ್ವಚ್ಛ ಸರ್ವೇಕ್ಷಣೆಗಾಗಿ ನಗರದ ಬ್ಲಾಕ್ ಸ್ಪಾಟ್ ತೆರವುಗೊಳಿಸೋದು, ಮೂತ್ರ ವಿಸರ್ಜಿಸದಂತೆ ರಸ್ತೆ ಬದಿಯಲ್ಲಿ ಬೃಹತ್ ಕನ್ನಡಿಗಳನ್ನು ಅಳವಡಿಸುವುದು ಸೇರಿ ಸಾಕಷ್ಟು ಕ್ರಮಗಳನ್ನು ಬಿಬಿಎಂಪಿ ಕೈಗೊಂಡಿದೆ. ಆದರೆ, ಕೇಂದ್ರದ ತನಿಖಾ ತಂಡ ಎರಡು ವಿಚಾರಗಳನ್ನು ಪ್ರಮುಖವಾಗಿ ಗಮನಿಸಲಿದೆ. ಒಂದು ಬೆಂಗಳೂರು ನೋಡುವುದಕ್ಕೆ ಎಷ್ಟು ಸ್ವಚ್ಛವಾಗಿದೆ ಎನ್ನುವುದು. ಇನ್ನೊಂದು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವುದು.